ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ 3 ದಿನಗಳಿಂದ ‘ಜನಾಶೀರ್ವಾದ ಯಾತ್ರೆ’ ಮೂಲಕ ರಾಜ್ಯ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ನಿತ್ಯವೂ ನೂರಾರು ಕಿಮೀ ಪ್ರಯಾಣ ನಡೆಸುವುದರ ಜತೆಗೆ ರೋಡ್ ಶೋ, ವೇದಿಕೆ ಕಾರ್ಯಕ್ರಮ, ಸಂವಾದ ಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲೇ, ಮೋದಿ ಸರ್ಕಾರದ ಸಾಧನೆಗಳು ಹಾಗೂ ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
#ಕೃಷಿಕರ ಕಲ್ಯಾಣಕ್ಕಾಗಿ ನಿಮ್ಮ ಇಲಾಖೆಯಿಂದ ಏನೆಲ್ಲ ಹೊಸ ಯೋಜನೆ ಜಾರಿಗೊಳಿಸಲಾಗುತ್ತಿದೆ?
ಸದ್ಯ ನಮ್ಮ ದೇಶದ ಖಾದ್ಯ ತೈಲ ಬೇಡಿಕೆಯ ಶೇ.70 ಅನ್ನು ನಾವು ಆಮದಿನಿಂದಲೇ ಪೂರೈಸುತ್ತಿದ್ದೇವೆ. ಈ ಪರಾವಲಂಬನೆ ತಪ್ಪಿಸಿ ಸ್ವಾವಲಂಬನೆ ಸಾಧಿಸಲು ಎಣ್ಣೆಕಾಳುಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಲಾಗುವುದು. ಇದರಿಂದ ವಿದೇಶಿ ವಿನಿಮಯವೂ ಉಳಿತಾಯವಾಗುತ್ತದೆ. ಕಲಬೆರಕೆಯಿಲ್ಲದ ಎಣ್ಣೆಯೂ ಜನರಿಗೆ ದೊರೆತಂತಾಗುತ್ತದೆ.
# ಸ್ವಾಮಿನಾಥನ್ ವರದಿ ಜಾರಿಗೆ ರೈತ ಸಮುದಾಯ ಒತ್ತಾಯಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಹೆಜ್ಜೆ ಏನು?
ಸ್ವಾಮಿನಾಥನ್ ವರದಿ ಜಾರಿ ಭರವಸೆ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸೇರಿತ್ತು. ಕೃಷಿ ಕಾಯ್ದೆ ತಿದ್ದುಪಡಿಯೂ ಸ್ವಾಮಿನಾಥನ್ ವರದಿ ಜಾರಿಯ ಭಾಗವಾಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಲು ಎಪಿಎಂಸಿಗಳಲ್ಲಿನ ಮಧ್ಯವರ್ತಿಗಳು ಅಡ್ಡಿಯಾಗಿದ್ದರು. ಅದನ್ನು ತಪ್ಪಿಸುವ ಮೂಲಕ ಫಸಲನ್ನು ಉತ್ತಮ ಧಾರಣೆ ದೊರೆಯುವ ಸ್ಥಳದಲ್ಲಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸಲು ಅವಕಾಶ ಕಲ್ಪಿಸಲಾಗಿದೆ.
# ಎನ್​ಡಿಆರ್​ಎಫ್ ಮಾರ್ಗಸೂಚಿ ಅನ್ವಯ ಕೃಷಿಕರಿಗೆ ನೀಡುತ್ತಿ ರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಮಾನದಂಡ ಪರಿಷ್ಕರಣೆಯಾಗಬೇಕು ಎನ್ನುವ ಕೂಗೆದ್ದಿದೆಯಲ್ಲ…
ಈಚೆಗಷ್ಟೇ ಅತಿವೃಷ್ಟಿ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಎನ್​ಡಿಆರ್​ಎಫ್ ಮಾರ್ಗಸೂಚಿ ಪರಿಷ್ಕರಿಸುವ ಬಗ್ಗೆ ಪರಿಶೀಲಿಸಲಾಗುವುದು.
# ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಸಾಕಷ್ಟು ಕಷ್ಟ-ನಷ್ಟ ಅನುಭವಿಸುತ್ತಿದ್ದಾರೆ. ವನ್ಯಜೀವಿಗಳು-ಮಾನವ ಸಂಘರ್ಷಕ್ಕೆ ಪರಿಹಾರ ಏನು?
ಕಾಡಾನೆಗಳು ದೊಡ್ಡ ಪ್ರಮಾಣದಲ್ಲಿ ರೈತರಿಗೆ ನಷ್ಟವುಂಟು ಮಾಡುತ್ತಿವೆ. ಅವು ಅರಣ್ಯದಿಂದ ಹೊರಬರದಂತೆ ಬ್ಯಾರಿಕೇಡ್ ಅಳವಡಿಕೆ, ಕಂದಕ ನಿರ್ಮಾಣ ಹೊರತು ಬೇರೆ ಮಾರ್ಗಗಳಿಲ್ಲ. ಬೆಳೆ ನಷ್ಟ ಸಂದರ್ಭದಲ್ಲಿ ಕೃಷಿಕರಿಗೆ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುವುದು.
# ಮರಕಡಿತಲೆ ಅನುಮತಿ ದೊರೆಯದೆ ಮಲೆನಾಡು ಭಾಗದ ಕೃಷಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮರ ಮಾರಾಟಕ್ಕೆ ಪರವಾನಗಿಗೆ ಒತ್ತಾಯಿಸುತ್ತಿದ್ದಾರಲ್ಲ…
ಹಲವು ರಾಜ್ಯಗಳಲ್ಲಿ ಮರಕಡಿತಲೆ ನಿಯಮಾವಳಿಗಳನ್ನು ಸಡಿಲಿಸಲಾಗಿದೆ. ಈ ಸಂಬಂಧ ನಾನು ರಾಜ್ಯದ ಅರಣ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಇಲ್ಲಿಯೂ ರೈತರ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಮಾರಾಟ ಮಾಡಿ ಅವರ ಆರ್ಥಿಕ ಅವಶ್ಯಕತೆ ಪೂರೈಸಿಕೊಳ್ಳಲು ಅವಕಾಶ ನೀಡುವ ಸಂಬಂಧ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ರ್ಚಚಿಸಲಾಗುತ್ತಿದೆ. ಶೀಘ್ರವೇ ಈ ಸಂಬಂಧ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 12 =
Remember me
