| ದೇವರಾಜ್ ಎಲ್.ಬೆಂಗಳೂರು :ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿ, ಲಕ್ಷಾಂತರ ರೂಪಾಯಿಗೆ ಇಂಜಿನಿಯರಿಂಗ್ ಸೀಟುಗಳನ್ನು ಮಾರಾಟ ಮಾಡುವ ‘ಬ್ಲಾಕಿಂಗ್ ದಂಧೆ’ಗೆ ಕಡಿವಾಣ ಹಾಕಲು ಸರ್ಕಾರ ಸಜ್ಜಾಗಿದೆ. ಸೀಟು ಬ್ಲಾಕ್ ಮಾಡಿ ಕೊನೆಕ್ಷಣದಲ್ಲಿ ರದ್ದುಪಡಿಸುವ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕದ 5 ಪಟ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ.
ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಅಧಿನಿಯಮ 2006 ನಿಯಮಕ್ಕೆ ತಿದ್ದುಪಡಿ ಮಾಡಿ ಹೊಸ ಅಧಿನಿಯಮ ಜಾರಿಗೆ ತರಲಾಗುತ್ತಿದ್ದು, ಇದು 2020-21ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಸದ್ಯ ಉನ್ನತ ಶಿಕ್ಷಣ ಇಲಾಖೆ ಹೊಸ ಅಧಿನಿಯಮಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನಿಸಿದ್ದು, 15 ದಿನಗಳ ಕಾಲಾವಕಾಶ ನೀಡಿದೆ.
ಚಾಯ್ಸ್​ ಎಡವಟ್ಟು
ವಿದ್ಯಾರ್ಥಿಗಳು ಕೆಇಎ ನೀಡುವ ಸೂಚನೆಗಳನ್ನು ಪಾಲಿಸದೆ 4 ಚಾಯ್್ಸಳಲ್ಲಿ ಬೇಕಾಬಿಟ್ಟಿ ಆಯ್ಕೆ ಮಾಡುವುದರಿಂದಲೂ ಸೀಟ್ ಬ್ಲಾಕಿಂಗ್​ಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗಾಗಿ ಆಯ್ಕೆ ಮಾಡುವಾಗ ಎಚ್ಚರ ಇರಬೇಕು. ಏಕೆಂದರೆ, ಒಮ್ಮೆ ಚಾಯ್್ಸ ಆಯ್ಕೆ ಮಾಡಿದಲ್ಲಿ ತಿದ್ದುಪಡಿಗೆ ಅವಕಾಶ ನೀಡುವುದಿಲ್ಲ.
ಯಾವ ಚಾಯ್ಸ್​ ಏನು ಹೇಳುತ್ತದೆ?
1
ಸಿಕ್ಕ ಸೀಟು ತೃಪ್ತಿಕರವಾಗಿದೆ ಎಂದು ಖಚಿತ ಪಡಿಸಲು
2
ದೊರೆತ ಸೀಟು ತೃಪ್ತಿಕರವಾಗಿದೆ. ಆದರೆ, ನನಗೆ ಇನ್ನೂ ಉತ್ತಮ ಸೀಟು ಬೇಕಿದೆ. ಆದ್ದರಿಂದ ನಾನು ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತೇನೆ
3
ಮೊದಲ ಸುತ್ತಿನಲ್ಲಿ ದೊರಕಿರುವ ಸೀಟು ತೃಪ್ತಿಕರವಾಗಿಲ್ಲ. ಆದ್ದರಿಂದ ನಾನು ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತೇನೆ.
4ಮೊದಲ ಸುತ್ತಿನಲ್ಲಿ ತೃಪ್ತಿಕರವಾಗಿಲ್ಲ. ನನಗೆ ದೊರಕಿರುವ ಸೀಟು ಬೇಡ. ಮುಂದಿನ ಸುತ್ತಿನಲ್ಲೂ ಯಾವ ಸೀಟು ತೆಗೆದುಕೊಳ್ಳಲು ಇಷ್ಟವಿಲ್ಲ. ನಾನು ಬೇರೆ ಸಂಸ್ಥೆಯಿಂದ ಸೀಟು ತೆಗೆದುಕೊಳ್ಳುತ್ತೇನೆ.
ದಂಡ ವಿಧಿಸುವ ಹೊಸ ನಿಯಮ ಸದ್ಯಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೋರ್ಸ್​ಗಳಿಗೆ ಮಾತ್ರ ಅನ್ವಯವಾಗಲಿದೆ. ಈವರೆಗೆ ಕೊನೇ ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಿದರೆ ಪ್ರವೇಶ ಶುಲ್ಕವನ್ನು ಕೆಇಎ ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು. ಕೊನೇ ಸುತ್ತಿನೊಳಗೆ ಸೀಟು ರದ್ದು ಮಾಡಿಕೊಂಡರೆ ಪ್ರಕ್ರಿಯೆ ಶುಲ್ಕವಾಗಿ 5 ಸಾವಿರ ರೂ. ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು. ಈ ನಿಯಮ ಜಾರಿಯಲ್ಲಿದ್ದರೂ ಸಹ ಪ್ರತಿ ವರ್ಷ ಅನೇಕ ವಿದ್ಯಾರ್ಥಿಗಳು ಸೀಟ್ ಬ್ಲಾಕ್ ಮಾಡಿ ಕೊನೇ ಕ್ಷಣದಲ್ಲಿ ಬಿಟ್ಟುಕೊಡುತ್ತಿದ್ದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿತ್ತು.
ಪ್ರತಿಭಾವಂತರಿಗೆ ಅನ್ಯಾಯಉತ್ತಮ ರ್ಯಾಂಕ್ ಪಡೆದಿರುವ ಅಭ್ಯರ್ಥಿ ಜೆಇಇ, ಇತರೆ ಖಾಸಗಿ ಕಾಲೇಜುಗಳು ನಡೆಸುವ ಪ್ರವೇಶ ಪರೀಕ್ಷೆಗಾಗಿ ಕಾಯುತ್ತಾ ಕುಳಿತುಕೊಳ್ಳುವುದರಿಂದ ಆ ಸೀಟು ಬ್ಲಾಕ್​ನಲ್ಲೇ ಇರುತ್ತದೆ. ಮತ್ತೊಬ್ಬ ವಿದ್ಯಾರ್ಥಿಗೆ ಇದು ಸಿಗುವುದಿಲ್ಲ. ಆ ವಿದ್ಯಾರ್ಥಿ ಖಾಸಗಿ ಕಾಲೇಜಿನಲ್ಲಿ ಸೀಟು ಸಿಕ್ಕರೆ ಅಲ್ಲಿ ಪ್ರವೇಶ ಪಡೆಯುತ್ತಾನೆ. ಮೊದಲು ಬ್ಲಾಕ್ ಮಾಡಿದ ಸೀಟನ್ನು ಕೊನೆಯಲ್ಲಿ ಬಿಡುವುದರಿಂದ ಅದು ತೆರವಾಗುತ್ತದೆ. ಇಂಥ ಸೀಟುಗಳನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಎಂಬ ಆರೋಪ ಇದೆ. ಪ್ರತಿ ವರ್ಷ ಈ ರೀತಿ ಒಂದು ಸಾವಿರ ವಿದ್ಯಾರ್ಥಿಗಳು ಕೊನೇ ಕ್ಷಣದಲ್ಲಿ ಸೀಟು ಬಿಟ್ಟು ಬಿಡುತ್ತಾರೆ. ಇದರಿಂದ ಪ್ರತಿಭಾವಂತರಿಗೆ ಸಿಗಬೇಕಾದ ಪ್ರವೇಶ, ಹೆಚ್ಚಿನ ಹಣ ನೀಡುವ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ.
ಕಾಲೇಜಿಗೂ ದಂಡಪ್ರವೇಶದ ವೇಳೆ ವಿದ್ಯಾರ್ಥಿಗಳಿಂದ ಪಡೆಯುವ ಅಂಕಪಟ್ಟಿಗಳ ನೈಜ ಪ್ರತಿಯನ್ನು ಕೆಇಎನಿಂದ ಅನುಮತಿ ಪಡೆದ ತಕ್ಷಣ ವಾಪಸ್ ನೀಡಬೇಕು. ಕಾಲೇಜುಗಳಿಗೆ ಅರ್ಧ (ಸರೆಂಡರ್) ಸೀಟುಗಳು ಭರ್ತಿಯಾಗಿರುವ ಬಗ್ಗೆ ಕಾಲೇಜುಗಳು ಕೆಇಎಗೆ ಮಾಹಿತಿ ನೀಡಬೇಕು. ಅನಂತರ ಕೆಇಎ ಸೀಟು ಭರ್ತಿ ಮಾಡಲು ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡದೇ ಇದ್ದಲ್ಲಿ ಕಾಲೇಜುಗಳು ಸಹ ಕೆಇಎಗೆ ಶುಲ್ಕದ ಐದು ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
ಎಷ್ಟಾಗುತ್ತೆ ದಂಡ?ರಾಜ್ಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ವ್ಯಾಪ್ತಿಯಲ್ಲಿ 252 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಸರ್ಕಾರಿ ಕಾಲೇಜಿನಲ್ಲಿ 18,090 ರೂ, ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ 58 ಸಾವಿರ ರೂ. ಮತ್ತು 65,000ರೂ. ಶುಲ್ಕ ನಿಗದಿ ಮಾಡಿದೆ. ಪ್ರತಿ ವರ್ಷ 70 ಸಾವಿರ ಇಂಜಿನಿಯರಿಂಗ್ ಸೀಟುಗಳಿಗೆ ಕೆಇಎ ಕೌನ್ಸೆಲಿಂಗ್ ನಡೆಸಿ ವಿದ್ಯಾರ್ಥಿಗಳಿಗೆ ಸೀಟು ಆಯ್ಕೆ ಮಾಡುತ್ತದೆ. ವಿದ್ಯಾರ್ಥಿಗಳು ಶುಲ್ಕದ ಐದು ಪಟ್ಟು ದಂಡ ಎಂದಾದರೆ, ಸರ್ಕಾರಿ ವಿದ್ಯಾರ್ಥಿಗಳು ಖಾಸಗಿ 2.90 ಲಕ್ಷ ರೂ.ದಿಂದ 3.25 ಲಕ್ಷ ರೂ.ವರೆಗೆ ಪಾವತಿಸಬೇಕಾಗುತ್ತದೆ.
ಸೀಟ್ ಬ್ಲಾಕ್ ಹೇಗೆ ನಡೆಸುತ್ತಾರೆ?ಏಜೆಂಟರು ಸಿಇಟಿನಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೀಟ್ ಬ್ಲಾಕ್ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಹೆಚ್ಚಿನ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಲ್ಲಿ ಸೀಟು ದೊರೆತಿರುತ್ತದೆ. ಅಂತಹ ವಿದ್ಯಾರ್ಥಿಗಳಿಂದ ಖಾಸಗಿ ಕಾಲೇಜಿನಲ್ಲಿರುವ ಸೀಟುಗಳನ್ನು ಬ್ಲಾಕ್ ಮಾಡಿಸುತ್ತಾರೆ. ಕೊನೆಯ ಸುತ್ತಿನ ಸೀಟು ಹಂಚಿಕೆಯವರೆಗೂ ಆ ಸೀಟು ಬ್ಲಾಕ್ ಆಗಿರುವಂತೆ ನೋಡಿಕೊಳ್ಳಲಾಗುತ್ತದೆ. ಆನಂತರ ಬ್ಲಾಕ್ ಆಗಿರುವ ಸೀಟುಗಳನ್ನು ಅಭ್ಯರ್ಥಿಗಳು ರದ್ದು ಮಾಡುತ್ತಾರೆ. ಈ ರೀತಿ ರದ್ದು ಮಾಡಿದ ಸೀಟುಗಳನ್ನು ಹೆಚ್ಚು ಹಣ ನೀಡುವ ಅಭ್ಯರ್ಥಿಗಳಿಗೆ ಲಕ್ಷಾಂತರ ರೂ.ಗೆ ಮಾರಾಟ ಮಾಡಲಾಗುತ್ತದೆ.
ವೈದ್ಯಕೀಯ ಕೋರ್ಸ್​ನಲ್ಲೇ ಹೆಚ್ಚುವೈದ್ಯಕೀಯ ಸೀಟುಗಳಿಗೆ ಪ್ರತಿ ವರ್ಷ ಬೇಡಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸೀಟುಗಳನ್ನು ಬ್ಲಾಕ್ ಮಾಡುವವರು ಹೆಚ್ಚು. 2019ರಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ 212 ವಿದ್ಯಾರ್ಥಿಗಳು ಸೀಟ್ ಬ್ಲಾಕ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್​ಜಿಯುಎಚ್​ಎಸ್) ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿದಿತ್ತು. ಈ ವಿದ್ಯಾರ್ಥಿಗಳ ಪ್ರವೇಶವನ್ನು ಅನುಮೋದನೆ ಮಾಡಿರಲಿಲ್ಲ. ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರಲಿಲ್ಲ. ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳಿ ಆನಂತರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು. ಈ 212 ವಿದ್ಯಾರ್ಥಿಗಳು ರಾಜ್ಯದ 17 ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ಈ ಪೈಕಿ 5 ಕಾಲೇಜುಗಳು ಬೆಂಗಳೂರಿನಲ್ಲಿವೆ. ಈ ಬಗ್ಗೆ ಸಮಿತಿ ರಚಿಸುವುದಾಗಿ ಸರ್ಕಾರ ಹೇಳಿತ್ತು. ಆನಂತರ ಹೆಚ್ಚಿನ ಕ್ರಮ ಆಗಲಿಲ್ಲ. ಇಂಜಿನಿಯರಿಂಗ್ ಕೋರ್ಸ್​ಗಳಿಗೆ ತಂದಿರುವ ಈ ನಿಯಮವನ್ನು ವೈದ್ಯಕೀಯ ಕೋರ್ಸ್​ಗಳಿಗೆ ತರಲು ಕೂಗು ಕೇಳಿಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 11 =
Remember me
