ಬೆಂಗಳೂರು:ಯಾವುದೇ ಕ್ಷೇತ್ರದಲ್ಲಿನ ಪ್ರತಿಯೊಂದು ಉತ್ಪಾದನೆಯ ಹಿಂದಿನ ಶ್ರಮವನ್ನು ಗುರುತಿಸುವ ಕೆಲಸ ಕಾರ್ಲ್ ಮಾರ್ಕ್ಸ್ ವಾದದ ಪ್ರಮುಖ ಅಂಶ ಎಂದು ಹಿರಿಯ ವಿಚಾರವಾದಿ ಡಾ.ಜಿ.ರಾಮಕೃಷ್ಣ ಅಭಿಪ್ರಾಯಿಸಿದ್ದಾರೆ.
ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಕಾರ್ಲ್ ಮಾರ್ಕ್ಸ್ ಬಂಡವಾಳ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಯಾವುದೇ ರೂಪದಲ್ಲಿ ಉತ್ಪಾದನೆಯಾಗುವ ಪ್ರತಿಯೊಂದು ವಸ್ತುವಿನ ಹಿಂದೆಯೂ ಸಾಮಾಜಿಕ ದುಡಿಮೆಯ ನಿಗದಿತ ಶ್ರಮ ಇರುತ್ತದೆ. ಅದನ್ನು ಮರೆಮಾಚಿ ಬಂಡವಾಳ ಹೂಡಿದವರ ಲಾಭವನ್ನಷ್ಟೇ ಪರಿಗಣಿಸಿ ವಹಿವಾಟುಗಳು ನಡೆಯುತ್ತವೆ. ಆದರೆ ಬಂಡವಾಳ ಹೂಡಿಕೆದಾರನಿಗಿಂತಲೂ ಉತ್ಪಾದನೆಯ ಹಿಂದಿನ ಶ್ರಮಜೀವಿಯ ಪಾತ್ರ ಪ್ರಮುಖವಾದದ್ದು. ಆ ಕಾರಣಕ್ಕೆ ಮಾರುಕಟ್ಟೆ ಸರಕಿನ ಹಿಂದಿರುವ ಸಾಮಾಜಿಕ ಶ್ರಮವನ್ನು ಗುರುತಿಸಿ ಆತನಿಕಗೆ ಸರಿಯಾದ ಪ್ರತಿಲವನ್ನು ನೀಡಬೇಕೆಂಬುದನ್ನು ಮಾರ್ಕ್ಸ್ ವಾದ ಪ್ರತಿಪಾದಿಸುತ್ತದೆ. ಈ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ವಾದವು ಶೋಷಿತರ, ಶ್ರಮಜೀವಿಗಳ ಪಾಲಿಗೆ ಬ್ರಹ್ಮಾಸವಿದ್ದಂತೆ ಎಂದು ಅವರು ವಿವರಿಸಿದರು.
ಹೋರಾಟದಲ್ಲಿ ತೊಡಗಿಕೊಂಡವರು ಎಂದಿಗೂ ಹತಾಶರಾಗಬಾರದು. ಪ್ರತಿ ಹೋರಾಟವೂ ಒಂದಲ್ಲ ಒಂದು ದಿನ ಫಲ ನೀಡುತ್ತದೆ. ಯೋಗ್ಯರಲ್ಲದವರು ಯೋಗ್ಯಸ್ಥಾನಗಳನ್ನು ಆಕ್ರಮಿಸುತ್ತಿರುವುದರಿಂದ ಸಮಾಜದಲ್ಲಿ ತೊಂದರೆಗಳುಂಟಾಗುತ್ತಿವೆ. ಗುಲಾಮಿ, ಉಳಿಗಮಾನ್ಯ ಪದ್ದತಿ, ಕಾರ್ಪೊರೇಟ್ ಕಂಪನಿಗಳ ಬಂಡವಾಳ ಶಾಹಿ ನೀತಿ ಜನರನ್ನು ಇಂದಿಗೂ ಬಾದಿಸುತ್ತಿವೆ ಇವೆಲ್ಲಕ್ಕೂ ಪರಿಹಾರ ಮಾರ್ಕ್ಸ್‌ವಾದ ಎಂದು ಅವರು ಪ್ರತಿಪಾದಿಸಿದರು.
ಸಮಾರಂಭದಲ್ಲಿ ಕಾರ್ಲ್ ಮಾರ್ಕ್ಸ್ ಬಂಡವಾಳ ಸಂಪುಟ-2 ಮತ್ತು ಬಂಡವಾಳ ಸಂಪುಟ 1ರ ಪ್ರವೇಶಿಕೆ ಮತ್ತು ಗೈಡ್ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ. ಟಿ.ಆರ್. ಚಂದ್ರಶೇಖರ್, ವೆಂಕಟೇಶ ಆತ್ರೇಯ, ಎಸ್.ಕೆ.ವಸಂತರಾಜ, ಡಾ.ರಾಜೇಂದ್ರ ಚೆನ್ನಿ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eight =
Remember me
