ಬೆಂಗಳೂರು:ಪೌರ ಕಾರ್ಮಿಕರನ್ನು ಕಂಡರೆ ಗೌರವದಿಂದ ಕಾಣುವ ಬದಲು ದೂರ ಹೋಗುವವರೇ ಹೆಚ್ಚಾಗಿದ್ದಾರೆ. ಆದರೆ, ಇದಕ್ಕೆ ವೈರುದ್ಯವೆಂಬಂತೆ ಬ್ಯೂಟಿ ಪಾರ್ಲರ್‌ನಲ್ಲಿ ಪೌರ ಕಾರ್ಮಿಕರಿಗೆ ಮೇಕಪ್ ಮಾಡಿ ಗೌರವ ಸಲ್ಲಿಸಿದ ವೀಡಿಯೋ ವೈರಲ್ ಆಗಿದೆ.
ಬೆಂಗಳೂರಿನ ರಾಜಾಜಿನಗರದ ಎಂ5 ಬ್ಯೂಟಿ ಸ್ಪಾದ ಬ್ಯೂಟೀಷಿಯನ್ ಅಂಬುಜಾಗೌಡ ಅವರು ಬೀದಿ ಸ್ವಚ್ಛಗೊಳಿಸುವ ನಾಲ್ವರು ಪೌರ ಕಾರ್ಮಿಕರಿಗೆ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಬೀದಿ ಗುಡಿಸುವವರನ್ನು ಬ್ಯೂಟಿ ಪಾರ್ಲರ್‌ಗೆ ಕರೆದೊಯ್ದು, ಅವರ ಮುಖ, ಕೂದಲು, ಕಾಲುಗಳನ್ನು ಸ್ವಚ್ಛಗೊಳಿಸಿ, ಮುಖಕ್ಕೆ ಫೇಷಿಯಲ್ ಮಾಡಿ ನಂತರ ಮೇಕಪ್ ಮಾಡಿದ್ದಾರೆ. ಅದಾದ ನಂತರ ನಾಲ್ವರನ್ನೂ ಕೂರಿಸಿ ಸನ್ಮಾನ ಮಾಡಿ, ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಅದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದೀಗ ವೈರಲ್​ ಆಗಿದೆ.
ನನ್ನ ತಾಯಿ ಕೂಡ ಮುಟ್ಟದಷ್ಟು ಕೊಳಚೆ ತ್ಯಾಜ್ಯವನ್ನು ಪೌರಕಾರ್ಮಿಕ ಮಹಿಳೆಯರು ಸ್ವಚ್ಛಗೊಳಿಸುತ್ತಾರೆ. ಹೀಗಾಗಿ, ದೊಡ್ಡವರನ್ನು ಕರೆಸಿ ಸನ್ಮಾನ ಮಾಡುವ ಬದಲು ನಮ್ಮ ಬೀದಿಯಲ್ಲಿ ಕಸ ಗುಡಿಸುವ ನಾಲ್ವರು ಪೌರಕಾರ್ಮಿಕರಿಗೆ ಮೇಕಪ್ ಮಾಡಿ ಗೌರವ ಸಲ್ಲಿಸಿದ್ದೇನೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ.– ಅಂಬುಜಾಗೌಡ,ಬ್ಯೂಟೀಷಿಯನ್
ನಾವು ಜೀವನದಲ್ಲಿ ಈವರೆಗೆ ಬ್ಯೂಟಿ ಪಾರ್ಲರ್ ಒಳಗಡೆ ವ್ಯವಸ್ಥೆ ಹೇಗಿರುತ್ತದೆ ಎಂಬುದನ್ನೇ ನೋಡಿರಲಿಲ್ಲ. ಆದರೆ, ಅಂಬುಜಾ ಅವರು ನಮಗೆ ಮುಖ, ಕೂದಲು, ಕಾಲು ತೊಳೆದು ಗೌರವಿಸಿದಾಗ ತಡೆಯಲಾಗದೆ ಭಾವುಕರಾಗಿದ್ದೆವು.– ರತ್ನಾ,ಪೌರಕಾರ್ಮಿಕ ಮಹಿಳೆ
ಈ ಪೌರ ಕಾರ್ಮಿಕರಿಗೆ ಸಿಕ್ಕ ಗೌರವ ನೋಡಿ.. ಇದು ನಿಜವಾದ ಮಹಿಳಾ ದಿನಾಚರಣೆ!ಬೆಂಗಳೂರಿನ ರಾಜಾಜಿನಗರದ ಎಂ5 ಬ್ಯೂಟಿ ಸ್ಪಾದ ಬ್ಯೂಟೀಷಿಯನ್ ಅಂಬುಜಾಗೌಡ ಅವರು ಮಹಿಳಾ ದಿನಾಚರಣೆಯನ್ನು ಆಚರಿಸಿದ ಪರಿ ಇದು..#Bangalore#WomensDaypic.twitter.com/MNf6bd5gW7
— Vijayavani (@VVani4U)March 10, 2021

ಮಾಡೆಲಿಂಗ್​ ಕನಸಿನೊಂದಿಗೆ ಬೆಂಗಳೂರಿಗೆ ಹೊರಟಿದ್ದ ಯುವತಿ ನೇಣಿಗೆ ಶರಣು! ಸಾವಿನ ಹಿಂದೆ ಗಾಂಜಾ ಮಾಫಿಯಾದ ಕೈ?

ಹೆಣದ ಮೂಗಿಗೆ ಹತ್ತಿ ಇಡುವುದು ಏಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
