| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಅತ್ಯಾಚಾರ, ಹಲ್ಲೆಯಂತಹ ದೌರ್ಜನ್ಯಗಳನ್ನು ಧೈರ್ಯವಾಗಿ ಎದುರಿಸಿನಿಲ್ಲುವ ಶಕ್ತಿ, ಸಾಮರ್ಥ್ಯವನ್ನು ರಾಜ್ಯದ ಮಹಿಳೆಯರಲ್ಲಿ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ವರ್ಷದಲ್ಲಿ ‘ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ ಯೋಜನೆ’ಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. ಮಹಿಳೆಯರ ಮೇಲಿನ ಅಪರಾಧ ತಗ್ಗಿಸುವ ನಿಟ್ಟಿನಲ್ಲಿ ಇದು ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ.
ದೆಹಲಿಯ ನಿರ್ಭಯಾ ಪ್ರಕರಣ, ಹೈದರಾಬಾದ್​ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ, ಉತ್ತರಪ್ರದೇಶದ ಹಥ್ರಾಸ್​ನಂತಹ ಪ್ರಕರಣಗಳಿಗೆ ರಾಜ್ಯದಲ್ಲಿ ಆಸ್ಪದವಾಗಬಾರದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ನಿರ್ಭಯಾ ಕಾನೂನಿನಲ್ಲಿ ತರಬೇತಿ ಪಡೆದ ಮಹಿಳಾ ಪಡೆ ಸಜ್ಜುಗೊಳಿಸುವ ಬಗ್ಗೆ ಹೇಳಿರುವುದರಿಂದ ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ದುರ್ಘಟನೆ ನಡೆದ ನಂತರ ಪೊಲೀಸರು ಹೋಗಿ ಕಾನೂನು ಪ್ರಕ್ರಿಯೆ ನಡೆಸುವುದಕ್ಕಿಂತ ಅಂತಹ ಘಟನೆಗಳೇ ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಂಡು ದುರ್ಘಟನೆಗಳಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತೆ ಮಹಿಳೆಯರನ್ನು ಸಿದ್ಧಗೊಳಿಸುವುದು ಸರ್ಕಾರದ ಉದ್ದೇಶ.
ಸರಳ ತರಬೇತಿ: ಮಹಿಳೆಯರು ಒಬ್ಬರೇ ಇರುವ ಸಂದರ್ಭಗಳಲ್ಲಿ ಅವರಿಗೆ ಸಂಕಷ್ಟ ಎದುರಾಗುವುದು ಹೆಚ್ಚು. ಅಂತಹ ವೇಳೆ ಧೈರ್ಯ ಮುಖ್ಯವಾಗಿರುತ್ತದೆ. ಸರಳ ರಕ್ಷಣಾತ್ಮಕ ಹಾಗೂ ಅಕ್ರಮಣಕಾರಿಯಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ಅತ್ಯಾಚಾರ, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ, ವರದಕ್ಷಿಣೆಗಾಗಿ ಹಿಂಸೆ ನೀಡುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರತ್ಯೇಕ ಕಾನೂನು ತರುವುದಕ್ಕಿಂತ ಮಹಿಳೆಯರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತೆ ಸಜ್ಜುಗೊಳಿಸಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಂಡ ಕನಸು ಈಗ ಯೋಜನೆಯ ರೂಪ ಕಂಡಿದೆ.
ಪ್ರಸ್ತಾವನೆ ಸಲ್ಲಿಕೆ:ನಿರ್ಭಯ ನಿಧಿಯಲ್ಲಿ ಹಣ ಬಳಕೆ ಮಾಡಿಕೊಳ್ಳುವುದರ ಹೆಚ್ಚಿನ ಹಣಕ್ಕಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಸ್ತ್ರೀಯರಿಗೆ ಶೀಘ್ರ ಆತ್ಮರಕ್ಷಣೆ ಪಾಠ
* ದೈಹಿಕ ತರಬೇತಿ ಜತೆಯಲ್ಲೇ ಮಾನಸಿಕ ಧೈರ್ಯವರ್ಧನೆ
* 22 ಪೊಲೀಸ್ ಶಾಲೆಗಳಲ್ಲಿ ನಾಲ್ಕು ತಿಂಗಳ ತರಬೇತಿ
* ನಿವೃತ್ತ ಅಧಿಕಾರಿಗಳ ತಂಡದಿಂದ ಪಠ್ಯದ ಸಿದ್ಧತೆ
ಹೇಗಿರುತ್ತದೆ ತರಬೇತಿ?
*ಒಟ್ಟು ನಾಲ್ಕು ತಿಂಗಳ ಅವಧಿ
*ಆಯ್ಕೆ ಆಗುವವರಿಗೆ ಊಟ, ವಸತಿ ವ್ಯವಸ್ಥೆ
*ಪ್ರತಿ ಬ್ಯಾಚ್​ಗೆ 100-120 ಮಹಿಳೆಯರ ಆಯ್ಕೆ
*ವರ್ಷಕ್ಕೆ ಮೂರು ಬ್ಯಾಚ್​ನಲ್ಲಿ ತರಬೇತಿ
ಆರಂಭ ಯಾವಾಗ?
ತರಬೇತಿಯನ್ನು ಜನವರಿ ಕೊನೆಯಲ್ಲಿ ಆರಂಭಿಸಲು ಸರ್ಕಾರ ಆಸಕ್ತವಾಗಿದೆ. ಒಂದೊಮ್ಮೆ ವಿಘ್ನ ಎದುರಾದರಷ್ಟೇ ಫೆಬ್ರವರಿ 2ನೇ ವಾರದಲ್ಲಿ ಆರಂಭಿಸಲಾಗುತ್ತದೆ.
ಉದ್ದೇಶವೇನು?
*ಮಹಿಳೆಯರಲ್ಲಿ ರಕ್ಷಣೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು
*ಮಹಿಳೆಯರ ಕಳ್ಳ ಸಾಗಾಣಿಕೆಗೆ ಬ್ರೇಕ್ ಹಾಕುವುದು
*ದೌರ್ಜನ್ಯ ತಡೆ ಸಾಮರ್ಥ್ಯವನ್ನು ಮಹಿಳೆಯರಲ್ಲಿ ಹೆಚ್ಚಿಸುವುದು
*ಕೌಟುಂಬಿಕ ದೌರ್ಜನ್ಯ ನಡೆಯದಂತೆ ಎಚ್ಚರವಹಿಸುವುದು
*ಕಾನೂನಿನ ಜತೆಗೆ ಜ್ಞಾನ ನೀಡುವುದು
ಎಷ್ಟು ಜನರಿಗೆ ತರಬೇತಿ
ವರ್ಷಕ್ಕೆ 22 ಕೇಂದ್ರಗಳಿಂದ ಸುಮಾರು 7000 ಮಹಿಳೆಯರನ್ನು ತರಬೇತಿಗೊಳಿಸಲಾಗುತ್ತದೆ
3 ವರ್ಷ , 20 ಸಾವಿರ ಕೇಸ್!
ಲಭ್ಯ ಮಾಹಿತಿ ಪ್ರಕಾರ ಕಳೆದ 3 ವರ್ಷದಲ್ಲಿ ರಾಜ್ಯಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಮಾರಾಟ, ಕೊಲೆಯಂತಹ ಸುಮಾರು 20 ಸಾವಿರ ಪ್ರಕರಣ ವರದಿಯಾಗಿವೆ. ಕೆಳವರ್ಗದ ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯ ನಡೆದಿದೆ. 2015-19ರ ಅವಧಿಯಲ್ಲಿ 5764 ಮಹಿಳಾ ದೌರ್ಜನ್ಯ ಪ್ರಕರಣವರದಿಯಾಗಿವೆ. ಅದರಲ್ಲಿ 4904ರಲ್ಲಿ ಚಾರ್ಜ್​ಶೀಟ್ ದಾಖಲಾಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಎಫ್​ಎಸ್​ಎಲ್ ವರದಿಗಳೇ ಬಂದಿಲ್ಲ.
ಸಿದ್ಧವಾಗುತ್ತಿದೆ ಪಾಠ
ಯಾವುದೇ ತರಬೇತಿಯಾಗಲಿ ಅದನ್ನು ಪಠ್ಯವಿಲ್ಲದೆ ನಡೆಸುವುದು ಅಸಾಧ್ಯ. ಆದ್ದರಿಂದಲೇ ಪೊಲೀಸ್ ಅಧಿಕಾರಿಗಳ ತಂಡ ಪಠ್ಯ ರಚನೆಯಲ್ಲಿ ತೊಡಗಿದೆ. ಅದಕ್ಕೆ ಮಾನಸಿಕ ತಜ್ಞರು ಹಾಗೂ ಕಾನೂನು ತಜ್ಞರ ನೆರವನ್ನು ಪಡೆಯಲಾಗುತ್ತಿದೆ.
ತರಬೇತಿ ಎಲ್ಲೆಲ್ಲಿ?
ರಾಜ್ಯದಲ್ಲಿರುವ 22 ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಇಷ್ಟೂ ಕೇಂದ್ರಗಳಲ್ಲಿ ಏಕಕಾಲಕ್ಕೆ ತರಬೇತಿ ಆರಂಭವಾಗುವುದಿಲ್ಲ. ಮೊದಲು ಆಯ್ದ ಹತ್ತು ಕಡೆ ಆರಂಭಿಸಿ ಬಳಿಕ ಕಡೆ ಶುರುವಾಗಲಿದೆ.
ಏನೇನು ಕಲಿಕೆ?
2. ಮಾನಸಿಕವಾಗಿ ಧೈರ್ಯ ಇರುವವರ ಸಂಖ್ಯೆ ಮಹಿಳೆಯರಲ್ಲಿ ಕಡಿಮೆ ಇದೆ. ಆದ್ದರಿಂದ ಕೌನ್ಸೆಲಿಂಗ್ ಮೂಲಕ ಈ ಕಾರ್ಯವನ್ನು ಮಾಡಲಾಗುತ್ತದೆ.
3. ಯಾವುದೇ ಘಟನೆ ಅಥವಾ ದುರ್ಘಟನೆ ಬಳಿಕ ಕಾನೂನು ಹೋರಾಟ ನಡೆಸಬೇಕಾಗುತ್ತದೆ.ಅದಕ್ಕೆ ಕನಿಷ್ಠ ಕಾನೂನು ತಿಳುವಳಿಕೆ ಅಗತ್ಯವಾಗಿರುತ್ತದೆ. ಇದನ್ನೂ ಮಹಿಳೆಯರಿಗೆ ನೀಡುವ ಉದ್ದೇಶವನ್ನು ಗೃಹ ಇಲಾಖೆ ಹೊಂದಿದೆ.
ತಂಡ ಕಟ್ಟಬೇಕು
ತರಬೇತಿ ಪಡೆದ ಮಹಿಳೆಯರು ಮುಂದೆ ಸ್ವಯಂಸೇವಕರಾಗಿ ತಮ್ಮ ತಮ್ಮ ಪ್ರದೇಶದಲ್ಲಿ ಇತರ ಮಹಿಳೆ ಯರನ್ನು ಸಜ್ಜುಗೊಳಿಸಬೇಕು. ಆ ರೀತಿಯಲ್ಲಿ ದೊಡ್ಡ ಪಡೆಯನ್ನೇ ಕಟ್ಟುವ ಉದ್ದೇಶವನ್ನು ಸರ್ಕಾರ ಹೊಂದಿದೆ. ತರಬೇತಿ ನೀಡುವುದಕ್ಕೆ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮಾನಸಿಕ ಆರೋಗ್ಯ ತಜ್ಞರು ಹಾಗೂ ಕಾನೂನು ತಜ್ಞರನ್ನು ನಿಯೋಜನೆ ಮಾಡಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 5 =
Remember me
