ತುಮಕೂರು:ಕರೊನಾ ವೈರಸ್ ನಿಯಂತ್ರಣದ ಸಲುವಾಗಿ ಎಲ್ಲ ವಿಮಾನನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಕ್ರೀನಿಂಗ್​ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಆದರೆ ತುಮಕೂರಿನ ಹಿರಿಯ ಆರೋಗ್ಯ ಸಹಾಯಕನೋರ್ವ ಬೇಕಾಬಿಟ್ಟಿ ಥರ್ಮಲ್​ ಸ್ಕ್ಯಾನಿಂಗ್​ ಮಾಡಿ, ಇದೀಗ ಅಮಾನತುಗೊಂಡಿದ್ದಾರೆ.
ತುಮಕೂರು ರೈಲ್ವೆ ನಿಲ್ದಾಣದಲ್ಲಿ ಖುರ್ಚಿ ಹಾಕಿಕೊಂಡು, ಕೈಯಲ್ಲಿ ಥರ್ಮಲ್​ ಸ್ಯ್ಕಾನರ್ ಹಿಡಿದು ಕುಳಿತಿದ್ದ ಹಿರಿಯ ಆರೋಗ್ಯ ಸಹಾಯಕ ನರಸಿಂಹಮೂರ್ತಿ ಪ್ರಯಾಣಿಕರತ್ತ ಸುಮ್ಮನೆ ಒಂದು ಬಾರಿ ಅದನ್ನು ತೋರಿಸುತ್ತಿದ್ದರಷ್ಟೇ. ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮಾತನಾಡುತ್ತ, ಕಾಟಾಚಾರಕ್ಕೆ ಥರ್ಮಲ್​ ಸ್ಕ್ಯಾನ್​ ಮಾಡುತ್ತಿದ್ದರು. ಅವರು ಪ್ರಯಾಣಿಕರತ್ತ ನೋಡುತ್ತಲೂ ಇರಲಿಲ್ಲ. ಅಷ್ಟರಮಟ್ಟಿಗೆ ನಿರ್ಲಕ್ಷ್ಯ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು.
ಬೇಜವಾಬ್ದಾರಿಯುತವಾಗಿ ಥರ್ಮಲ್​ ಸ್ಕ್ಯಾನಿಂಗ್​ ಮಾಡಿದ್ದ ನರಸಿಂಹಮೂರ್ತಿಯವರನ್ನು ಡಿಎಚ್​ಒ ಡಾ. ಚಂದ್ರಿಕಾ ಅಮಾನತುಗೊಳಿಸಿದ್ದಾರೆ.
https://www.instagram.com/p/B9-9z8THUU5/
ಮಕ್ಕಳು ನನ್ನ ರೀತಿ ಬೆಳೆಯುತ್ತಿಲ್ಲವೆಂದು ಹೆತ್ತ ಕರುಳನ್ನೇ ಕತ್ತುಹಿಸುಕಿ ಕೊಲೆಗೈದ ಪಾಪಿ ತಂದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
