ಬೆಂಗಳೂರು:ಮಾರ್ಚ್‌ನಲ್ಲಿ ನಡೆದ 2023ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಶೇ.74.67 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ರಾಜ್ಯದಲ್ಲಿ ಈ ವರೆಗೆ ಕಳೆದ ವರ್ಷ ಪ್ರಕಟವಾಗಿದ್ದ ಶೇ.61.88 ಫಲಿತಾಂಶವೇ ದಾಖಲೆಯಾಗಿತ್ತು. ಇದೀಗ, ಆ ದಾಖಲೆಯನ್ನು ಮುರಿದು ಶೇ.74.67 ಫಲಿತಾಂಶವು ಹೊಸ ದಾಖಲೆ ನಿರ್ಮಿಸಿದೆ. ಶೇ.63.68 ಕನ್ನಡ ಮಾಧ್ಯಮ ಮತ್ತು ಶೇ.82.30 ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಿರೀಕ್ಷೆಯಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.80.25 ಬಾಲಕಿಯರು ಮತ್ತು ಶೇ.69.05 ಬಾಲಕರು, ಶೇ.74.79 ಗ್ರಾಮೀಣ ಹಾಗೂ ಶೇ.74.63 ನಗರ ಪ್ರದೇಶದ ಮಕ್ಕಳು ಪಾಸ್ ಆಗಿದ್ದಾರೆ. ಒಟ್ಟಾರೆಯಾಗಿ ಮೇಲುಗೈ ಸಾಧಿಸುವ ಜತೆಗೆ ವಿಭಾಗವಾರು ಪಟ್ಟಿಯಲ್ಲಿಯೂ ಟಾಪ್-10ರಲ್ಲಿ ವಿದ್ಯಾರ್ಥಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಟಾಪ್-10ರಲ್ಲಿ 6, ವಾಣಿಜ್ಯ ವಿಭಾಗದಲ್ಲಿ 10 ಮತ್ತು ವಿಜ್ಞಾನ ವಿಭಾಗದಲ್ಲಿ 7 ಮಂದಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:ಗೂಂಡಾ ಕಾಯ್ದೆಯಡಿ ಬಂಧಿತ ಆಪ್ತನ ಮನೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಭೇಟಿ!
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಮೊದಲ ಎರಡು ಸ್ಥಾನಗಳನ್ನು ಪಡೆದಿದ್ದರೆ, ರಾಯಚೂರು ಮತ್ತು ಯಾದಗಿರಿ ಕೊನೆಯ ಎರಡು ಸ್ಥಾನಗಳನ್ನು ಪಡೆದಿವೆ. ಕಳೆದ ವರ್ಷ ಕೊನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದ್ದ ವಿಜಯಪುರ ಈ ಬಾರಿ 4ನೇ ಸ್ಥಾನಕ್ಕೆ ಇಳಿದಿದ್ದು, ಕೊಡಗು ಮೂರನೇ ಸ್ಥಾನಕ್ಕೇರಿದೆ. ಇನ್ನು ಕಳೆದ ಬಾರಿ 23ನೇ ಸ್ಥಾನದಲ್ಲಿದ್ದ ಯಾದಗಿರಿ ಈ ಬಾರಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
42 ಸರ್ಕಾರಿ ಕಾಲೇಜುಗಳು ಶೇ.100 ಫಲಿತಾಂಶ ಮತ್ತು 73 ಖಾಸಗಿ ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಯಾವುದೇ ಸರ್ಕಾರಿ ಕಾಲೇಜು ಶೂನ್ಯ ಫಲಿತಾಂಶ ಪಡೆಯದಿರುವುದು ಖುಷಿಯ ವಿಚಾರವಾಗಿದೆ. 10,153 ವಿದ್ಯಾರ್ಥಿಗಳು ಕೃಪಾಂಕದ ಮೂಲಕ ಉತ್ತೀರ್ಣರಾದ ಸಂತಸದಲ್ಲಿದ್ದಾರೆ.
ರಾಜ್ಯದಲ್ಲಿರುವ ಪರೀಕ್ಷಾ ಪದ್ಧತಿಯು ಗುಣಮಟ್ಟದಿಂದ ಕೂಡಿದೆ. ಆದರೆ, ಫಲಿತಾಂಶ ಪ್ರಕಟಿಸುವ ವೇಳೆಯಲ್ಲಿ ಶೇ.60 ದಾಟುತ್ತಿರಲಿಲ್ಲ. ಹೀಗಾಗಿ, ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಜೆಇಇ ಸೇರಿ ಇತರೆ ಪರೀಕ್ಷೆಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಹಿಂದುಳಿಯುತ್ತಿದ್ದರು. ಇದನ್ನು ಮನಗಂಡ ಪರೀಕ್ಷಾ ಮಂಡಳಿಯು, ಕಳೆದ ಡಿಸೆಂಬರ್‌ನಲ್ಲಿ ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳ ಪರೀಕ್ಷಾ ಮಾದರಿಯನ್ನು ಅಧ್ಯಯನ ಮಾಡಿ ಕೆಲವು ನಿಯಮಗಳನ್ನು ಬದಲಾಬಣೆ ಮಾಡಿಕೊಂಡಿತ್ತು.
ಇದನ್ನೂ ಓದಿ:ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ
ಫಲಿತಾಂಶ ಹೆಚ್ಚಳಕ್ಕಾಗಿ ಶಿಕ್ಷಣ ಇಲಾಖೆಯು ಕೈಗೊಂಡ ಬಹುಆಯ್ಕೆ ಮಾದರಿ ಪ್ರಶ್ನೆಪತ್ರಿಕೆ (ಎಂಸಿಕ್ಯು) ಪ್ರಯೋಗ ಪ್ರತಿಫಲ ನೀಡಿದೆ. ಶಿಕ್ಷಣ ಇಲಾಖೆಯು ಇದೇ ಮೊದಲ ಬಾರಿಗೆ 20 ಅಂಕಗಳಿಗೆ ಎಂಸಿಕ್ಯು ಮಾದರಿ ಪ್ರಶ್ನೆಗಳನ್ನು ನೀಡಿತ್ತು, ಇದರಲ್ಲಿಯೇ ಬಹುತೇಕ ವಿದ್ಯಾರ್ಥಿಗಳು ತೇರ್ಗಡೆಯಾಗಲು ಸಹಾಯವಾಗಿದೆ. ಹೀಗಾಗಿ, ಕಳೆದ ವರ್ಷ (ಶೇ.61.88)ಕ್ಕಿಂತ ಶೇ.12.79 ಫಲಿತಾಂಶ ಹೆಚ್ಚಳವಾಗಿದೆ.
ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅನನ್ಯ ಕೆ.ಎ. 600ಕ್ಕೆ 600 ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರದ ಗಂಗೋತ್ರಿ ಪಿಯು ಕಾಲೇಜಿನ ವಿದ್ಯಾರ್ಥಿ ಎಸ್.ಎಂ. ಕೌಶಿಕ್ ಮತ್ತು ಬೆಂಗಳೂರಿನ ಜಯನಗರದ ಆರ್.ವಿ. ಕಾಲೇಜಿನ ಸುರಭಿ ಎಸ್. ತಲಾ 596 ಅಂಕಗಳನ್ನು ಪಡೆದು ಮೊದಲ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಬೆಂಗಳೂರಿನ ಜಯನಗರದ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ತಬರಂ ಶೇಖ್ 593 ಅಂಕಗಳನ್ನು ಪಡೆದು ಟಾಪರ್‌ಗಳಾಗಿದ್ದಾರೆ.
ಇದನ್ನೂ ಓದಿ:ಮಠಕ್ಕೂ ತಟ್ಟಿದ ಚುನಾವಣಾ ನೀತಿಸಂಹಿತೆ ಬಿಸಿ; ಸರಳವಾಗಿ ನೆರವೇರಲಿದೆ ನೂತನ ಉತ್ತರಾಧಿಕಾರಿಗಳ ಪಟ್ಟಾಭಿಷೇಕ
ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿ ಶಿಕ್ಷಣ ಸಚಿವರ ಬದಲು ಇಲಾಖೆಯ ಅಧಿಕಾರಿಗಳೇ ಫಲಿತಾಂಶ ಪ್ರಕಟಿಸಿದರು. ಮಲ್ಲೇಶ್ವರದಲ್ಲಿರುವ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್, ಮಂಡಳಿ ಅಧ್ಯಕ್ಷ ಆರ್. ರಾಮಚಂದ್ರನ್ ಮತ್ತು ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಲಿತಾಂಶ ಪ್ರಕಟಿಸಿದರು.
ಮಾ.9ರಿಂದ 29ರ ವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ರಾಜ್ಯಾದ್ಯಂತ 7,27,923 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 7,25,821 ಮಂದಿ ಅರ್ಹತೆ ಹೊಂದಿದ್ದರು. 7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 23,754 ಮಂದಿ ಗೈರು ಹಾಜರಾಗಿದ್ದರು. 6,07,489 ಹೊಸಬರು (ಫ್ರೆಷರ್ಸ್), 69,870 ಪುನರಾವರ್ತಿತ ಮತ್ತು 24,708 ಖಾಸಗಿ ವಿದ್ಯಾರ್ಥಿಗಳು ಸೇರಿ ಒಟ್ಟಾರೆ 5,24,209 ಮಂದಿ ತೇರ್ಗಡೆಯಾಗಿದ್ದಾರೆ ಎಂದು ಆರ್. ರಾಮಚಂದ್ರನ್ ತಿಳಿಸಿದ್ದಾರೆ.ಕಲಾ ವಿಭಾಗದ ಶೇ.61.22, ವಾಣಿಜ್ಯ ವಿಭಾಗದ ಶೇ.75.89 ಮತ್ತು ವಿಜ್ಞಾನ ವಿಭಾಗದ ಶೇ.85.71 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 1,09,509 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಶೇ.85 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ), 2,47,315 ಮಂದಿ ಪ್ರಥಮ ದರ್ಜೆ (ಶೇ.60ರಿಂದ ಶೇ.85 ಅಂಕ) , 90,014 ದ್ವಿತೀಯ ದರ್ಜೆ (ಶೇ.50ರಿಂದ 60 ಅಂಕ) ಹಾಗೂ 77,371 ವಿದ್ಯಾರ್ಥಿಗಳು ತೃತೀಯ ದರ್ಜೆ (ಶೇ.50ಕ್ಕಿಂತ ಕಡಿಮೆ ಅಂಕ) ಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.
ಇದನ್ನೂ ಓದಿ:ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!
ಕಂಪ್ಯೂಟರ್ ಸೈನ್ಸ್‌ನಲ್ಲಿ 5,335 ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಲೆಕ್ಕಶಾಸದಲ್ಲಿ 3,475, ಗಣಿತಶಾಸ್ತ್ರದಲ್ಲಿ 2,704, ವ್ಯವಹಾರ ಅಧ್ಯಯನದಲ್ಲಿ 2,288, ಸಂಖ್ಯಾಶಾಸ್ತ್ರದಲ್ಲಿ 1,627, ಭೌತಶಾಸ್ತ್ರ- 1,599, ಅರ್ಥಶಾಸ್ತ್ರ-1,404, ಸಂಸ್ಕೃತ- 1,250 ಮಂದಿ, ಕನ್ನಡ ವಿಷಯದಲ್ಲಿ 1,083 ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ರೀಟೇಲ್‌ನಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಶೇ.100 ಅಂಕಗಳನ್ನು ಪಡೆದಿದ್ದಾನೆ.
ಒಟ್ಟಾರೆ ವಿದ್ಯಾರ್ಥಿಗಳ ಪೈಕಿ 10,153 ಮಂದಿಗೆ ಕೃಪಾಂಕ ನೀಡಲಾಗಿದೆ. 6 ವಿಷಯಗಳ ಪೈಕಿ 2 ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ ಕನಿಷ್ಠ 1ರಿಂದ ಗರಿಷ್ಠ 10ರ ವರೆಗೆ (ಶೇ.5) ಅಂಕಗಳ ನೀಡಲಾಗಿದೆ. ಪ್ರತಿ ವಿಷಯದಲ್ಲಿ ಉತ್ತೀರ್ಣರಾಗಲು ಕನಿಷ್ಠ 35 ಅಂಕಗಳನ್ನು ಪಡೆಯಬೇಕು. 600 ಅಂಕಗಳಿಗೆ ಕನಿಷ್ಠ ಉತ್ತೀರ್ಣರಾಗಲು ಒಟ್ಟಾರೆ 210 ಅಂಕಗಳನ್ನು ಪಡೆದಿದ್ದು, ಯಾವುದೇ 2 ವಿಷಯದಲ್ಲಿ 30ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದರೆ, 35 ಅಂಕಗಳಿಗೆ ಸಮಾನವಾಗಿ ನೀಡಲು ಅವಶ್ಯವಿರುವ ಅಂಕಗಳನ್ನು ಕೃಪಾಂಕವಾಗಿ ನೀಡಲಾಗಿದೆ.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಫಲಿತಾಂಶ ಹೆಚ್ಚಿಸಲು ಸರ್ಕಾರ 2014ರಿಂದ ಒಂದು ವಿಷಯದಲ್ಲಿ ಕೃಪಾಂಕ ನೀಡಲಾಗುತ್ತಿತ್ತು. ಕರೊನಾ ನಂತರ ಎರಡು ವಿಷಯಗಳಿಗೆ ಹೆಚ್ಚಿಸಿದೆ. 2022ರಲ್ಲಿ 6 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕೃಪಾಂಕದಿಂದ ಉತ್ತೀರ್ಣರಾಗಿದ್ದರು.
‘ಈ ಸಲ ಯಾರಿಗೆ ಮತ ಹಾಕಲಿ?’ ಎಂದು ಕೇಳಿದರೆ ಇದು ಏನನ್ನುತ್ತೆ?: ಕೃತಕ ಬುದ್ಧಿಮತ್ತೆಯ ಬುದ್ಧಿಮಾತು!

ದಾಖಲೆ ಇಲ್ಲದ 7 ಕೋಟಿ ರೂ. ಪತ್ತೆ; ಐಎಎಸ್​ ಅಧಿಕಾರಿಯೊಬ್ಬರು ಸ್ಥಳಕ್ಕೆ ಹೋದ ಬಳಿಕ ಹಣವೇ ನಾಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 3 =
Remember me
