ಉಡುಪಿ:ಕರೊನಾ ವೈರಸ್​ ಸೋಂಕು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬಹುತೇಕ ಎಲ್ಲ ಕಡೆ ಸೆಕ್ಷನ್​ 144 ಜಾರಿಯಾಗಿದೆ.
ಮಂಗಳೂರಿನಲ್ಲಿ ವ್ಯಕ್ತಿಯೋರ್ವರಲ್ಲಿ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕೂಡ ಹೈ ಅಲರ್ಟ್​ ಇದೆ. ಆದರೆ ಉಡುಪಿಯಲ್ಲಿ ಸೆಕ್ಷನ್​ 144 ಜಾರಿಯಲ್ಲಿದ್ದರೂ ಕೆಲವು ವ್ಯಾಪಾರಿಗಳು ಅಂಗಡಿ ತೆರೆದಿದ್ದರು. ಇದನ್ನು ನೋಡಿದ ನಗರಸಭೆ ಆಯುಕ್ತರು ಕೆಂಡಾಮಂಡಲರಾದ ಘಟನೆ ನಡೆಯಿತು.
ಮಾತಿಗೂ ಬಗ್ಗದೆ ಅಂಗಡಿ ತೆರೆದು ಕುಳಿತಿದ್ದವರನ್ನು ನೋಡಿದ ನಗರಸಭೆ ಆಯುಕ್ತ ಆನಂದ್​ ಕಲ್ಲೋಲಿಕರ್​, ಅಂಗಡಿ ಮುಚ್ಚದಿದ್ದರೆ ಲೈಸನ್ಸ್​ ರದ್ದು ಮಾಡುತ್ತೇನೆ ಎಂದು ಹೆದರಿಸಿದರು. ಅದನ್ನು ಕೇಳಿ ವ್ಯಾಪಾರಿಗಳು ಬೇಗಬೇಗ ಅಂಗಡಿಗಳನ್ನು ಮುಚ್ಚಿದ್ದಾರೆ.
ದಿನನಿತ್ಯದ ವಸ್ತುಗಳನ್ನು ಮಾರುವ ಅಂಗಡಿಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಅಂಗಡಿಗಳು ತೆರೆದಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.ಪೊಲೀಸ್​ ಕಮಿಷನರ್​ ಖಡಕ್​ ಎಚ್ಚರಿಕೆ
ಲಾಕ್​ಡೌನ್​ ಆಗಿರುವ ಮಂಗಳೂರಿನಲ್ಲಿ ಯಾರಾದರೂ ಅನಗತ್ಯವಾಗಿ ರಸ್ತೆ ಮೇಲೆ ಓಡಾಡಿದರೆ ಬಂಧಿಸುವುದಾಗಿ ನಗರ ಪೊಲೀಸ್​ ಕಮಿಷನರ್​ ಡಾ. ಪಿ.ಎಸ್​. ಹರ್ಷ ಎಚ್ಚರಿಕೆ ನೀಡಿದ್ದಾರೆ.
ಮನೆಯಲ್ಲೇ ಇದ್ದು ಸರ್ಕಾರದ ಕಾನೂನನ್ನು ಪಾಲಿಸಬೇಕು. ಜಿಲ್ಲಾಧಿಕಾರಿಗಳ ಸೂಚನೆಯನ್ನು ಕೇಳಬೇಕು. ಅದು ಬಿಟ್ಟು ರಸ್ತೆಗೆ ಇಳಿದರೆ ಐಪಿಸಿ ಸೆಕ್ಷನ್​ 188, 269, 270ರಡಿ ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ. ಜನರು ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ಇನ್ಯಾವುದೇ ಕಾರಣಕ್ಕೂ ಮನೆಯಿಂದ ಹೊರಬೀಳಬಾರದು ಎಂದಿದ್ದಾರೆ.
ಚಿತ್ರ ನಿರ್ಮಾಪಕ, ಉದ್ಯಮಿ ಕಪಾಲಿ ಮೋಹನ್​ ಆತ್ಮಹತ್ಯೆಗೆ ಶರಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 3 =
Remember me
