ಬೆಂಗಳೂರು:ಡ್ರೖೆವಿಂಗ್ ಲೈಸೆನ್ಸ್ (ಡಿಎಲ್) ಹಾಗೂ ರಿಜಿಸ್ಟ್ರೇಷನ್ ಸ್ಮಾರ್ಟ್ ಕಾರ್ಡ್ (ಆರ್​ಸಿ)ಗಳನ್ನು ಕಡ್ಡಾಯವಾಗಿ ಸ್ಪೀಡ್ ಪೋಸ್ಟ್​ನಲ್ಲಿ ಕಳುಹಿಸಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ.ಯೋಗೇಶ್ ಗುರುವಾರ (ಅ.12) ಆದೇಶ ಹೊರಡಿಸಿದ್ದಾರೆ. ಸ್ಪೀಡ್ ಪೋಸ್ಟ್ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೀಗ ಆಯುಕ್ತರ ಆದೇಶ ಪಾಲಿಸುವುದು ಅನಿವಾರ್ಯವಾಗಿದೆ.
ಡಿಎಲ್ ಹಾಗೂ ಆರ್​ಸಿ ಸ್ಮಾರ್ಟ್ ಕಾರ್ಡ್​ಗಳನ್ನು ಸ್ಟೀಡ್ ಪೋಸ್ಟ್​ನಲ್ಲಿ ಕಳುಹಿಸಲು 2023 ಆ.18ರಂದೇ ಅಂಚೆ ಇಲಾಖೆಯೊಂದಿಗೆ ಸಾರಿಗೆ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ, ಮಧ್ಯವರ್ತಿಗಳ ಅನುಕೂಲಕ್ಕಾಗಿ ಕಾರ್ಡ್​ಗಳನ್ನು ಸ್ಪೀಡ್ ಪೋಸ್ಟ್​ನಲ್ಲಿ ಕಳುಹಿಸುವ ವ್ಯವಸ್ಥೆ ರಾಜ್ಯದ ಕೆಲ ಕಚೇರಿಗಳಲ್ಲಷ್ಟೇ ಜಾರಿಗೆ ಬಂದಿತ್ತು. ಅಲ್ಲದೆ, ಪೋಸ್ಟ್​ನಲ್ಲಿ ಕಾರ್ಡ್​ಗಳು ವಿಳಂಬವಾಗಿ ತಲುಪುವುದರಿಂದ ಕೆಲವೊಂದು ಸಮಸ್ಯೆಗಳಾಗುತ್ತವೆ ಎಂದು ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಮನವಿ ಸಲ್ಲಿಸಿತ್ತು.
ಸ್ಪೀಡ್ ಪೋಸ್ಟ್ ಯೋಜನೆ ಜಾರಿಯಿಂದಾಗುವ ಸಾಧಕ-ಬಾಧಕಗಳ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಬೆಂಗಳೂರು ನಗರ ಮತ್ತು ಬೆಳಗಾವಿ ವಿಭಾಗದ ಜಂಟಿ ಆಯುಕ್ತರಿಗೆ ಸೂಚಿಸಲಾಗಿತ್ತು. ಅದರಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಜತೆ ಸಭೆ ನಡೆಸಿ ವರದಿ ಕೊಟ್ಟಿದ್ದಾರೆ.
ವಾಹನ ಮತ್ತು ಸಾರಥಿ ತಂತ್ರಾಂಶದ ಪ್ರಕಾರ ಹೊಸ ಆರ್​ಸಿ ಮತ್ತು ಡಿಎಲ್ ಸ್ಮಾರ್ಟ್ ಕಾರ್ಡ್​ಗಳನ್ನು ಅಂಚೆ ಮೂಲಕ ಕಳುಹಿಸುವ ಬಗ್ಗೆ ಯಾವುದೇ ಅಭಿಪ್ರಾಯವನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ. ಆದರೆ, ಇತರ ಸಂಬಂಧಿತ ಸೇವೆಗಳಾದ ಮಾಲೀಕತ್ವ ವರ್ಗಾವಣೆ, ಕಂತು-ಕರಾರು ನಮೂದು ಮತ್ತು ರದ್ಧತಿ, ತೀರುವಳಿ ಪ್ರಮಾಣಪತ್ರ, ವಿಳಾಸ ಬದಲಾವಣೆ, ನೋಂದಣಿ ಪ್ರಮಾಣ ಪತ್ರ ನವೀಕರಣದ ಸ್ಮಾರ್ಟ್ ಕಾರ್ಡ್​ಗಳನ್ನು ಅರ್ಜಿದಾರರು ಇಚ್ಛಿಸಿದಲ್ಲಿ ನೇರವಾಗಿ ಕಚೇರಿಯಲ್ಲೇ ಸ್ವೀಕೃತಿ ಪಡೆದು ನೀಡಬಹುದು ಎಂದು ವರದಿಯಲ್ಲಿ ಸೂಚಿಸಿದ್ದಾರೆ. ಜಂಟಿ ಆಯುಕ್ತರ ವರದಿ ಆಧರಿಸಿ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಹೊಸ ಡಿಎಲ್ ಮತ್ತು ಆರ್​ಸಿ ಸ್ಮಾರ್ಟ್ ಕಾರ್ಡ್​ಗಳನ್ನು ವಾಹನ ಮತ್ತು ಸಾರಥಿ ತಂತ್ರಾಂಶದ ಮುಖಾಂತರ ಸೂಚನಾ ಪತ್ರಗಳನ್ನು ಮತ್ತು ಪೋಸ್ಟಲ್ ಎನ್ವಲಪ್ ಕವರ್​ಗಳನ್ನು ಅಂಚೆ ಇಲಾಖೆಯವರಿಗೆ ನೀಡಿ ಸ್ಪೀಡ್ ಪೋಸ್ಟ್​ನಲ್ಲೇ ಕಡ್ಡಾಯವಾಗಿ ಕಳುಹಿಸಬೇಕು ಎಂದು ಆಯುಕ್ತರು ಆದೇಶಿದ್ದಾರೆ. ಬೇರೆ ಸೇವೆಗಳಿಗೆ ಸಂಬಂಧಿತ ಕಾರ್ಡ್​ಗಳನ್ನು ಕಚೇರಿಯಲ್ಲೇ ವಿತರಿಸಲು ಅವಕಾಶ ಕಲ್ಪಿಸಲಾಗಿದೆ.
ಅನುಕೂಲವೇನು?:ಸ್ಮಾರ್ಟ್ ಕಾರ್ಡ್​ಗಳನ್ನು ಸ್ಪೀಡ್ ಪೋಸ್ಟ್ ನಲ್ಲಿ ಕಳುಹಿಸುವುದರಿಂದ ದುರ್ಬಳಕೆ ಆಗುವುದಿಲ್ಲ. ಜತೆಗೆ ಅರ್ಜಿದಾರರಿಗೆ ಕಾರ್ಡ್ ಗಳನ್ನು ತಲುಪಿಸುವ ಜವಾಬ್ದಾರಿ ಅಂಚೆ ಇಲಾಖೆ ಮೇಲಿರುವುದರಿಂದ ಯಾವುದೇ ಲೋಪದೋಷಕ್ಕೆ ಆಸ್ಪದ ಇರುವುದಿಲ್ಲ. ಅರ್ಜಿದಾರರು ಸಹ ತಮ್ಮ ಕಾರ್ಡ್ ಬಗ್ಗೆ ಸ್ಪೀಡ್ ಪೋಸ್ಟ್​ನಲ್ಲಿ ಟ್ರಾ್ಯಕ್ ಮಾಡಲು ಅವಕಾಶ ಇದೆ. ಆದರೆ, ಆರ್​ಸಿ ಹಾಗೂ ಡಿಎಲ್ ಕಾರ್ಡ್​ಗಳನ್ನು ನೇರವಾಗಿ ಅರ್ಜಿದಾರನ ಮನೆಗೆ ತಲುಪಿಸಿದರೆ ತಮಗೆ ಆದಾಯ ಬರಲ್ಲ ಎಂದು ಮಧ್ಯವರ್ತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಒಂದು ಸ್ಮಾರ್ಟ್ ಕಾರ್ಡ್ ಸ್ಪೀಡ್ ಪೋಸ್ಟ್​ನಲ್ಲಿ ಅರ್ಜಿದಾರನಿಗೆ ಕಳುಹಿಸಲು ಅಂಚೆ ಇಲಾಖೆ 44 ರೂ. ಶುಲ್ಕ ಪಡೆಯುತ್ತದೆ. ಕಾರ್ಡ್ ಕಳುಹಿಸುವ ಪ್ರಕ್ರಿಯೆಗೆ ಆರ್​ಟಿಒ 57 ರೂ. ಶುಲ್ಕ ಪಡೆಯುತ್ತದೆ.
ಯಾವುದಕ್ಕೂ ನಾಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದಾ?; ವ್ಯಕ್ತಿಯೊಬ್ಬರಿಂದ ಆತಂಕಕಾರಿ ಪೋಸ್ಟ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
