ಬೆಂಗಳೂರು:ಇವರೆಲ್ಲ ಒಂದು ರೀತಿಯಲ್ಲಿ ಬ್ರ್ಯಾಂಡೆಡ್ ಕಳ್ಳರು. ಏಕೆಂದರೆ ಇವರು ಕದಿಯುತ್ತಿದ್ದುದೇ ಬ್ರ್ಯಾಂಡೆಡ್ ಚಪ್ಪಲಿ-ಶೂಗಳನ್ನು. ಮಾರಕಾಸ್ತ್ರಗಳನ್ನು ಹಿಡಿದುಕೊಂಡು ರಾತ್ರಿಯಲ್ಲಿ ಅಪಾರ್ಟ್​​ಮೆಂಟ್​ಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಇವರಲ್ಲಿ ಒಬ್ಬನನ್ನು ಹಿಡಿಯುವಲ್ಲಿ ಭದ್ರತಾ ಸಿಬ್ಬಂದಿ ಸಾಹಸ ಮೆರೆದಿದ್ದಾರೆ.
ಜ. 27ರಂದು ಬೆಂಗಳೂರಿನ ವೈಟ್​ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಇಮ್ಮಡಿಹಳ್ಳಿಯ ಸಾನ್ವಿ ಅಪಾರ್ಟ್​ಮೆಂಟ್​ಗೆ ರಾತ್ರಿಯಲ್ಲಿ ನಾಲ್ವರು ಕಳ್ಳರು ನುಗ್ಗಿ ದುಬಾರಿ ಬೆಲೆಯ ಪಾದರಕ್ಷೆಗಳನ್ನು ಕದ್ದೊಯ್ಯಲು ಯತ್ನಿಸಿದ್ದರು.
ಇವರ ಬಳಿ ಮಾರಕಾಸ್ತ್ರಗಳಿದ್ದರೂ ಹೆದರದ ಸೆಕ್ಯುರಿಟಿ ಗಾರ್ಡ್​ಗಳಾದ ಜಗತ್ ಬೋರಾ ಹಾಗೂ ವಿಜಯ್ ಬೋರಾ ಈ ನಾಲ್ವರ ಪೈಕಿ ಒಬ್ಬನನ್ನು ಹಿಡಿದು ಇನ್ನುಳಿದವರು ಹೆದರಿ ಓಡಿಹೋಗುವಂತೆ ಮಾಡಿದ್ದರು. ಒಬ್ಬನನ್ನು ಹಿಡಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಸ್ಥಳಕ್ಕೆ ಬಂದ ವೈಟ್​ಫೀಲ್ಡ್ ಪೊಲೀಸರು ಸೆಕ್ಯುರಿಟಿ ಗಾರ್ಡ್​ಗಳ ಕೈಗೆ ಸಿಕ್ಕಿಬಿದ್ದಿದ್ದ ರಾಜು ಎಂಬಾತನನ್ನು ವಶಕ್ಕೆ ಪಡೆದಿದ್ದರು. ರಾಜು ಮತ್ತು ತಂಡ ಬ್ರ್ಯಾಂಡೆಡ್​ ಚಪ್ಪಲಿ-ಶೂ ಕದ್ದು ಅವುಗಳಿಗೆ ಪಾಲಿಷ್ ಮಾಡಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಿತ್ತು. ಇವರು ಬನ್ನೇರುಘಟ್ಟ ಹಾಗೂ ಮೈಕೋ ಲೇಔಟ್​ ಮುಂತಾದ ಕಡೆಯೂ ಕಳ್ಳತನ ನಡೆಸಿರುವುದು ತಿಳಿದುಬಂದಿದೆ. ಈ ಕಳ್ಳರನ್ನು ಹಿಮ್ಮೆಟ್ಟಿಸುವ ಜತೆಗೆ ಒಬ್ಬನನ್ನು ಹಿಡಿದು ಸಾಹಸ ಮೆರೆದ ಸೆಕ್ಯುರಿಟಿ ಗಾರ್ಡ್​ಗಳಿಗೆ ಡಿಸಿಪಿ ಎಸ್​.ಗಿರೀಶ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seventeen =
Remember me
