ತುಮಕೂರು:ಮಗಳ ಮದುವೆ ತಯಾರಿಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಶೋಕ ಆವರಿಸಿದೆ. ಮದುಮಗಳು ಆಗಬೇಕಿದ್ದ ಯುವತಿ ಮತ್ತು ಆಕೆಯ ಸಹೋದರಿ ಇಬ್ಬರೂ ದುರ್ಮರಣಕ್ಕೀಡಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲುಮುಟ್ಟಿದೆ.
ಹೌದು, ಇಂತಹದ್ದೊಂದು ದುರಂತ ಸಾವು ಶಿರಾ ತಾಲೂಕು ಕಳ್ಳಂಬೆಳ್ಳ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಶಿಲ್ಪಾ(18) ಮತ್ತು ಸುಶ್ಮಿತಾ(16) ಸಾವಿಗೀಡಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಹಾಗಿದ್ದರೆ ಇಂದು(ಭಾನುವಾರ) ಶಿಲ್ಪಾಳ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದು ಮದುವೆ ಸಂಭ್ರಮ ಕಳೆಗಟ್ಟಬೇಕಿತ್ತು. ವಿಧಿಯಾಟಕ್ಕೆ ಸಿಕ್ಕ ಮನೆಯಲ್ಲೀಗ ಸೂತಕದ ಕಾರ್ಮೋಡ ಕವಿದಿದೆ. ಅಷ್ಟಕ್ಕೂ ಏನಾಯ್ತು ಗೊತ್ತಾ?
ಶಿಲ್ಪಾಳ ಮದುವೆ ನಿಶ್ಚಿತಾರ್ಥಕ್ಕೆ ಭಾನುವಾರ ಮನೆಯಲ್ಲಿ ತಯಾರಿ ಜೋರಾಗಿಯೇ ನಡೆದಿತ್ತು. ಸಂಬಂಧಿಕರು, ಸ್ನೇಹಿತರೂ ಬಂದಿದ್ದರು. ಶಿಲ್ಪಾ ಕೂಡ ರೆಡಿಯಾಗಿದ್ದಳು. ಬೆಳಗ್ಗೆ 9.30ರ ಸುಮಾರಿಗೆ ಮನೆಗೆ ಬಂದ ಸ್ನೇಹಿತರೊಂದಿಗೆ ಊರನ್ನು ಒಂದು ಸುತ್ತು ಹಾಕಲೆಂದು ಶಿಲ್ಪಾ ಮತ್ತು ಆಕೆ ತಂಗಿ ಕರೆದೊಯ್ದಿದ್ದರು. ಈ ವೇಳೆ ಕಳ್ಳಂಬೆಳ್ಳ ಕೆರೆ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅವಘಡ ಸಂಭವಿಸಿದೆ.
ಸೆಲ್ಫಿ ತೆಗೆಯುವ ಭರಾಟೆಯಲ್ಲಿ ಕಾಲುಜಾರಿ ನೀರಿಗೆ ಬಿದ್ದ ಕಾರಣ ಅಕ್ಕ-ತಂಗಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿನ ಮನೆಯಲ್ಲೂ ಬಿಜೆಪಿ-ಜೆಡಿಎಸ್​ ರಾಜಕೀಯ?

ಈ ದೃಶ್ಯ ನೋಡಿದ್ರೆ ನಿಮ್ಮ‌ ಮೈ ಜುಮ್ ಅನ್ನೋದು ಗ್ಯಾರಂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + seventeen =
Remember me
