ಬೆಂಗಳೂರು: ಎರಡನೇ ವಿವಾಹವಾದ ಮಹಿಳೆ ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿ ನ್ಯಾಯ ಕೋರಿ ಬಸವನಗುಡಿ ಮಹಿಳಾ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.  ಮಲ್ಲತ್ತಹಳ್ಳಿಯ ನಿವಾಸಿ 36 ವರ್ಷದ ಮಹಿಳೆ ಕಿರುಕುಳಕ್ಕೆ ಒಳಗಾದಾಕೆ. ಆರೋಪಿ ಪತಿ ವಿನೋದ್ ವೇಣುಗೋಪಾಲ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಮದುವೆಯಾಗಿ ಒಂದು ಮಗುವಿತ್ತು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ನಂತರ ಪರಿಚಯವಾದ ವಿನೋದ್ 2018ರಲ್ಲಿ ಪ್ರೇಮ ನಿವೇದನೆ ಮಾಡಿ ವಿವಾಹವಾಗಿದ್ದ. ನಂತರ ಮಹಾರಾಷ್ಟ್ರದ ಪುಣೆಯಲ್ಲಿ ಖಾಸಗಿ ಕಂಪನಿಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಈ ನಡುವೆ ಮನೆಯ ಎಲ್ಲ ಖರ್ಚುಗಳನ್ನೂ ಮಹಿಳೆ ನಿಭಾಯಿಸುತ್ತಿದ್ದರು. ಮೊದಲ ಪತಿಯ ಕಿರುಕುಳದಿಂದ ಬೇಸತ್ತಿದ್ದ ಮಹಿಳೆ, 2ನೇ ಪತಿ ವಿನೋದ್ ಜತೆ ಉತ್ತಮ ರೀತಿಯಲ್ಲಿ ಸಂಸಾರ ಮಾಡಬಹುದು ಎಂದು ಭಾವಿಸಿದ್ದರು.
ಇದನ್ನೂ ಓದಿ:PHOTOS|ಹಂದಿಯನ್ನು ಬೆತ್ತಲೆಯಾಗಿ ಬೆನ್ನಟ್ಟಿದ ವ್ಯಕ್ತಿ: ಹಳದಿ ಬಣ್ಣದ ಬ್ಯಾಗ್​ನಲ್ಲಿ ಅಂಥದ್ದೇನಿದೆ?
ಕೆಲ ತಿಂಗಳ ಹಿಂದೆ ವಿನೋದ್, ಪತ್ನಿಯ ಎಟಿಎಂ ಕಾರ್ಡ್ ಪಡೆದು ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಶೇ.70 ಹಣ ತೆಗೆದುಕೊಂಡಿದ್ದ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಕುಡಿದು ಬಂದು ಹಲ್ಲೆ ಮಾಡುತ್ತಿದ್ದಲ್ಲದೆ ಹಣ ಕೊಡುವಂತೆ ಪೀಡಿಸುತ್ತಿದ್ದ. ‘ನನ್ನ ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನಿಸಿದರೆ ನಿನ್ನನ್ನು ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಸುತ್ತಿದ್ದ. ಬಳಿಕ 25 ಲಕ್ಷ ರೂ. ಹಾಗೂ ತವರುಮನೆಯಲ್ಲಿರುವ ಆಸ್ತಿ ಕೊಟ್ಟರೆ ಮಾತ್ರ ಮನೆಯೊಳಗೆ ಬರಲು ಪ್ರವೇಶ ಕಲ್ಪಿಸುವುದಾಗಿ ಮನೆಯಿಂದಲೇ ಹೊರಹಾಕಿದ್ದಾನೆ. ಬಲವಂತವಾಗಿ ಮನೆಯೊಳಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ಥೆ ಆರೋಪಿಸಿದ್ದಾರೆ.
ಇನ್​ಸ್ಟಾಗ್ರಾಂ ಫ್ರೆಂಡ್​ ಅತ್ಯಾಚಾರ ಮಾಡ್ದ, ಮದುವೆ ಆಗಲಿಲ್ಲ: 21ರ ಯುವತಿಯ ದೂರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 10 =
Remember me
