ಬೆಂಗಳೂರು:ಕೈಮೀರಿ ಹೋಗುತ್ತಿರುವ ಕರೋನಾ ಸೋಂಕು ಜನರನ್ನು ಸೋಂಕಿತರನ್ನಾಗಿಸುತ್ತಿರುವುದಷ್ಟೇ ಅಲ್ಲದೆ, ಸೋಂಕಿತ ಹಲವರನ್ನು ಬಲಿ ತೆಗೆದುಕೊಳ್ಳುತ್ತಲೂ ಇದೆ. ಕೆಲವು ದಿನಗಳಿಂದ ಸಿನಿಮಾ ಕ್ಷೇತ್ರ ಸೇರಿ ವಿವಿಧ ಕ್ಷೇತ್ರದ ಹಲವರನ್ನು ಬಲಿಪಡೆಯುತ್ತಲೇ ಬಂದಿರುವ ಕರೊನಾ, ಮಾಧ್ಯಮ ಕ್ಷೇತ್ರಕ್ಕೂ ಮೇಲಿಂದ ಮೇಲೆ ಸಾವಿನ ಸುದ್ದಿಯ ಶಾಕ್ ನೀಡುತ್ತಿದೆ. ನಿನ್ನೆಯಷ್ಟೇ ಒಬ್ಬರು ಹಿರಿಯ ಪತ್ರಕರ್ತರನ್ನು ಬಲಿ ಪಡೆದಿದ್ದ, ಕರೊನಾ ಇಂದು ಇನ್ನೊಬ್ಬ ಹಿರಿಯ ಪತ್ರಕರ್ತರನ್ನು ಇನ್ನಿಲ್ಲವಾಗಿಸಿದೆ.
ಹಿರಿಯ ಪತ್ರಕರ್ತ ಎಚ್​.ಎಸ್​. ಮಹದೇವ ಪ್ರಕಾಶ್​ (65) ಇಂದು ಕರೊನಾದಿಂದಾಗಿ ಮೃತಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಸೋಂಕಿತರಾಗಿದ್ದ ಅವರು ಹತ್ತು ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರು ಇಂದು ಕೊನೆಯುಸಿರೆಳೆದರು.
‘ಈ ಭಾನುವಾರ’ ಪತ್ರಿಕೆಯ ಸಂಪಾದಕ, ರಾಜಕೀಯ ವಿಶ್ಲೇಷಕ, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿಯೂ ಮಹದೇವ ಪ್ರಕಾಶ್​ ಕಾರ್ಯನಿರ್ವಹಿಸಿದ್ದರು. ಸಂಯಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಜಯತೀರ್ಥ ಕಾಗಲಕರ್​ (53) ನಿನ್ನೆಯಷ್ಟೇ ಕರೊನಾದಿಂದಾಗಿ ಮೃತಪಟ್ಟಿದ್ದರು.
ರೆಮ್​ಡೆಸಿವಿರ್​ ನಕಲಿ ದಂಧೆಯಲ್ಲಿ ವೈದ್ಯರೇ ಕಿಂಗ್​ಪಿನ್​; ಗ್ಲುಕೋಸ್​ ತುಂಬಿ ರೆಮ್​ಡೆಸಿವಿರ್ ಎಂದು ಮಾರಾಟ, ನಾಲ್ವರ ಬಂಧನ

ಗಾರೆ ಕೆಲಸಗಾರರೊಬ್ಬರ ಪ್ರಾಣ ತೆಗೆದ ‘ಲೇಡಿ-ಡಾಗ್’; ಜೀವಕ್ಕೇ ಕುತ್ತು ತಂತು ಕುತ್ತಿಗೆಗೆ ಕಚ್ಚಿದ ನಾಯಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 20 =
Remember me
