ಬೆಂಗಳೂರು:ಡೇ ಕೇರ್ ಸೆಂಟರ್​ನಲ್ಲಿ ಮಕ್ಕಳನ್ನು ಬಿಡುವ ಮುನ್ನ ಪಾಲಕರು ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಬಹಳಷ್ಟಿದೆ. ಇದೀಗ ಸುಬ್ರಹ್ಮಣ್ಯಪುರದಲ್ಲಿರುವ ಪ್ಲೇ ಸ್ಕೂಲ್​ ಒಂದರಲ್ಲಿ ಕರುಳು ಚುರುಕ್ ಎನ್ನುವಂತಹ ಘಟನೆಯೊಂದು ನಡೆದಿದೆ. ಸದ್ಯ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿದರೆ ನೀವೂ ಕೂಡ ನಿಮ್ಮ ಮಕ್ಕಳನ್ನು ಮಕ್ಕಳನ್ನು ಡೇ ಕೇರ್ ಸೆಂಟರ್​ನಲ್ಲಿ ಬಿಟ್ಟು ಹೋಗಲು ಹೆದರುವಂತಿದೆ.
ಸುಬ್ರಹ್ಮಣ್ಯಪುರದಲ್ಲಿರುವ ಡೇ ಕೇರ್ ಸೆಂಟರ್​ನಲ್ಲಿ ಸಣ್ಣ ಮಗುವೊಂದು, ಇನ್ನೊಂದು ಮಗುವಿಗೆ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದ ಆಯಾ, ಮಗುವೊಂದನ್ನು ಕೋಣೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ ಒಂದು ಮಗು ಸಹಪಾಠಿ ಮೇಲೆ ಬಲವಾಗಿ ಹಲ್ಲೆ ಮಾಡಿದೆ. ಪ್ಲೇ ಸ್ಕೂಲ್​ನ ಸಿಬ್ಬಂದಿಯ ತಪ್ಪಿನಿಂದ ಈ ಘಟನೆ ಸಂಭವಿಸಿದೆ.

Remaining video.pic.twitter.com/fBJIT44Eq3
ಡೇ ಕೇರ್ ಸೆಂಟರ್​ನ ಆಯಾ ನಿರ್ಲಕ್ಷ್ಯ ವಹಿಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ನಾಲ್ಕೈದು ನಿಮಿಷ ಮಕ್ಕಳಿಬ್ಬರು ಜಗಳ ಮಾಡಿಕೊಂಡಿದ್ದು, ಈ ವೇಳೆ ಜವಾಬ್ದಾರಿ ಹೊಂದಿದ್ದ ಆಯಾ ಇತ್ತ ಗಮನ ಹರಿಸಿಲ್ಲ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪಾಲಕರು ಕೇರ್ ಸೆಂಟರ್ ವಿರುದ್ಧ ಗಲಾಟೆ ಮಾಡಿದ್ದಾರೆ. ಬಳಿಕ ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಪಾಲಕರ ಮನವಿಗೆ ಟ್ವಿಟರ್​​ ಮೂಲಕ ಬೆಂಗಳೂರು ನಗರ ಪೊಲೀಸರು ಸ್ಪಂದಿಸಿದ್ದಾರೆ. ನಿಮ್ಮ ದೂರನ್ನು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ರವಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಘಟನೆ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಮಕ್ಕಳನ್ನು ಡೇ ಕೇರ್ ಸೆಂಟರ್​ಗೆ ಕಳುಹಿಸುವ ಮುನ್ನ ಪಾಲಕರು ಸಾಕಷ್ಟು ಯೋಚಿಸಬೇಕು. ಸೆಂಟರ್​​ಗಳ ಹಿನ್ನೆಲೆ ಪರಿಶೀಲಿಸಿ ಮಕ್ಕಳನ್ನು ಕಳುಹಿಸಿಬೇಕು ಎಂಬ ಅಭಿಪ್ರಾಯಗಳು ಜಾಲತಾಣಗಳ ಮೂಲಕ ವ್ಯಕ್ತವಾಗುತ್ತಿವೆ.

Your complaint has been forwarded to Police inspector of Subramanyapura Police station for necessary action.@DCPSouthBCP
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eight =
Remember me
