ಬಳ್ಳಾರಿ:ಈಗಾಗಲೇ ಬೇಸಿಗೆ ಬೇಗೆ ಆರಂಭವಾಗಿದ್ದು, ಎಲ್ಲೆಂದರಲ್ಲಿ ಬಿರುಬಿಸಿಲು ಸುಡತೊಡಗಿದೆ. ವಾತಾವರಣ ಹೀಗಿರುವಾಗ ಹೊರಗೆ ಹೋಗಿರುವ ವಾಹನ ಸವಾರರಿಗೆ ಈಗ ಮತ್ತೊಂದು ಆತಂಕ ಎದುರಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಬಿಸಿಲಿನಲ್ಲಿ ಬೈಕ್​ ನಿಲ್ಲಿಸುವಾಗಲೂ ಒಮ್ಮೆ ಯೋಚಿಸುವಂತಾಗಿದೆ.
ಏಕೆಂದರೆ ಬಿಸಿಲಿನಲ್ಲಿ ನಿಲ್ಲಿಸಲಾಗಿದ್ದ ಬೈಕ್​ವೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬಳ್ಳಾರಿಯ ಪಾಲಿಕೆ ಆವರಣದಲ್ಲಿ ನಿಲುಗಡೆ ಮಾಡಿದ್ದ ಬಜಾಜ್​ ಪಲ್ಸರ್​ ಬೈಕ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಸನ್ನಿವೇಶವೊಂದು ಶನಿವಾರ ಸೃಷ್ಟಿಯಾಗಿದೆ.
ಕುಡಿತಿನಿ ಮೂಲದ ಯುವಕನೊಬ್ಬ ತನ್ನ ಪಲ್ಸರ್ ಬೈಕ್​ಅನ್ನು ಪಾಲಿಕೆ ಆವರಣದ ರಾಜ್‌ಕುಮಾರ್ ಉದ್ಯಾನದ ಮುಂಭಾಗ ನಿಲ್ಲಿಸಿದ್ದ. ಹೀಗೆ ಪಾರ್ಕ್​ ಮಾಡಲಾಗಿದ್ದ ಬೈಕ್​ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅದನ್ನು ನೋಡಿ ಗಾಬರಿಗೊಂಡ ಅಕ್ಕಪಕ್ಕದವರು ನೀರು ಹಾಕಿ ಬೆಂಕಿ ನಂದಿಸಲು ಯತ್ನಸಿದ್ದಾರೆ. ಆದರೆ, ಈ ವೇಳೆಗಾಗಲೇ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಕೆಳಬದಿಯಲ್ಲಿರುವ ಬಹುಪಾಲು ಭಾಗ ಸುಟ್ಟು ಕರಕಲಾಗಿತ್ತು.
ಇದನ್ನು ಓದಿ:ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ
ಯುವಕ ರಾಜ್‌ಕುಮಾರ್ ಉದ್ಯಾನಕ್ಕೆ ಬಂದಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಬಿಸಿಲಿನಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದ ಪರಿಣಾಮ, ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ತಕ್ಷಣ ಅದನ್ನು ನೋಡಿ ನಂದಿಸುವ ಪ್ರಯತ್ನ ಮಾಡದಿದ್ದಲ್ಲಿ ಹಾನಿಯ ಪ್ರಮಾಣ ಜಾಸ್ತಿ ಆಗಿರುತ್ತಿತ್ತು ಹಾಗೂ ಅಪಾಯ ಸಂಭವಿಸುವ ಸಾಧ್ಯತೆಯೂ ಇತ್ತು ಎನ್ನಲಾಗಿದೆ.

ಇದನ್ನೂ ಓದಿ:ಇಂಥ ಮದುವೆ ಇನ್ಯಾವುದೂ ಆಗೇ ಇಲ್ಲ ಅನಿಸುತ್ತೆ!: ತೋಟದಲ್ಲೇ ಲಗ್ನ, ಸೈಕಲಲ್ಲೇ ದಿಬ್ಬಣ; ಒಟ್ಟು ಖರ್ಚೆಷ್ಟು ಗೊತ್ತಾ?
ತಿಂಗಳ ಹಿಂದೆ ಮದುವೆಯಾಗಿದ್ದವಳು ಅಪಘಾತಕ್ಕೆ ಬಲಿ! ಗಂಡನ ಸ್ಥಿತಿ ಗಂಭೀರ

ಮೊದ್ಲು ನಿನ್ನ ಅಕ್ಕ-ತಂಗಿಯರನ್ನು ಕೇಳು ಅವ್ರು ಮಾಡಿದ್ರೆ ನಾನು ಮಾಡ್ತೀನಿ: ನೆಟ್ಟಿಗನಿಗೆ ಶಾಕ್​ ಕೊಟ್ಟ ಪ್ರಿಯಾಮಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
