|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯ ವಿಧಾನಸಭೆ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವ ಬದಲು ಎರಡು ಅಥವಾ ಮೂರು ಹಂತಗಳಲ್ಲಿ ನಡೆಸುವುದು ಸೂಕ್ತವೆಂದು ಗುಪ್ತದಳ ಭಾರತ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದೆ. 2013 ಹಾಗೂ 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆಳು ಒಂದೇ ಹಂತದಲ್ಲಿ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ. ಆದರೆ ಈ ಬಾರಿ ಶಾಂತಿಯುತವಾಗಿ ನಡೆಯುವ ಸಾಧ್ಯತೆಗಳಿಲ್ಲ ಎಂಬ ಆತಂಕವನ್ನು ಗುಪ್ತದಳ ವ್ಯಕ್ತಪಡಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.
ಈ ಬಾರಿಯ ಚುನಾವಣೆ ಒಂದಿಲ್ಲೊಂದು ಕಾರಣಕ್ಕೆ ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿ ಮಾರ್ಪಟ್ಟಿದೆ. ಸ್ವಂತ ಶಕ್ತಿಯ ಮೇಲೆ ಅಧಿಕಾರದ ಸೂತ್ರವನ್ನಿಡಿಯಬೇಕು ಎಂಬುದು ಮೂರು ಪಕ್ಷಗಳ ಗುರಿಯಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಜಿದ್ದಾಜಿದ್ದಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿವೆ. ರಾಜಕೀಯ ನಾಯಕರ ನಡುವೆ ಮಾತಿನ ಏಟು-ಎದಿರೇಟು ಕೇಳಿ ಬರುತ್ತಿದೆ. ಚುನಾವಣೆ ದಿನ ಹತ್ತಿರ ಬಂದಂತೆ ಇನ್ನಷ್ಟು ತೀವ್ರವಾಗುವ ಎಲ್ಲ ಲಕ್ಷಣಗಳು ಇವೆ. ಈ ಹಂತದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅತಿಮುಖ್ಯವಾಗಿದೆ. ಆದ್ದರಿಂದಲೇ ಒಂದೇ ಹಂತದಲ್ಲಿ ಚುನಾವಣೆ ಬೇಡ ಎಂದು ಗುಪ್ತದಳ ಆತಂಕ ವ್ಯಕ್ತಪಡಿಸುತ್ತಿದೆ. ನಾಯಕರ ಮಾತಿನ ವರಸೆ ಆಯಾ ಪಕ್ಷಗಳ ಕಾರ್ಯಕರ್ತರಿಗೆ ಜೀವ ತುಂಬುವುದರಿಂದ ಪ್ರಚಾರದ ಕಣ ಯಾವ ಮಟ್ಟಕ್ಕೆ ಬೇಕಾದರೂ ಮುಟ್ಟಬಹುದೆಂದು ಹೇಳಲಾಗುತ್ತಿದೆ.
ಹಿಂಸೆಯ ರೂಪ:ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುವುದು ಮಾಮೂಲಿ. ಮತಗಟ್ಟೆ ವಶ, ಮತಯಂತ್ರಗಳನ್ನು ಕದ್ದುಕೊಂಡು ಹೋಗುವುದು ನಡೆಯುತ್ತಿರುತ್ತದೆ. ಹಿಂಸೆಗೆ ಜನ ಬಲಿಯಾಗಿರುವ ಉದಾಹರಣೆಗಳು ಇವೆ. ಆದರೆ ರಾಜ್ಯದಲ್ಲಿ ಅಂತಹ ಘಟನೆಗಳು ನಡೆದಿಲ್ಲ. ಕೇವಲ ಮಾತಿನ ಚಕಮಕಿಗಳಿಗಷ್ಟೇ ಸೀಮಿತವಾಗಿವೆ. ಆದರೆ ರಾಜ್ಯದಲ್ಲಿ ನಡೆದಿರುವ ಇತ್ತೀಚಿನ ಕೆಲವು ಘಟನೆಗಳು ಶಾಂತಿಯುತ ಚುನಾವಣೆ ಸಾಧ್ಯವಿಲ್ಲವೇನೋ ಎಂಬ ಪರಿಸ್ಥಿತಿಯನ್ನು ನಿರ್ವಿುಸಿವೆ. ಆದ್ದರಿಂದ ಚುನಾವಣೆಯ ಕಣ ಈ ಬಾರಿ ಹಿಂಸೆಯ ರೂಪ ಪಡೆಯುವ ಸಾಧ್ಯತೆಗಳನ್ನು ಗುಪ್ತದಳ ಗುರುತಿಸಿದೆ ಎಂದು ಮೂಲಗಳು ಹೇಳುತ್ತವೆ.
ಎರಡು ಹಂತಕ್ಕೆ ಒಲವು:ಗುಪ್ತದಳದ ವರದಿಯ ಹಿನ್ನೆಲೆಯಲ್ಲಿಯೇ ಚುನಾವಣಾ ಆಯೋಗ ಸಹ ಎರಡು ಹಂತದಲ್ಲಿ ಚುನಾವಣೆ ನಡೆಸುವ ಬಗ್ಗೆ ಚರ್ಚೆ ನಡೆಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯವನ್ನು ಲಂಬವಾಗಿ ವಿಭಜಿಸಿ ಎರಡು ಭಾಗ ಮಾಡಿ ಎರಡು ದಿನ ಚುನಾವಣೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಮುಖ್ಯ ಚುನಾವಣಾ ಆಯುಕ್ತರು ರಾಜ್ಯ ಭೇಟಿಯ ನಂತರವಷ್ಟೇ ಈ ಬಗ್ಗೆ ಅಂತಿಮವಾಗಲಿದೆ ಎನ್ನಲಾಗಿದೆ. ಈಗಾಗಲೆ ಸಭೆಗಳನ್ನು ನಡೆಸುತ್ತಿರುವ ಚುನಾವಣಾ ಆಯೋಗ ಸದ್ಯದಲ್ಲಿಯೇ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನು ದೆಹಲಿಗೆ ಕರೆಸಿ ಸಭೆ ನಡೆಸಲಿದೆ. ಆ ನಂತರ ಆಯೋಗ ರಾಜ್ಯಕ್ಕೆ ಭೇಟಿ ನೀಡಿ ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆಯಲಿದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರವಷ್ಟೇ ಎಷ್ಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂಬುದು ಅಂತಿಮವಾಗಲಿದೆ ಎಂದು ಮೂಲಗಳು ಹೇಳಿವೆ.

ಈ ಐ ಡ್ರಾಪ್ಸ್​ ಬಳಸಿದರೆ ದೃಷ್ಟಿ ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು!

ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 5 =
Remember me
