ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಒಂದು ತಾಸು ಪ್ರಧಾನಿಗಳು ನಡೆಸಿದ ರೋಡ್​ ಶೋವನ್ನ ಕಣ್ತುಂಬಿಕೊಳ್ಳು ಲಕ್ಷಾಂತರ ಜನರು ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲೂ ಕಾಯುತ್ತಾ ನಿಂತಿದ್ದರು. ಈ ವೇಳೆ ಭದ್ರತಾಲೋಪ ಕಂಡು ಬಂದಿದೆ. ಬಿಗಿ ಭದ್ರತೆಯನ್ನೂ ಮೀರಿ ಬ್ಯಾರಿಕೇಡ್​ ದಾಟಿ ಬಾಲಕನೊಬ್ಬ ಹಾರ ಹಿಡಿದು ಪ್ರಧಾನಿ ಕಾರಿನತ್ತ ನುಗ್ಗಿ ಬಂದ ಘಟನೆ ಗುರುವಾರ ಮಧ್ಯಾಹ್ನ ನಡೆಯಿತು.
ಪ್ರಧಾನಿಗಳು ರೋಡ್​ ಶೋ ನಡೆಸುತ್ತಿದ್ದ ವೇಳೆ ಖುದ್ದು ಮೋದಿ ಅವರ ಕೈಗೆ ಹೂವಿನ ಹಾರ ಕೊಡಲು ಬಾಲಕನೊಬ್ಬ ಹಾರ ಹಿಡಿದು ಮೋದಿ ಅವರ ಕಾರಿನತ್ತ ನುಗ್ಗಿದ್ದಾನೆ. ತಕ್ಷಣ ಬಾಲಕನನ್ನ ವಶಕ್ಕೆ ಪಡೆದು ಆತನ ಕೈಯಿಂದ ಹಾರವನ್ನ ಸಿಬ್ಬಂದಿ ಕಿತ್ತುಕೊಂಡರು. ಅತ್ತ ಆ ಹಾರವನ್ನ ಪಡೆದ ಮೋದಿ ಅದನ್ನು ತಮ್ಮ ಕಾರಿನ ಮೇಲೆ ಹಾಕಿದರು.
ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸೇರಿದಂತೆ ಬಹುತೇಕ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಆದರೂ ಬಾಲಕನೊಬ್ಬ ಬ್ಯಾರಿಕೇಡ್​ ದಾಟಿ ಮೋದಿ ಅವರ ಕಾರಿನತ್ತ ನುಗ್ಗಿ ಕ್ಷಣ ಕಾಲ ಆತಂಕ ಸೃಷ್ಟಿಸಿದ್ದ.
ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ: ಒಂದು ತಾಸು ರೋಡ್ ಶೋ, ದಾರಿಯುದ್ದಕ್ಕೂ ಜೈಕಾರ.. ಘೋಷಣೆ…

6 ಐಪಿಎಸ್ ಅಧಿಕಾರಿಗಳ ವರ್ಗಾವಣೆ‌: ತಿಂಗಳು ತುಂಬುವ ಮುನ್ನವೇ 2 ಬಾರಿ ಆರ್​.ಚೇತನ್​ ವರ್ಗಾವಣೆ

‘
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − six =
Remember me
