ಬೆಂಗಳೂರು:ರಾಜಧಾನಿ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯ ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳಿಗೆ ಠಾಣೆಯಲ್ಲೇ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನಡೆಸಲಾಗಿದೆ.
ಕಾನ್‌ಸ್ಟೇಬಲ್‌ಗಳಾದ ನೀಲವ್ವ ಹಾಗೂ ಪ್ರಿಯಾಂಕ ಪಾಟೀಲ್ ಅವರಿಗೆ ಸೀರೆ, ಬಳೆ ಹಾಗೂ ಹೂ-ಹಣ್ಣು ಕೊಟ್ಟು ಮಡಿಲು ತುಂಬುವ ಶಾಸ್ತ್ರವನ್ನು ಅದೇ ಠಾಣೆಯ ಇತರೆ ಮಹಿಳಾ ಕಾನ್‌ಸ್ಟೇಬಲ್‌ಗಳು ನೆರೆವೇರಿಸಿದರು.
ಹನುಮಂತರ ಠಾಣೆಯ ಮಹಡಿಯಲ್ಲಿ ಈ ಕಾರ್ಯಕ್ರಮ ಜರುಗಿತು. ಸಿಬ್ಬಂದಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿ.ವಿ.ಪುರ ಉಪ ವಿಭಾಗದ ಎಸಿಪಿ ನಾಗರಾಜ್‌, ಇನ್ಸ್‌ಪೆಕ್ಟರ್‌ ವಿನೋದ್ ಭಟ್‌ ಹಾಗೂ ಸಬ್ ಇನ್ಸ್‌ಪೆಕ್ಟರ್‌ ಸನೀಲ್ ಕಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.
ವಿಶೇಷವೆಂದರೆ ಹನುಮಂತನಗರ ಠಾಣೆಯಲ್ಲೇ ನೀಲವ್ವ ಹಾಗೂ ಅವರ ಪತಿ ಶರಣ ಬಸವ ಕಾನ್‌ಸ್ಟೇಬಲ್‌ಗಳಾಗಿದ್ದು, ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್‌)ಯಲ್ಲಿ ಪ್ರಿಯಾಂಕ ಪತಿ ಮಲ್ಲಿಕಾರ್ಜುನ್ ಕಾನ್‌ಸ್ಟೇಬಲ್ ಆಗಿದ್ದಾರೆ. ಈ ಪೊಲೀಸ್ ದಂಪತಿಗಳಿಗೆ ಪೊಲೀಸರೇ ಸತ್ಕರಿಸಿದ್ದು ಮೆಚ್ಚುಗೆ ಪಡೆಯಿತು.

ಮೇನಕಾ ಗಾಂಧಿ ಹೇಳಿಕೆ ಸುಳ್ಳು ಎಂದು ಖಂಡನೆ ವ್ಯಕ್ತಪಡಿಸಿದ ಇಸ್ಕಾನ್​

ಒಂದು ಪೊಂಗಲ್ ತಿನ್ನುವ ಸಮಯದಲ್ಲಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು: ಬಿಜೆಪಿ ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
