ಬೆಂಗಳೂರು:‘ಕರೊನಾ ಸೋಂಕು ತಗುಲಿದೆ’ ಎಂದು ತಿಳಿದಾಗ ಠಾಣೆಯಲ್ಲೇ ಕುಗ್ಗಿ ಹೋಗಿದ್ದೆ. ಈ ಕಾಯಿಲೆ ಬಂದರೆ ಸತ್ತೇ ಬಿಡುತ್ತೇನೆ ಎಂಬ ಭಯ ಎಲ್ಲರಂತೆ ನನ್ನನ್ನೂ ಕಾಡಿತು. ಮೊದಲೆರಡು ದಿನ ಭಯದಲ್ಲೇ ಅತ್ತಿದ್ದೆ. ವೈದ್ಯರು ಪಿಪಿಇ ಕಿಟ್ ಧರಿಸಿ, ಉಸಿರಾಡಲು ಗಾಳಿ ಕೊರತೆ ನಡುವೆಯೂ ಪ್ರಾಣದ ಹಂಗು ತೊರೆದು ನೂರಾರು ರೋಗಿಗಳಿಗೆ ಸೇವೆ ಮಾಡುತ್ತಿರುವುದು ಕಂಡು ಅವರ ಕಷ್ಟದ ಮುಂದೆ ನನ್ನದೇನೂ ಅಲ್ಲ ಎನ್ನಿಸಿತು..
ಇದು ಕರ್ತವ್ಯದ ವೇಳೆ ಕರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ಸಂಪೂರ್ಣ ವಾಗಿ ಗುಣಮುಖರಾದದ ಪುಲಕೇಶಿನಗರ ಸಂಚಾರ ಠಾಣೆ ಮುಖ್ಯಪೇದೆ ಗುರುಮೂರ್ತಿ ವಿಜಯವಾಣಿ ಜತೆ ಹಂಚಿಕೊಂಡ ಮಾತು.
ಲಾಕ್​ಡೌನ್ ವೇಳೆ ಬಂಬೂಬಜಾರ್, ಫ್ರೇಜರ್ ಟೌನ್ ಚೆಕ್​ಪೋಸ್ಟ್ ಹೀಗೆ ದಿನಕ್ಕೊಂದು ಕಡೆ ಬಂದೋಬಸ್ತ್ ಡ್ಯೂಟಿಗೆ ನಿಯೋಜನೆಗೊಂಡಿದ್ದೆ. ಡಿಜಿಪಿ ಆದೇಶದಂತೆ ಎಲ್ಲ ಸಿಬ್ಬಂದಿಗೂ ರ್ಯಾಂಡಂ ಪರೀಕ್ಷೆ ನಡೆಸಲಾಯಿತು. ಮೇ 22ರಂದು ಮೊದಲ ಪಾಳಿಯ ಕರ್ತವ್ಯಕ್ಕೆ ಹಾಜರಾಗಿದ್ದೆ. ಬೆಳಗ್ಗೆ 7.45ರಲ್ಲಿ ಅನಾಮಿಕ ನಂಬರ್​ನಿಂದ ಕರೆ ಬಂತು, ಆರೋಗ್ಯ ಇಲಾಖೆಯಿಂದ ಮಾತನಾಡುತ್ತಿರುವುದಾಗಿ ಹೇಳಿದರು. ನಿಮಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬರುತ್ತದೆ ಎಂದು ತಿಳಿಸಿದರು. ಆ ಕ್ಷಣ ನನ್ನಲ್ಲಿ ಒಂದು ರೀತಿಯ ಭಯ ಆವರಿಸಿತು. ಸೋಂಕಿನ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಯಾವುದೊಂದೂ ಇರಲಿಲ್ಲ. ನನ್ನ ಕತೆ ಮುಗಿಯಿತು ಎಂದೆನಿಸಿತು. ಕರೊನಾ ಬಂದರೆ ಸತ್ತೇ ಬಿಡುತ್ತಾರೆ. ಬದುಕಿ ಉಳಿಯುವುದು ಕಷ್ಟ ಎಂಬ ಮಾತುಗಳು ಕಿವಿಯಲ್ಲಿ ಗುಂಯ್ಗುಡುತ್ತಿದ್ದವು. ಆಸ್ಪತ್ರೆಗೆ ದಾಖಲಾದ ಬಳಿಕ ಬೆಡ್ ಮೇಲೆಯೆ ಕಣ್ಣೀರಿಟ್ಟೆ. ಮನೆಯವರಿಗೆ ವಿಷಯ ತಿಳಿದ ಬಳಿಕ ಫೋನ್ ಮಾಡಿ ಕಣ್ಣೀರಿಟ್ಟರು.
ಧೈರ್ಯ ತುಂಬಿದ ಅಧಿಕಾರಿ, ಸಹೋದ್ಯೋಗಿಗಳು
ಆಸ್ಪತ್ರೆಗೆ ದಾಖಲಾದ ಬಳಿಕ ಇನ್​ಸ್ಪೆಕ್ಟರ್ ಗಣೇಶ್, ಎಸಿಪಿ ಹಾಗೂ ಡಿಸಿಪಿ ನಾರಾಯಣ ಕರೆ ಮಾಡಿ, ‘ಡೋಂಟ್ ವರಿ! ನಿನ್ನ ಜತೆ ನಾವಿದ್ದೇವೆ. ಅಂತಾದ್ದೇನೂ ಆಗುವುದಿಲ್ಲ. ಶೀಘ್ರ ಗುಣಮುಖರಾ ಗುತ್ತೀಯಾ’ ಎಂದು ಧೈರ್ಯ ತುಂಬಿದರು. ಆಸ್ಪತ್ರೆಯಲ್ಲಿ ಬೆಡ್ ಮುಂದೆಯೇ ಪ್ರಾಣಾಯಾಮ, ಯೋಗಾಸನ ಮಾಡುತ್ತಿದ್ದೆ. 5 ದಿನದ ಬಳಿಕ ಗಂಟಲು ದ್ರವ, ರಕ್ತವನ್ನು ಮತ್ತೆ ಪರೀಕ್ಷೆ ನಡೆಸಿದರು. ಆಗ ವರದಿ ನೆಗೆಟಿವ್ ಬಂದಿತು ಎಂದು ಗುರುಮೂರ್ತಿ ತಿಳಿಸಿದರು.
ಸೋಂಕು ಹರಡಿಸಿದ ಪಾಪಪ್ರಜ್ಞೆ ಕಾಡಿತು
ಕರ್ತವ್ಯದ ವೇಳೆ ಸೋಂಕು ತಗುಲಿದರೆ ಕುಟುಂಬದ ಎಲ್ಲರಿಗೂ ಕರೊನಾ ಬರಬಹುದು ಎಂಬ ಮುನ್ನೆಚ್ಚರಿಕೆಯಿಂದ, ಮೇ 8ರಂದು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಊರಿಗೆ ಕಳುಹಿಸಿದ್ದೆ. ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ ಮಹಿಳಾ ಪೇದೆಯೊಬ್ಬರನ್ನು ಬೈಕ್​ನಲ್ಲಿ ಪೇಯಿಂಗ್ ಗೆಸ್ಟ್​ಗೆ ಬಿಟ್ಟು ಬಂದಿದ್ದೆ. ನನ್ನಿಂದಾಗಿ ಎಲ್ಲ ಸಿಬ್ಬಂದಿಗೂ ಮತ್ತು ಅವರ ಕುಟುಂಬಗಳಿಗೂ ಸೋಂಕು ಹರಡಬಹುದು ಎಂಬ ಪಾಪಪ್ರಜ್ಞೆ ಕಾಡಿತು. ದೇವರ ದಯೆಯಿಂದ ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ ಎಂದು ಗುರುಮೂರ್ತಿ ಹೇಳಿದರು.
| ಯಂಕಣ್ಣ ಸಾಗರ್
ಮತ್ತೆ ನೆರೆ ಬಂದ್ರೆ ದೇವರೇ ಗತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 9 =
Remember me
