ಬೆಂಗಳೂರು: ರಾಷ್ಟ್ರೀಯ ಕಾನೂನು ವಿದ್ಯಾಲಯ (ಲಾ ಸ್ಕೂಲ್)ದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25 ಸೀಟುಗಳನ್ನು ಮೀಸಲುಗೊಳಿಸುವ ವಿಧೇಯಕಕ್ಕೆ ಮೇಲ್ಮನೆ ಒಪ್ಪಿಗೆ ನೀಡಿದೆ. ಸಚಿವ ಜೆ.ಸಿ. ಮಾಧುಸ್ವಾಮಿ, ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ-2020ರ ಉದ್ದೇಶ ವಿವರಿಸಿದರು.
ಈ ಹಿಂದೆ ಪ್ರಾದೇಶಿಕ ಎಂದು ನಮೂದಿಸಿದ್ದರಿಂದ ರಾಜ್ಯಪಾಲರು ತಿರಸ್ಕರಿಸಿದ್ದರು. ಅಡ್ವೋಕೇಟ್ ಜನರಲ್ ಸಲಹೆಯಂತೆ ‘ಪ್ರಾದೇಶಿಕ’ ಪದ ತೆಗೆದು ಹಾಕಿ ‘ಸಾಂಸ್ಥಿಕ’ ಬಳಸಲಾಗಿದೆ. ರಾಜ್ಯದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳಿಗೆ ಕಡಿಮೆಯಿಲ್ಲದಂತೆ ವಿದ್ಯಾಭ್ಯಾಸ ಮಾಡಿದವರಿಗೆ ಮಸೂದೆ ರೂಪಿಸಲಾಗಿದೆ ಎಂದರು. ಈ ಶಾಲೆಗೆ ರಾಜ್ಯ ಸರ್ಕಾರ ಅಗತ್ಯ ಸವಲತ್ತು, ವಾರ್ಷಿಕ 2 ಕೋಟಿ ರೂ. ಅನುದಾನ ಖರ್ಚು ಮಾಡುತ್ತಿದೆ. ಬೇರೆ ರಾಜ್ಯಗಳ ಮಾದರಿಯಲ್ಲಿ ಬಿಲ್ ಮಂಡಿಸಿದ್ದು, ಸರ್ವಾನುಮತ ಒಪ್ಪಿಗೆ ನೀಡಬೇಕು ಎಂಬ ಕೋರಿಕೆಗೆ ಒಕ್ಕೊರಲಿನಿಂದ ಸಮ್ಮತಿಸಿದರೆ, ಸಭಾಪತಿ ಅಂಗೀಕರಿಸಿದರು.
ಅಸ್ತು: ವೆಚ್ಚದ ಮಿತಿ 1ರಿಂದ 5 ಲಕ್ಷ ರೂ.ಗೆ ಹೆಚ್ಚಳ, ಸರಕುಗಳು ಮತ್ತು ಸೇವೆಗಳು ಪದಗಳನ್ನು ಸೇರಿಸಿದ ಕರ್ನಾಟಕದ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ವಿಧೇಯಕ, 2020 ಅಂಗೀಕಾರಕ್ಕೆ ಮೇಲ್ಮನೆ ಒಪ್ಪಿಗೆ ನೀಡಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಬಿಟ್ಟಿಲ್ಲ- ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
