ಬೆಂಗಳೂರು: ಸಚಿವರಾಗಿ ಪ್ರತಿ ತಿಂಗಳು ತಾವು ಏನೆಲ್ಲ ಕಾರ್ಯಚಟುವಟಿಕೆ ನಡೆಸಿದೆವು, ಪ್ರಮುಖ ಭೇಟಿಗಳು ಯಾವುದು ಎಂಬುದನ್ನು ಜನರಿಗೆ ತಿಳಿಸಲು ಈ ಸರ್ಕಾರದಲ್ಲಿ ಇಬ್ಬರು ಸಚಿವರು ಹೊಸ ಸಂಪ್ರದಾಯ ಆರಂಭಿಸಿದ್ದಾರೆ.ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಸಚಿವರಾದ ಒಂದು ತಿಂಗಳ ಬಳಿಕ ಜನರಿಗೆ ವರದಿ ನೀಡಿ ಗಮನ ಸೆಳೆದಿದ್ದರು. ಈಗ ಎರಡು ತಿಂಗಳು ಪೂರೈಸಿದ್ದು, ಎರಡನೇ ತಿಂಗಳ ವರದಿಯನ್ನು ಜನರ ಮುಂದಿಟ್ಟಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ಜನರಿಗೆ ಹೆಚ್ಚೆಚ್ಚು ಉತ್ತರದಾಯಿಯಾಗಲು ಕಳೆದ ತಿಂಗಳು ನಾನು ನನ್ನೆಲ್ಲಾ ಕೆಲಸಗಳನ್ನು ಒಳಗೊಂಡ ಮೊದಲ ತಿಂಗಳ ವರ್ಕ್ ರಿಪೋರ್ಟ್ ಬಿಡುಗಡೆ ಮಾಡಿದ್ದೆ. ಇದೀಗ ಎರಡನೇ ತಿಂಗಳ (ಜುಲೈ) ವರ್ಕ್ ರಿಪೋರ್ಟ್ ಬಿಡುಗಡೆಗೊಳಿಸುತ್ತಿದ್ದೇನೆ ಎಂದಿದ್ದಾರೆ.ರಾಜ್ಯದ ಜನತೆ ಕಾಂಗ್ರೆಸ್‌ಗೆ ನೀಡಿರುವ ಈ ಅದ್ಭುತ ಜನಾದೇಶ ಸಮರ್ಥವಾಗಿ ಜನಪರ ಕೆಲಸ ಮಾಡುವಂತೆ ನಮಗೆ ಕೊಟ್ಟ ನಿರ್ದೇಶನ ಎಂದು ಭಾವಿಸಿ ನನ್ನ ಕೆಲಸಗಳನ್ನು ಕೇಂದ್ರೀಕರಿಸಿದ್ದೇನೆ. ಆಡಳಿತ ಸ್ವೀಕರಿಸಿ ಎರಡೇ ತಿಂಗಳಾಗಿದ್ದರೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಇಲಾಖೆಗಳ ಕಾರ್ಯ ನಿರ್ವಹಣೆಯಲ್ಲಿ ಹಲವಾರು ಗಮನಾರ್ಹ ಬದಲಾವಣೆಗಳನ್ನು ತರುವತ್ತ ನಮ್ಮ ಪ್ರಯತ್ನ ಸಾಗಿದೆ ಎಂದು ಹೇಳಿಕೊಂಡಿದ್ದಾರೆ.ಜನರ ಸಲಹೆ, ಸಹನೆ ಹಾಗೂ ಸಹಕಾರ ಪ್ರಬುದ್ಧ ಕರ್ನಾಟಕ ನಿರ್ಮಿಸುವ ನಮ್ಮ ಪ್ರಯತ್ನಕ್ಕೆ ದೊಡ್ಡ ಪ್ರೇರಕ ಶಕ್ತಿ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
