ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ತಮ್ಮ ದಿನನಿತ್ಯದ ಕೆಲಸ-ಕಾರ್ಯಗಳಿಗಾಗಿ ಅಧಿಕ ಸಂಖ್ಯೆಯಲ್ಲಿ ಮೆಟ್ರೋ ಸಂಚಾರ ಬಳಸುವ ಪ್ರಯಾಣಿಕರಿಗೆ ಇದೀಗ ಬಿಎಂಆರ್​​ಸಿಎಲ್​ ಹೊಸ ಸುದ್ದಿಯೊಂದನ್ನು ನೀಡಿದೆ. ಇಂದು ಮೆಟ್ರೋ ನಿಲ್ದಾಣಗಳಲ್ಲಿ ಸೆಲ್ಫಿ ತೆಗೆಯುವ ಗೀಳು ಅನೇಕರಲ್ಲಿ ಮೂಡಿದೆ. ರೈಲಿನೊಳಗೆ ಸೆಲ್ಫಿ ಕ್ಲಿಕ್ಕಿಸುವುದು, ರೈಲ್ವೇ ನಿಲ್ದಾಣದ ಪ್ಲಾಟ್​ಫಾರ್ಮ್​ಗಳ ಸ್ಥಳಗಳಲ್ಲಿ ಫೋಟೋ ತೆಗೆಯುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡ ನಮ್ಮ ಮೆಟ್ರೋ ಇದೀಗ ಸೆಲ್ಫೀ ಪಾಯಿಂಟ್​ ತೆರೆದಿದೆ.
ಇದನ್ನೂ ಓದಿ:ತಮಿಳುನಾಡಿಗೆ ಜಯಾ ಚಿನ್ನಾಭರಣ: 6 ಪೆಟ್ಟಿಗೆಗಳ ಸಮೇತ ಬರುವಂತೆ ಸೆಷನ್ಸ್ ಕೋರ್ಟ್ ಸೂಚನೆ
ನಮ್ಮ ಮೆಟ್ರೋದಲ್ಲಿ ವಿನೂತನ ಸೆಲ್ಫಿ ಪಾಯಿಂಟ್ ನಿರ್ಮಾಣವಾಗಿದ್ದು, ಪ್ರಯಾಣಿಕರಿಗಾಗಿ ಈ ರೈಲು ನಿಲ್ದಾಣಗಳಲ್ಲಿ ನೂತನ ಸೆಲ್ಫಿ ಪಾಯಿಂಟ್​ ಸ್ಥಾಪಿಸಲಾಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಸೆಲ್ಫಿ ಪಾಯಿಂಟ್​ಗಳನ್ನು ನಿರ್ಮಿಸಿದ್ದು, ಹಸಿರು ಮಾರ್ಗದ ಬನಶಂಕರಿ, ಕೋಣನಕುಂಟೆ ಸ್ಟಾಪ್​ಗಳಲ್ಲಿ ಸ್ಟಾರ್ಟ್​ ಮಾಡಲಾಗಿದೆ.
ಗೋಡೆಯ ಮೇಲೆ ಹಸಿರು ಹೊದಿಕೆಯಂತೆ ಕಾಣುವ ಬೋರ್ಡ್ ರೀತಿಯ ಪರದೆಯನ್ನು ಅಳವಡಿಸಲಾಗಿದೆ. ಸೆಲ್ಫಿ ಪಾಯಿಂಟ್ ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ಮೊಬೈಲ್‌ನಲ್ಲೇ ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ. ಫೋಟೋ ತೆಗೆದುಕೊಳ್ಳಲು ಇಚ್ಛಿಸುವವರಿಗೆ ಈ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:Gold, Silver Price; ಚಿನ್ನ ಖರೀದಿಸುವುದಾದರೆ 10 ಗ್ರಾಂ ಬಂಗಾರದ ಬೆಲೆ ಈಗ್ಲೇ ಚೆಕ್‌ ಮಾಡಿ
ಸೆಲ್ಫಿ ಪಾಯಿಂಟ್​ಗಾಗಿ ಮತ್ತಷ್ಟು ಸ್ಥಳ ಮೀಸಲಿಟ್ಟಿದ್ದು, ಲೈಟಿಂಗ್​ನಿಂದ ಕಂಗೊಳಿಸುತ್ತಿರುವ ಸೆಲ್ಫಿ ಪಾಯಿಂಟ್​ ನೋಡಿ ಪ್ರಯಾಣಿಕರು ಖುಷ್ ಆಗಿದ್ದಾರೆ.
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 2 =
Remember me
