ಬೆಂಗಳೂರು:ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಇಂದು ಹೊರಬಿದ್ದಿದೆ. ಪರೀಕ್ಷೆ ನಡೆಸದೆಯೇ ವಿದ್ಯಾರ್ಥಿಗಳ ಈ ಹಿಂದಿನ ಫಲಿತಾಂಶವನ್ನೇ ಆಧರಿಸಿ ಫಲಿತಾಂಶ ಕೊಡಲಾಗಿದೆ. ಆದರೆ ಅನೇಕ ವಿದ್ಯಾರ್ಥಿಗಳಿಗೆ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದು, ಅಂತವರಿಗಾಗಿ ಮತ್ತೊಂದು ಅವಕಾಶ ನೀಡಲಾಗಿದೆ.
ಒಂದು ವೇಳೆ ಈ ವರ್ಷದ ದ್ವಿತೀಯ ಪಿಯು ಫಲಿತಾಂಶ ಪಡೆದ ಯಾವುದೇ ವಿದ್ಯಾರ್ಥಿಗೆ ಯಾವುದೇ ವಿಷಯದಲ್ಲಿ ಪರೀಕ್ಷೆ ಬರೆದಿದ್ದರೆ ಈಗ ಬಂದಿರುವ ಅಂಕಗಳಿಗಿಂತ ಹೆಚ್ಚಿನ ಅಂಕ ಬರುತ್ತಿತ್ತು ಎನ್ನುವ ನಂಬಿಕೆಯಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿದೆ. ಆ ಪರೀಕ್ಷೆಯ ಇದೇ ಆಗಸ್ಟ್ ತಿಂಗಳಲ್ಲಿ ಅದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿರುವ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತರು ಹಾಗೂ ಖಾಸಗಿ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದು. ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಬೇಕು. ಆ ಪ್ರಾಂಶುಪಾಲರು ಜುಲೈ 30ರೊಳಗೆ ಪರೀಕ್ಷೆ ಬರೆಯಲಿಚ್ಛಿಸುವ ಮಾಹಿತಿಯನ್ನು SATS portalನಲ್ಲಿ ಅಪ್​ಡೇಟ್ ಮಾಡಬೇಕು. ನಂತರ ಡಿಡಿಪಿಯು ಮಟ್ಟದಲ್ಲಿ ಅರ್ಜಿ ಪರಿಶೀಲನೆಗೆ ಜು.31 ಹಾಗೂ ಕೇಂದ್ರ ಕಚೇರಿಗೆ ತಲುಪಿಸಲು ಆಗಸ್ಟ್ 2 ಕೊನೆಯ ದಿನಾಂಕವೆಂದು ತಿಳಿಸಿದ್ದಾರೆ.
ಆಗಸ್ಟ್​ನಲ್ಲಿ ನಡೆಯುವ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ.ಆ.19 – ಐಚ್ಛಿಕ ಕನ್ನಡ, ಗಣಿತ, ಬೇಸಕ್ ಮ್ಯಾಥ್ಸ್ಆ.21 – ಕನ್ನಡ, ತಮಿಳು, ತೆಲಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್ಆ.23 – ಭೂಗೋಳಶಾಸ, ಮನಃಶಾಸ, ಭೌತಶಾಸಆ.24 – ಇಂಗ್ಲಿಷ್ಆ.25 – ಲೆಕ್ಕಶಾಸ, ಭೂಗರ್ಭಶಾಸ, ಶಿಕ್ಷಣ, ಗೃಹ ವಿಜ್ಞಾನಆ.26 – ರಾಜ್ಯಶಾಸಆ.27 – ಇತಿಹಾಸ, ಲೆಕ್ಕಶಾಸಆ.30 – ಅರ್ಥಶಾಸ,ಆ.31 – ಉರ್ದು, ಸಂಸ್ಕೃತಸೆ.1 – ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಸಮಾಜಶಾಸ, ಜೀವವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ಸೆ.2 – ತರ್ಕಶಾಸ, ವ್ಯವಹಾರ ಅಧ್ಯಯನ, ರಸಾಯನಶಾಸಸೆ.3 – ಹಿಂದಿ

ಕರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಒಂದೂ ಸಾವು ಸಂಭವಿಸಿಲ್ಲ! ಮಾಹಿತಿ ನೀಡಿದ ಸರ್ಕಾರ

ಚಿನ್ನದ ಫೆರಾರಿ ಕಾರನ್ನ ಎಲ್ಲಾದರು ಕಂಡಿರಾ? ಆನಂದ್ ಮಹೀಂದ್ರಾ ಸಿಟ್ಟಿಗೆ ಕಾರಣವಾಯ್ತು ಈ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
