ಮಳೆ, ಬಿಸಿಲೆನ್ನದೆ ಹಗಲು- ರಾತ್ರಿ ಜೀವದ ಹಂಗು ತೊರೆದು ಆಹಾರ ಹಾಗೂ ಇತರ ವಸ್ತುಗಳನ್ನು ಜನರ ಮನೆಬಾಗಿಲಿಗೆ ತಂದು ಕೊಡುವ ಗಿಗ್ ಕಾರ್ವಿುಕರಿಗೆ ಜೀವನ ಭದ್ರತೆ ಒದಗಿಸುವ ಯೋಜನೆಗೆ ಕಾಯ್ದೆ ಬಲ ನೀಡಲು ಸರ್ಕಾರ ಮುಂದಾಗಿದೆ.
ಸದ್ಯ ಗಿಗ್ ಕಾರ್ವಿುಕರಿಗೆ ನಾಲ್ಕು ಲಕ್ಷ ರೂ.ಗಳ ಆರೋಗ್ಯ ಹಾಗೂ ಅಪಘಾತ ವಿಮೆಯನ್ನು ತಲಾ ಎರಡು ಲಕ್ಷ ರೂ.ಗಳಂತೆ ನೀಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಇನ್ನಷ್ಟು ಕಲ್ಯಾಣ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ವಿುಕ ಸಚಿವ ಸಂತೋಷ್ ಲಾಡ್ ಹತ್ತಾರು ಸುತ್ತಿನ ಸಭೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಕಾಯ್ದೆ ರೂಪಿಸುವುದಾಗಿ ಘೋಷಣೆ ಮಾಡಿದ್ದರು. ಆನ್​ಲೈನ್ ಕೆಲಸಗಾರರೆಂದೇ ಗುರುತಿಸಲ್ಪಡುವ ಈ ಕಾರ್ವಿುಕರಿಗೆ ಸೌಲಭ್ಯ ನೀಡಲು ಸೆಸ್ ಸಂಗ್ರಹಿಸುವ ಮೂಲಕವೇ ಯೋಜನೆ ರೂಪಿಸಬೇಕಾಗುತ್ತದೆ. ಆದರೆ, ಕಾಯ್ದೆಯ ಬಲ ಇಲ್ಲವೆಂದರೆ ಸೆಸ್ ಸಂಗ್ರಹ ಅಷ್ಟು ಸುಲಭವಲ್ಲ. ಹಾಗಾಗಿ ಸರ್ಕಾರ ಪ್ರತ್ಯೇಕ ಕಾಯ್ದೆ ತರುತ್ತಿದೆ. ಮೊದಲನೇ ಪುಟದಿಂದ…
ಜುಲೈನಲ್ಲೇ ಮಂಡನೆ:ಪ್ಲ್ಲಾಟ್​ಫಾಮ್ರ್ ಆಧಾರಿತ ಗಿಗ್ ಕಾರ್ವಿುಕರ ನಿಧಿ ಕಲ್ಯಾಣ ಕಾರ್ಯಕ್ರಮ ಕಾಯ್ದೆ ಸಿದ್ಧಪಡಿಸುವ ಕೆಲಸ ಕಾರ್ವಿುಕ ಇಲಾಖೆಯಲ್ಲಿ ಅಂತಿಮ ಘಟ್ಟದಲ್ಲಿದೆ. ಜುಲೈನಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದು ತಕ್ಷಣ ಜಾರಿಗೆ ತರಲಾಗುತ್ತದೆ.
ಪ್ರತ್ಯೇಕ ಮಂಡಳಿ ರಚನೆ: ರಾಜ್ಯದಲ್ಲಿ ಅಂದಾಜು 70 ರಿಂದ 80 ಸಾವಿರ ಜನ ಗಿಗ್ ಕಾರ್ವಿುಕರಿದ್ದಾರೆ. ರಾಜಸ್ಥಾನದಲ್ಲಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಲಾಗಿದೆ. ಆದರೆ ರಾಜ್ಯದಲ್ಲಿ ಅಸಂಘಟಿತ ಕಾರ್ವಿುಕರ ಕಲ್ಯಾಣ ಮಂಡಳಿಯ ಮೂಲಕವೇ ಗಿಗ್ ಕಾರ್ವಿುಕರ ಕಲ್ಯಾಣ ಕಾರ್ಯಕ್ರಮ ಜಾರಿಗೆ ಬರಲಿವೆ. ಈ ಮಂಡಳಿಯ ಮೂಲಕವೇ ನೋಂದಣಿ ಮಾಡಲಾಗುತ್ತದೆ. ಪೂರ್ಣ ನೋಂದಣಿಯಾದ ನಂತರವಷ್ಟೇ ನಿಖರವಾಗಿ ಎಷ್ಟು ಜನರಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ. ನೋಂದಣಿಯಾಗುವ ಪ್ರತಿ ಕಾರ್ವಿುಕರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಅಮೆಜಾನ್, ಫ್ಲಿಪ್​ಕಾರ್ಟ್​ನಂತಹ ಚೈನ್​ಲಿಂಕ್ ಸಪ್ಲೇಯರ್ ಸಂಸ್ಥೆಗಳ ಕಾರ್ವಿುಕರಿಗೆ ಸದ್ಯಕ್ಕೆ ಗಿಗ್ ಕಾರ್ವಿುಕರೆಂದು ಪರಿಗಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಗಿಗ್ ವರ್ಕರ್ ಗುರುತಿಸಲು ಆ ಸಂಸ್ಥೆಯ ಶಿಫಾರಸಿನ ಜತೆಗೆ ದ್ವಿಚಕ್ರ ವಾಹನ ಹೊಂದಿರಬೇಕೆಂಬ ಷರತ್ತು ವಿಧಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಸೆಸ್ ಸಂಗ್ರಹ:ಗಿಗ್ ಕಾರ್ವಿುಕರಿಗೆ ನೆರವಾಗಲು ಕೇಂದ್ರ ಸರ್ಕಾರ ತ್ರೖೆಮಾಸಿಕ ಶುಲ್ಕ ವಿಧಿಸಿ ಎಂಬ ಸಲಹೆ ನೀಡಿತ್ತು. ಸಂಸ್ಥೆಗಳಿಂದ ವಾರ್ಷಿಕ ವಹಿವಾಟಿನ ಆಧಾರದಲ್ಲಿ ವಂತಿಗೆ ಸಂಗ್ರಹ ಮಾಡಬೇಕೆಂಬ ಸಲಹೆಯೂ ಇದೆ. ಆದರೆ ಆ ರೀತಿ ಮಾಡುವುದರಿಂದ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ. ಅದರ ಬದಲು ಪ್ರತಿ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಡೀಕರಿಸುವುದು ಹೆಚ್ಚಿನ ಅನುಕೂಲವೆಂಬ ಮತ್ತೊಂದು ವಾದ ಇದೆ. ಆದ್ದರಿಂದ ಆ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಚರ್ಚೆಯನ್ನು ಸರ್ಕಾರ ಮಾಡಲಿದೆ. ಬಹುತೇಕ ಸೆಸ್ ಸಂಗ್ರಹಕ್ಕೆ ಸರ್ಕಾರದ ಒಲವಿದೆ. ಪ್ರಮಾಣವನ್ನು ಕಾಯ್ದೆ ಅಂಗೀಕಾರದ ನಂತರ ರೂಪಿಸುವ ನಿಯಮಾವಳಿಗಳಲ್ಲಿ ಅಂತಿಮ ಮಾಡಲಾಗುತ್ತದೆ. ಕನಿಷ್ಠ 50 ಪೈಸೆಯಿಂದ 5 ರೂ.ತನಕ ವಿಧಿಸುವ ಬಗ್ಗೆ ಚರ್ಚೆಗಳಾಗಿವೆ. ಅದು ಸ್ಲ್ಯಾಬ್​ನಲ್ಲಿರುತ್ತದೆ ಎಂದು ಕಾರ್ವಿುಕ ಇಲಾಖೆಯ ಮೂಲಗಳು ಹೇಳಿವೆ.
ಪ್ರತ್ಯೇಕ ಸಾಫ್ಟ್​ವೇರ್:ಪ್ಲಾಟ್​ಫಾಮರ್್​ಗಳಿಂದ ಪ್ರತಿ ವಹಿವಾಟಿನ ಮೇಲೆ ಸೆಸ್ ಸಂಗ್ರಹದ ಮೇಲೆ ನಿಗಾವಹಿಸಲು ಪ್ರತ್ಯೇಕ ಸಾಫ್ಟ್​ವೇರ್ ರೂಪಿಸಲಾಗುತ್ತದೆ. ಸೆಸ್ ಪಾವತಿ ಸರಿಯಾಗಿ ಮಾಡದಿದ್ದರೆ ಅಂತಹ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳುವುದಕ್ಕೂ ಅವಕಾಶ ಇರುತ್ತದೆ. ಕಾರ್ವಿುಕರ ಕುಂದುಕೊರತೆಗಳಿಗೆ ಪರಿಹಾರ ನೀಡುವ ವ್ಯವಸ್ಥೆಯೂ ಇರಲಿದೆ.
ಅಪಘಾತ ಕ್ಲೇಮ್ ಹೆಚ್ಚು:ಸದ್ಯ ಜಾರಿಯಲ್ಲಿರುವ ಎರಡು ವಿಮೆಗಳಿಗೆ ಸಂಪೂರ್ಣ ಕಂತನ್ನು ಸರ್ಕಾರವೇ ಭರಿಸುತ್ತಿದೆ. ಅದಕ್ಕಾಗಿ 2 ಕೋಟಿ ರೂ. ಒದಗಿಸಿದೆ. ಅದರಲ್ಲಿ ಈ ವರ್ಷ ಅಪಘಾತದ ವಿಮಾ ಕ್ಲೇಮ್ಳ ಮೊತ್ತ ಸುಮಾರು 1 ಕೋಟಿ ರೂ.ಗಳಾಗಬಹುದೆಂದು ಅಂದಾಜು ಮಾಡಲಾಗಿದೆ.
ಮುಂದಿನ ಅಧಿವೇಶನದಲ್ಲೇ ಗಿಗ್ ಕಾರ್ವಿುಕರ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯುತ್ತೇವೆ. ಎಷ್ಟು ಸಂಪನ್ಮೂಲ ಸಂಗ್ರಹವಾಗುತ್ತದೆ ಎಂಬುದನ್ನು ಆಧರಿಸಿ ಸೌಲಭ್ಯ ಕೊಡುತ್ತೇವೆ. ಸಾಮಾಜಿಕ ಭದ್ರತೆ, ಆರೋಗ್ಯ ವಿಮೆ, ಶೈಕ್ಷಣಿಕ ಸೌಲಭ್ಯ ಹೀಗೆ ವಿವಿಧ ಸೌಲಭ್ಯ ಒದಗಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ.
| ಸಂತೋಷ್ ಲಾಡ್ ಕಾರ್ವಿುಕ ಸಚಿವ
ಏಳೆಂಟು ಕಾರ್ಯಕ್ರಮ:ಹೊಸ ವಿಧೇಯಕದ ಪ್ರಕಾರ ಈಗ ನೀಡುತ್ತಿರುವ ಎರಡು ವಿಮೆಗಳು ಸೇರಿ ಏಳೆಂಟು ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ನೀಡಲಿದೆ. ಪ್ರಮುಖವಾಗಿ ಗಿಗ್ ಕಾರ್ವಿುಕ ಮೃತಪಟ್ಟಾಗ ಕುಟುಂಬಕ್ಕೆ ಆರ್ಥಿಕ ನೆರವು, ಗಿಗ್ ಕಾರ್ವಿುಕರ ಮಕ್ಕಳಿಗೆ ಶೈಕ್ಷಣಿಕ ನೆರವು, ವೃದ್ಧಾಪ್ಯಕ್ಕೆ ಸೌಲಭ್ಯ, ಶಿಶು ವಿಹಾರ, ವಾಹನ ಖರೀದಿಗೆ ಸಾಲ ಸೌಲಭ್ಯದಂತಹ ನೆರವು ನೀಡಲಾಗುತ್ತದೆ.
ರಾಜಸ್ಥಾನ ಮಾದರಿ:ರಾಜಸ್ಥಾನ ಸರ್ಕಾರ ಗಿಗ್ ಕಾರ್ವಿುಕರ ಹಿತಕ್ಕಾಗಿಯೇ ವಿಧೇಯಕ ತಂದ ಮೊದಲ ರಾಜ್ಯವಾಗಿದೆ. ಇದೀಗ ಕರ್ನಾಟಕ ಈ ರೀತಿಯ ಕಾಯ್ದೆ ರೂಪಿಸುವ ಎರಡನೇ ರಾಜ್ಯವಾಗಲಿದೆ.
ರೇಣುಕಸ್ವಾಮಿ ನನಗೂ ಇಂಥದ್ದೇ ಸಂದೇಶ ಕಳಿಸಿದ್ದ; ಸಾಕ್ಷಿ ಸಮೇತ ವಿವರಿಸಿದ ನಟಿ ಚಿತ್ರಾಲ್ ರಂಗಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
