ಬಳ್ಳಾರಿ:ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುನೀತ್ ಕುಮಾರ್ ಅಲಿಯಾಸ್ ರಾಜು ಗುಪ್ತ ಎಂದು ಗುರತಿಸಲಾಗಿದೆ.
ಇದನ್ನೂ ಓದಿ:ಬಾರ್‌ಗಳಲ್ಲಿ ಸ್ವಚ್ಛತೆ ಕಾಪಾಡಿ, ಉಚಿತ ಶುದ್ಧ ನೀರು ಕೊಡಲಿ:ಪ್ರಿಯರ ಸಂಘದಿಂದ ಪಿಡಿಒಗೆ ಮನವಿ
ಆರೋಪಿ ಸಂಡೂರು ತಾಲೂಕಿನ ವಡ್ಡು ಗ್ರಾಮದ ಮುಖ್ಯರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ಪಾನ್‌ಶಾಪ್ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಆತನಿಂದ 91 ಪ್ಯಾಕೇಟ್‌ಗಳಲ್ಲಿದ್ದ 36,400 ರೂ. ಮೌಲ್ಯದ 19.05 ಕೆಜಿಯ ಗಾಂಜಾ ಮಿಶ್ರಿತ ಚಾಕಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಚಾಯಲ್ ತಾಲೂಕಿನ ಬಸೇಡಿ ಗ್ರಾಮದವನಾಗಿದ್ದು, ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಪಾನ್‌ಶಾಪ್ ನಡೆಸಿಕೊಂಡು ಹೋಗುತ್ತಿದ್ದ.
ಇದನ್ನೂ ಓದಿ:2023ರಲ್ಲಿ ಈ ವರ್ಗದ ಮ್ಯೂಚುವಲ್ ಫಂಡ್​ಗಳಲ್ಲಿ ದೊರೆತ ಸರಾಸರಿ ಗಳಿಕೆ ಶೇಕಡಾ 32.23; ಮುಂದಿನ ವರ್ಷವೂ ಇದೇ ರೀತಿ ಲಾಭ ಸಿಗುವುದೇ?
ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕಿ (ಪ್ರಭಾರ) ಜ್ಯೋತಿಬಾಯಿ ಹಾಗೂ ಅಬಕಾರಿ ನಿರೀಕ್ಷಕರಾದ ಜಗದೀಶ್ ಕಬ್ಬೂರಿ, ಮಲ್ಲಿಕಾರ್ಜುನ್ ಗಸ್ತಿ ಮತ್ತು ದಿಲೀಪ್ ಸಿಂಗ್ ಠಾಕೂರ್, ಸಿಬ್ಬಂದಿ ಉರುಕುಂದಪ್ಪ, ರಾಘವೇಂದ್ರ ಮತ್ತು ಹರೀಶ್ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಹೆಸರಾಂತ ಕವಿ ಇಮ್ರೋಜ್ ನಿಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twenty =
Remember me
