ಶ್ರೀಕಾಂತ್ ಶೇಷಾದ್ರಿ
ಬೆಂಗಳೂರು:ಕರೊನಾ-ಲಾಕ್​ಡೌನ್ ಕಾರಣದಿಂದ ಮಹಾನಗರಗಳಲ್ಲಿ ಔದ್ಯೋಗಿಕ ನೆಲೆ ಕಳೆದುಕೊಂಡವರು ಊರಿಗೆ ತೆರಳಿ ಕೃಷಿಯತ್ತ ವಾಲಿದ್ದರೆ, ಮತ್ತೊಂದೆಡೆ ಸ್ವಂತ ಉದ್ಯೋಗಕ್ಕೆ ಇನ್ನೊಂದಷ್ಟು ಮಂದಿ ಆಸಕ್ತಿ ತೋರಿದ್ದು ಕಂಡುಬಂದಿದೆ. ದೇಶಾದ್ಯಂತ ಮೇ, ಜೂನ್, ಜುಲೈನಲ್ಲಿ ಒಟ್ಟು 31643 ಹೊಸ ಖಾಸಗಿ ಕಂಪನಿಗಳ ನೋಂದಣಿ ಆಗಿದೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 1280 ಹೊಸ ಕಂಪನಿಗಳು ನೋಂದಣಿ ಆಗಿದ್ದು, ಆಗಸ್ಟ್​ನಲ್ಲಿ ಈ ಸಂಖ್ಯೆಗೂ ಮೀರಿ ನೋಂದಣಿ ಆಗಿದೆ ಎಂಬ ಮಾಹಿತಿ ಇದೆ.
ನೋಂದಣಿ ಸಲೀಸು
1ಅಂಗಡಿಗಳು ಮತ್ತು ಮುಂಗಟ್ಟು ಕಾಯ್ದೆಯಡಿ ಆನ್​ಲೈನ್ ನೋಂದಣಿ ವ್ಯವಸ್ಥೆ ಇದೆ. ಕಾರ್ವಿುಕ ಇಲಾಖೆಯ ಇ-ಕಾರ್ವಿುಕ ವೆಬ್​ಸೈಟ್ ಮೂಲಕ ತಕ್ಷಣ ನೋಂದಣಿ ಮಾಡಿಸಬಹುದು. –www.ekarmika.karnataka.gov.in
2ನೋಂದಣಿಗೆ ಮೊದಲು ಯಾವುದೇ ಪರಿಶೀಲನೆ ಇರುವುದಿಲ್ಲ. ದೂರು ಬಂದರಷ್ಟೇ ಇಲಾಖೆ ಮುಖ್ಯಸ್ಥರ ಅನುಮತಿ ಮೇರೆಗೆ ತಪಾಸಣೆ ನಡೆಸಲಾಗುತ್ತದೆ.
3ನೋಂದಣಿ ಪ್ರಮಾಣಪತ್ರದ ಮಾನ್ಯತೆ ಈಗ 5 ವರ್ಷಗಳು. ಅನುಮೋದಿತ ನೋಂದಣಿ ಶುಲ್ಕವನ್ನು ಆನ್​ಲೈನ್​ನಲ್ಲಿ ಸಂಗ್ರಹಿಸುವ ಮೂಲಕ ಶಾಶ್ವತ (ನವೀಕರಣವಿಲ್ಲದ) ನೋಂದಣಿ ಕ್ರಮ ಆರಂಭಿಸಲಾಗುತ್ತಿದೆ.
ಕೈಗಾರಿಕೆಗಳು ನಿಧಾನವಾಗಿ ಚಟುವಟಿಕೆ ಆರಂಭಿಸುತ್ತಿರುವುದು ಒಂದು ಕಡೆಯಾದರೆ ಹೊಸ ಹೂಡಿಕೆಗಳು, ವಿಸ್ತರಣಾ ಚಟುವಟಿಕೆ ಕೂಡ ವೇಗವಾಗಿ ನಡೆಯುತ್ತಿದೆ. ಸರ್ಕಾರದ ಕಡೆಯಿಂದ ಅನುಮೋದನಾ ಪ್ರಕ್ರಿಯೆಗೆ ಚುರುಕು ನೀಡಲಾಗಿದೆ.– ಜಗದೀಶ್ ಶೆಟ್ಟರ್, ಕೈಗಾರಿಕಾ ಸಚಿವ
ರಾಜ್ಯದಲ್ಲಿ ಅಂಗಡಿಗಳು ಮತ್ತು ಮುಂಗಟ್ಟು ಕಾಯ್ದೆಯಡಿ 16336 ಹೊಸ ವ್ಯವಹಾರ ಆರಂಭಿಸಲು ನೋಂದಣಿ ಆಗಿದೆ. ಐಟಿ, ಐಟಿಇಎಸ್, ಮೊಬೈಲ್, ಐಟಿ ನೆಟ್​ವರ್ಕಿಂಗ್ ಕ್ಷೇತ್ರದಲ್ಲಿ 279, ರಿಟೇಲ್-246, ಹೊಟೇಲ್, ರೆಸ್ಟೊರೆಂಟ್ಸ್, ಆತಿಥ್ಯವಲಯ-599, ಹೆಲ್ತ್​ಕೇರ್-84, ಉತ್ಪಾದನಾ ವಲಯ-196, ಗಾರ್ವೆಂಟ್ಸ್-231, ಮೆಡಿಕಲ್, ಸರ್ಜಿಕಲ್ ಇನ್​ಸ್ಟ್ರುಮೆಂಟ್-134 ನೂತನ ಉದ್ಯಮ ಆರಂಭಕ್ಕೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಅಲ್ಲದೆ ಈ ವರ್ಗೀಕರಣಕ್ಕೆ ಬರದ ಇತರ ಪ್ರಮುಖ 5352 ಉದ್ಯಮಗಳೂ ಆರಂಭವಾಗಿವೆ. ಉದ್ಯೋಗ ಕಳೆದುಕೊಂಡವರು ಸ್ವಂತ ಉದ್ಯಮ ಆರಂಭಿಸಲು ಆಸಕ್ತರಾಗುತ್ತಿದ್ದಾರೆ ಎಂಬುದು ಸರ್ಕಾರದ ಅಂಕಿ-ಅಂಶಗಳಿದ ಸ್ಪಷ್ಟವಾಗುತ್ತಿದೆ. ಕಾರ್ವಿುಕ ಇಲಾಖೆ ಅಧಿಕಾರಿಗಳ ಪ್ರಕಾರ ಈ ಪ್ರಮಾಣ ಇನ್ನೆರಡು ತಿಂಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಈ ಬೆಳವಣಿಗೆಯಿಂದ ಸಣ್ಣ ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿಯಾಗುತ್ತದೆ ಎಂಬ ಅಭಿಪ್ರಾಯವಿದೆ.
ಹೋಟೆಲ್ ಉದ್ಯಮಕ್ಕೆ ಪ್ರೋತ್ಸಾಹ:ಮುಖ್ಯಮಂತ್ರಿ, ಸಚಿವರು, ಸಂಸದರು ಕಳೆದ ಒಂದು ವಾರದಿಂದ ಹೋಟೆಲ್​ಗಳಿಗೆ ಹೋಗಿ ಊಟ-ಉಪಾಹಾರ ಮಾಡುತ್ತಿರುವ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿಯವರೇ ಎರಡು ದಿನ ಹೋಟೆಲ್​ಗೆ ಹೋಗಿ ಸಂಪುಟ ಸಹೋದ್ಯೋಗಿಗಳ ಜತೆ ಉಪಾಹಾರ ಸೇವಿಸಿದ್ದಾರೆ. ಸಚಿವರಾದ ಆರ್.ಅಶೋಕ್, ಸಂಸದ ತೇಜಸ್ವಿಸೂರ್ಯ ಕೂಡ ಕಳೆದ 2-3 ದಿನಗಳಲ್ಲಿ ಹೋಟೆಲ್​ಗೆ ತೆರಳಿದ್ದಾರೆ. ಬಳಿಕ ಅಲ್ಲಿನ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಹೋಟೆಲ್ ಉದ್ಯಮಕ್ಕೆ ಬೆಂಬಲವಾಗಿ ನಿಲ್ಲುವ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ವಿಡಿಯೋ: ಆನ್​ಲೈನ್​ ತರಗತಿ ನಡೆಯುವಾಗಲೇ ಬಂದರು ದರೋಡೆಕೋರರು! ವಿದ್ಯಾರ್ಥಿಗಳು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
