ನವದೆಹಲಿ:ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಹಿರಿಯ ಲೇಖಕರಾದ ಡಾ ಗುರುಲಿಂಗ ಕಾಪಸೆ ಅವರು ಭಾಜನರಾಗಿದ್ದಾರೆ.
ಡಾ. ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ ಸ ಖಾಂಡೇಕರ್ ಅವರ ‘ಒಂದು ಪುಟದ ಕಥೆ’ ಯು ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ.’ಒಂದು ಪುಟದ ಕಥೆ’ (ಮೂಲದಲ್ಲಿ ‘ಏಕಾ ಪಾನಾಚಿ ಗೋಷ್ಠ)ಯು ಖಾಂಡೇಕರ್ ಅವರ ಆತ್ಮಕಥೆಯಾಗಿದೆ. ಖಾಂಡೇಕರ್ ಅವರು ಮರಾಠಿಯ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರು. ಅವರ ‘ಯಯಾತಿ ‘ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿಯು ಬಂದಿತ್ತು.

ಡಾ.ಕಾಪಸೆಯವರು ಅನುವಾದಿಸಿದ ಖಾಂಡೇಕರ್ ಅವರ ಆತ್ಮಕಥೆಯು ಕಳೆದ ಶತಮಾನದ ಭಾರತದ ಅದರಲ್ಲಿಯೂ ಮಹಾರಾಷ್ಟದ ಕೊಂಕಣ ಭಾಗದ ಸಾಮಾಜಿಕ, ಆರ್ಥಿಕ, ರಾಜಕೀಯ, ಜಾತೀಯ ಸ್ಥಿತಿಗತಿಗಳ ಸಮಗ್ರವಾದ ವಿವರಣೆ ನೀಡುತ್ತದೆ. ವಿಶೇಷವೆಂದರೆ ಖಾಂಡೇಕರ್ ಅವರು ಕರ್ನಾಟಕದ ಅದರಲ್ಲೂ ಬೆಳಗಾವಿ ಜಿಲ್ಲೆಯ ಅಳಿಯ. ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಮಣೇರಿಕರ್ ಕುಟುಂಬದ ಉಷಾ ಅವರು ಖಾಂಡೇಕರ್ ಅವರ ಹೆಂಡತಿ. ಮದುವೆಗಾಗಿ ಅವರು ಮಹಾರಾಷ್ಟ್ರದ ರತ್ನಾಗಿರಿಯಿಂದ ಅಸೋಗಾ ಗ್ರಾಮದವರೆಗೆ ಚಕ್ಕಡಿ ಕಟ್ಟಿಕೊಂಡು ಬಂದ ವಿವರಗಳನ್ನು ಕೃತಿಯಲ್ಲಿ ನೀಡಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕರಾಗಿರುವ ಡಾ. ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆದ ಅನುವಾದ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯು ಡಾ. ಕಾಪಸೆ ಅವರು ಅನುವಾದಿಸಿದ ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆಮಾಡಿತು. ಆಯ್ಕೆ ಸಮಿತಿಯ ಜ್ಯೂರಿಗಳಾಗಿ ಹಿರಿಯ ಲೇಖಕರಾದ ಡಾ.ಬಸವರಾಜ ಕಲ್ಗುಡಿ, ಕವಿಗಳಾದ ಬಿ ಆರ್ ಲಕ್ಷ್ಮಣರಾವ್ ಹಾಗೂ ಡಾ ಸುಬ್ಬು ಹೊಲಿಯಾರ್ ಅವರುಗಳು ಇದ್ದರು.ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್‌ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ದಿಲ್ಲಿಯಲ್ಲಿ ನೆರವೇರಲಿದೆ. ಪ್ರಶಸ್ತಿಯು 50 ಸಾವಿರ ರೂಪಾಯಿ, ಸ್ಮತಿ ಫಲಕ, ಶಾಲು ಸನ್ಮಾನ ಒಳಗೊಂಡಿರುತ್ತದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಭಾಜನರಾದ ಡಾ. ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ.
ಸಚಿವರ ಕಚೇರಿಯಲ್ಲಿ ಅಪ್ಪು ‘ಜಾಕೆಟ್’​! ಅರಸು ಚಿತ್ರದಲ್ಲಿ ಧರಿಸಿದ್ದ ಜಾಕೆಟ್​ಗೆ ಫೋಟೋ ಫ್ರೇಮ್​ ಹಾಕಿಸಿಟ್ಟ ಸಚಿವರ ಪುತ್ರ

ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಇದೆಂಥ ಪ್ರಶ್ನೆ? ಅಧಿಕಾರಿಗಳು ಡಿಬಾರ್​! ಎಲ್ಲಿಯೂ ಕೆಲಸ ಕೊಡದಂತೆ ಸೂಚನೆ

ಸತತ 5 ದಿನ ಪೆಟ್ರೋಲ್​ ಬಂಕ್​ ಮುಂದಿನ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ದುರಂತ ಸಾವು! ಲಂಕಾದಲ್ಲಿ ದುರ್ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
