ಕಾರವಾರ:ಹಿರಿಯ ಸಾಹಿತಿ ಹಾಗೂ ವಿಜಯವಾಣಿ ಅಂಕಣಕಾರ ನಾ.ಸು. ಭರತನಹಳ್ಳಿ (84) ಅವರು ಶುಕ್ರವಾರ ವಿಧಿವಶರಾಗಿದ್ದಾರೆ.
ಸಾಹಿತಿ, ರಂಗಕರ್ಮಿ, ಪತ್ರಕರ್ತ, ಪ್ರಕಾಶಕರಾಗಿ ಆರು ದಶಕಗಳಿಗಿಂತ ಹೆಚ್ಚು ಸಾಹಿತ್ಯದ ಸೇವೆ ಮಾಡಿದ್ದರು. ಕಥೆ, ಕಾದಂಬರಿ, ಕವನ, ಪ್ರವಾಸಿ ಕಥನ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರಹ ಸೇರಿದಂತೆ 26 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮುನ್ನಡೆ ವಾರ ಪತ್ರಿಕೆ ಹಾಗೂ ದಿನಪತ್ರಿಕೆಗಳ ಸಂಪಾದಕರಾಗಿ, ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದ ಸ್ವರ್ಣವಲ್ಲೀ ಪ್ರಭಾ ಸಂಪಾದಕರಾಗಿ 21 ವರ್ಷ ಪತ್ರಿಕೆ ಮುನ್ನಡೆಸಿದ್ದರು.
70 ನೇ ವಯಸ್ಸಿನಲ್ಲಕ ಅವರಿಗೆ ‘ಸನ್ಮತಿ’ ಎಂಬ ಅಭಿನಂದನಾ ಗ್ರಂಥ ಸಮರ್ಪಿಸಲಾಗಿದೆ. ಪ್ರೊ.ಟಿ.ಜಿ.ಭಟ್ಟ ಹಾಸಣಗಿ ಅವರು ನಾ.ಸು ಕುರಿತು ‘ಅವ್ಯಾಹ ಪ್ರೀತಿ’ ಎಂಬ ಕೃತಿ ಬರೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 14 ನೇ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ಯಲ್ಲಾಪುರ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಕೆ.ಶ್ಯಾಮರಾವ್ ದತ್ತಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕಶ್ರೀ ಪ್ರಶಸ್ತಿ, ಕಾಸರಗೋಡಿನ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಸುವರ್ಣ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ನಾ.ಸು ಭಾಜನರಾಗಿದ್ದರು.
ಭರತನಹಳ್ಳಿ ಅವರು ಸೊಸೆ, ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಪರಂಪರೆ; ಭೂಮಂಡಲದಲ್ಲಿ ಮನು ಮಹಾರಾಜನ ಆಳ್ವಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
