ಬೆಂಗಳೂರು : ಹಿರಿಯ ರಂಗಕರ್ಮಿ ಲೋಕನಾಥ ದೀಕ್ಷಿತ್ ಅವರು ಹುಟ್ಟುಹಾಕಿರುವ ರಂಗಸಂಸ್ಕೃತಿ ಸಂಸ್ಥೆಯು ಪ್ರತಿವರ್ಷ ತನ್ನ ವಾರ್ಷಿಕೋತ್ಸವದ ಸವಿನೆನಪಿಗೆ ರಂಗಕರ್ಮಿಗಳಿಗೆ ಕೊಡಮಾಡುವ ‘ರಂಗಸಂಸ್ಕೃತಿ ಸಿರಿ’ 2024ನೇ ಸಾಲಿನ ಪ್ರಶಸ್ತಿಗೆ ಹಿರಿಯ ನಟಿ ಕಲ್ಯಾಣಿ ಪ್ರದೀಪ್ ಅವರು ಆಯ್ಕೆಯಾಗಿದ್ದಾರೆ. ಮೇ 12ರಂದು ಗವಿಪುರಂ ಗುಟ್ಟಳ್ಳಿಯಲ್ಲಿರುವ ಉದಯಬಾನು ಕಲಾ ಸಂಘದ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿಪತ್ರ, ಶಾಲು, ಹಾರ, ಲ ತಾಂಬೂಲವನ್ನು ಒಳಗೊಂಡಿದ್ದು, ಸುದೀರ್ಘ 5 ದಶಕಗಳ ರಂಗಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ರಂಗಸಂಸ್ಕೃತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಲೋಕೇಶ್ ತಿಳಿಸಿದ್ದಾರೆ.ಮೇ 12ರಂದು ಸಂತೆ 5 ಗಂಟೆಗೆ ನಡೆಯಲಿರುವ ತಂಡದ 8ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಹಾಸ್ಯ ಬರಹಗಾರ ಎಂ.ಎಸ್.ನರಸಿಂಹಮೂರ್ತಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಲೋಕನಾಥ ದೀಕ್ಷಿತ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಲೋಕನಾಥ ದೀಕ್ಷಿತ್ ಅವರ ರಚಿಸಿರುವ ‘ಭಾಗವತರ ನಾಟಕ ಮಂಡಳಿ’ ಎಂಬ ಹಾಸ್ಯಪ್ರದಾನ ನಾಟಕ ಪ್ರದರ್ಶನ ನಡೆಯಲಿದೆ. ಹಿರಿಯ ರಂಗಕರ್ಮಿ ಕೆ.ಜಿ.ಸಂಪತ್ ಕುಮಾರ್ ನಿರ್ದೇಶಿಸಿರುವ ನಾಟಕಕ್ಕೆ ಜೆ.ಸೋಮಶೇಖರ್ ಪ್ರಸಾಧನ ಮಾಡಿದ್ದಾರೆ. ರಂಗಸಂಸ್ಕೃತಿ ತಂಡದ ಕಲಾವಿದರು ವಿವಿಧ ಪಾತ್ರಗಳಲ್ಲಿ ನಟಿಸಲಿದ್ದಾರೆ.
1964 ರಲ್ಲಿ ಜನಿಸಿರುವ ಕಲ್ಯಾಣಿ ಅವರ ತಂದೆ ಶ್ರೀಕಾಂತ್ ಮತ್ತು ತಾಯಿ ನಾಗರತ್ನ ರಂಗಭೂಮಿ ಕಲಾವಿದರು. ತಮ್ಮ 5ನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶಿಸಿರುವು ಕಲ್ಯಾಣಿ ಅವರು ಈವರೆಗೆ 5 ಐದನೂರಕ್ಕೂ ಹೆಚ್ಚು ನಾಟಕಗಳ ಸಾವಿರಾರ ಪ್ರದರ್ಶನ ನೀಡಿದ್ದಾರೆ. ನೂರಕ್ಕೂ ಹೆಚ್ಚು ಧಾರವಾಹಿ, 25ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಕಲ್ಯಾಣಿ ಅವರ ಪತಿ ಪ್ರದೀಪ್ (ಸುಬ್ಬರಾಮು) ಅವರು ಕೂಡಾ ಪ್ರಸಿದ್ಧ ನಟರಾಗಿದ್ದು, ಇತ್ತೀಚೆಗೆ ನಿಧನರಾಗಿದ್ದಾರೆ.ರಂಗಭೂಮಿಯ ದಿಗ್ಗಜರಾದ ಪರ್ವತವಾಣಿ, ಬಿ.ಎಸ್ ನಾರಾಯಣರಾವ್, ಯಮುನಾಮೂರ್ತಿ, ಜೆ.ಕೆ ಶ್ರೀನಿವಾಸಮೂರ್ತಿ, ಎ.ಆರ್.ಶ್ರೀಕಾಂತ್, ಸಿ.ಜಿ.ಕೆ, ಪ್ರಸನ್ನ, ಆರ್.ನಾಗೇಶ್, ಲೋಕನಾಥ್ ದೀಕ್ಷಿತ್, ಎಸ್.ಪ್ರಕಾಶ್, ಚೌಡಯ್ಯ, ಸುಂದರಕೃಷ್ಣ ಅರಸ್, ಧೀರೇಂದ್ರಗೋಪಾಲ್, ರೇಣುಕಾಶರ್ಮ, ದೊರೆಭಗವಾನ್, ಟಿ.ಎನ್.ಸೀತಾರಾಂ, ನಾಗತಿಹಳ್ಳಿ ಚಂದ್ರಶೇಖರ್, ಟಿ.ಎಸ್.ನಾಗಾಭರಣ, ಎಸ್.ನಾರಾಯಣ್, ಗುರುಪ್ರಸಾದ್, ಬ.ಲ.ಸುರೇಶ್, ರಾಮದಾಸ್ ನಾಯ್ಡು, ಗೋಟೂರಿ, ಸುಚೇಂದ್ರಪ್ರಸಾದ್, ಸಹಿಕಹಿ ಚಂದ್ರು, ಚಂದ್ರಶೇಖರ ಕಂಬಾರ್, ವೇಮಗಲ್ ಜಗನ್ನಾಥ್, ಕುಣಿಗಲ್ ನಾಗಭೂಷಣ್, ಪಿ.ಶೇಷಾದ್ರಿ, ಸಂಜೀವ ತಗಡೂರು, ಅವರವಿಂದ ಕೌಶಿಕ್, ಶೃತಿನಾಯ್ಡು ಮುಂತಾದವರೊಂದಿಗೆ ನಟಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
