ಮೈಸೂರು:ಸಂಸತ್ ಒಳಗೆ ನುಗ್ಗಿದ ಪ್ರಕರಣದಲ್ಲಿ ಬಂಧಿತನಾಗಿರುವ ಮೈಸೂರಿನ ಮನೋರಂಜನ್ ಕೊಠಡಿಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಮೂಲಕ ಸ್ನೇಹಿತ ಸಾಗರ್ ಶರ್ಮಾ ಹೆಸರಿನಲ್ಲಿ ಪಾಸ್ ಪಡೆದು ಮನೋರಂಜನ್ ಸಂಸತ್ ಭವನ ಪ್ರವೇಶಿಸಿ ತಲ್ಲಣ ಸೃಷ್ಟಿಸಿದ್ದ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ, ವಿಜಯನಗರದ 2ನೇ ಹಂತದಲ್ಲಿರುವ ಆರೋಪಿಯ ರೂಂಗೆ ಪೊಲೀಸರು ಬೀಗ ಹಾಕಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮನೋರಂಜನ್ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆತನ ಬ್ಯಾಂಕಿಂಗ್ ವ್ಯವಹಾರದ ಕುರಿತು ಸಹ ಮಾಹಿತಿ ಕಲೆ ಹಾಕಲಾಗುತ್ತಿದೆ. ‘ಆತ ಯಾವುದೇ ಖರ್ಚು ಮಾಡುತ್ತಿರಲಿಲ್ಲ. ಕೆಲಸವನ್ನೂ ಮಾಡುತ್ತಿರಲಿಲ್ಲ. ಆದರೂ ಬೆಂಗಳೂರು, ದೆಹಲಿಗೆ ಓಡಾಡುತ್ತಿದ್ದ’ ಎಂದು ಮನೋರಂಜನ್ ತಂದೆ ದೇವರಾಜೇಗೌಡ ತಿಳಿಸಿದ್ದಾರೆ. ಈ ರೀತಿ ಓಡಾಟಕ್ಕೆ ಹಣ ಎಲ್ಲಿಂದ ಬರುತ್ತಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಉತ್ತರಪ್ರದೇಶದ ಸಾಗರ್ ಶರ್ಮ ಮೈಸೂರಿಗೆ ಬಂದು ಹೋಗಿರುವುದು ಖಚಿತವಾಗಿದೆ. ಈ ಬಗ್ಗೆ ಮಾಹಿತಿ ಕೂಡ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಮನೋರಂಜನ್ ಮನೆಗೆ ಸಾಗರ್ 2 ಬಾರಿ ಬಂದಿದ್ದರ ಉದ್ದೇಶವೇನೆಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಮನೋರಂಜನ್ ಮಾತ್ರವಲ್ಲದೆ ನಗರದಲ್ಲಿ ಬೇರೆ ಇನ್ಯಾರನ್ನಾದರೂ ಸಾಗರ್ ಶರ್ಮ ಸಂಪರ್ಕ ಮಾಡಿದ್ದಾರಾ? ಎಲ್ಲೆಲ್ಲಿ ಓಡಾಡಿದ್ದ ಎನ್ನುವುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ. ನಗರದ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿ ಬಳಿಯೂ ಪರಿಶೀಲನೆ ನಡೆಸಲಾಗಿದೆ. ಪೊಲೀಸರು ತಂಡ ಸಂಸದರ ಕಚೇರಿಗೆ ಬಂದು ಹೋಗಿರುವವರ ಮಾಹಿತಿ ಸಂಗ್ರಹಿಸಿದೆ. ಹೀಗಾಗಿ ಈ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸಾಗರ್ ಡೈರಿ ಪತ್ತೆ:ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಒಬ್ಬನಾದ ಸಾಗರ್ ಶರ್ಮಾ ಮನೆಯಲ್ಲಿ ಡೈರಿಯೊಂದು ಪತ್ತೆ ಆಗಿದೆ. ಸಾಗರ್ 2015ರಲ್ಲಿ ಈ ದಿನಚರಿ ಬರೆಯಲಾರಂಭಿಸಿದ್ದು, ಆ ವರ್ಷದ ಜೂ.8ರಂದು ಡೈರಿಯ ಮೊದಲ ಪುಟದಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಎಂದು ಬರೆಯಲಾಗಿದೆ. ಡೈರಿ 30ಕ್ಕೂ ಹೆಚ್ಚು ಹೆಸರು, ಫೋನ್ ನಂಬರ್​ಗಳನ್ನು ಒಳಗೊಂಡಿದೆ. ಆ ಪೈಕಿ ಹಲವು ನಂಬರ್​ಗಳು ನಿಷ್ಕ್ರಿಯಗೊಂಡಿವೆ. ನಾನು ಶ್ರೀಮಂತನಲ್ಲ, ಮಧ್ಯಮ ವರ್ಗದವನು, ದೇಶಕ್ಕಾಗಿ ದುಡಿಯುವ ಕೆಲವು ಪ್ರಾಮಾಣಿಕ ಸ್ನೇಹಿತರು ನನಗೆ ಬೇಕು ಎಂದೂ ಬರೆದಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + fourteen =
Remember me
