ಬಾಗಲಕೋಟೆ:ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಣ ಹಂಚಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಮತ್ತೊಂದು ಕಡೆ ದಾಖಲೆರಹಿತ ಕೋಟಿಗಟ್ಟಲೆ ಮೊತ್ತ ಸಿಕ್ಕಿದೆ. ಅದರಲ್ಲೂ ವಾಹನವೊಂದರಲ್ಲೇ ಕಂತೆ ಕಂತೆ ನೋಟುಗಳು ಸಿಕ್ಕಿದ್ದು, 5 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಪೊಲೀಸರನ್ನೂ ಬಿಡದ ನಕಲಿ; ಫೇಕ್​ ಅಕೌಂಟ್​ನಿಂದ ಮಾಡಿದ್ದ ಟ್ವೀಟ್ ಕೂಡ ವೈರಲ್!
ಮುಧೋಳ ಚುನಾವಣಾಧಿಕಾರಿಗಳು, ಫ್ಲೈಯಿಂಗ್​ ಸ್ಕ್ವಾಡ್​ ಹಾಗೂ ಲೋಕಾಪುರ ಪೊಲೀಸರು ಜತೆಯಾಗಿ ಲೋಕಾಪುರ ಪಟ್ಟಣ ಬಳಿ ಕಾರ್ಯಾಚರಣೆ ನಡೆಸಿದ್ದಾರೆ. ಲೋಕಾಪುರ ಬಳಿ ಲಕ್ಷಾನಟ್ಟಿ ಚೆಕ್​ಪೋಸ್ಟ್​​ನಲ್ಲಿ ನಿನ್ನೆ ರಾತ್ರಿ ವಾಹನ ತಪಾಸಣೆ ವೇಳೆ ಈ ಅಪಾರ ಪ್ರಮಾಣದ ಹಣ ಸಿಕ್ಕಿದೆ.
ಇದನ್ನೂ ಓದಿ:ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!
ಬೊಲೆರೊ ವಾಹನದಲ್ಲಿ ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಈ ಹಣ ಸಾಗಿಸಲಾಗುತ್ತಿದ್ದು, ಇದು ಯೂನಿಯನ್ ಬ್ಯಾಂಕ್​ಗೆ ಸೇರಿದ ಹಣ, ಹುಬ್ಬಳ್ಳಿ ಶಾಖೆಯಿಂದ ಮುಧೋಳ ಶಾಖೆಗೆ ಒಯ್ಯಲಾಗುತ್ತಿದೆ ಎನ್ನಲಾಗಿತ್ತು. ಆದರೆ ಸೂಕ್ತ ದಾಖಲೆ ನೀಡಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಹಣ ಜಪ್ತಿ ಮಾಡಿಕೊಂಡು, ವಾಹನದಲ್ಲಿದ್ದ ಐವರನ್ನು ವಶಕ್ಕೆ ಪಡೆದು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.
ಸಂಬಂಧಿಯಿಂದಲೇ ಭೀಕರ ಕೃತ್ಯ: ಅಣ್ಣನ ಹೆಂಡತಿ ಹಾಗೂ ಮಗನನ್ನು ಹೊಡೆದು ಕಡಿದು ಕೊಂದ

ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
