ಬೆಂಗಳೂರು: ಕರೊನಾ ಸೋಂಕಿತರನ್ನು ಮೊದಲು ಸಂರ್ಪಸಿ ದವರನ್ನು 12 ಗಂಟೆಯೊಳಗೆ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು 24 ಗಂಟೆಯೊಳಗೆ ಗುರುತಿಸಿ ನಿಗಾಬಂಧನದಲ್ಲಿ (ಕ್ವಾರಂಟೈನ್) ಇರಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.
ಪ್ರತಿಯೊಂದು ವಲಯದಲ್ಲಿ ನಿಯೋಜಿಸಲಾದ ಕರೊನಾ ನಿರ್ವಹಣಾ ತಂಡಗಳು ಪ್ರಾಥಮಿಕ ಸಂರ್ಪತರು, ದ್ವಿತೀಯ ಸಂರ್ಪತರನ್ನು ಪತ್ತೆಹಚ್ಚುವ ಹಾಗೂ ನಿಗಾಬಂಧನ ಸ್ಟ್ಯಾಂಪಿಂಗ್ ಮಾಡುವ ಕಾರ್ಯಗಳನ್ನು ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಾದಲ್ಲಿ ಬಹುಸ್ತರದ ಕಾರ್ಯಗಳನ್ನು ಮಾಡಲು ಸಮಸ್ಯೆ ಆಗುತ್ತದೆ. ಅದನ್ನು ಸರಳಗೊಳಿಸುವ ಈ ನಿಟ್ಟಿನಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ತರಬೇತಿ ನೀಡಿ ಕರೊನಾ ನಿಯಂತ್ರಣ ಮಾಡುವುದು ಆದ್ಯತೆಯಾಗಿದೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕರೊನಾ ಸೋಂಕು ನಿರ್ವಹಣೆ ಮಾಡಲು ಸರ್ಕಾರ ನಾಲ್ವರು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದೆ. ಹಿರಿಯ ಅಧಿಕಾರಿಗಳ ಅನುಭವಗಳನ್ನು ಕರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುವುದು. ವಲಯವಾರು ವಿವಿಧ ಕಾರ್ಯಗಳನ್ನು ನಿರ್ವಹಿಸಲು ಬಿಬಿಎಂಪಿ ಸಿಬ್ಬಂದಿ ಜತೆಗೆ ಪೊಲೀಸ್ ಅಧಿಕಾರಿ, ಆರೋಗ್ಯ ಸಿಬ್ಬಂದಿ, ವಿವಿಧ ಇಲಾಖೆಗಳ ನೌಕರರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದ್ದು, ಅವರಿಗೆ ತರಬೇತಿ ನೀಡಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.
ನಮ್ಮ ವಾರ್ಡ್ ಸೀಲ್​ಡೌನ್ ಮಾಡಿ..:ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್​ಗಳಲ್ಲಿ ಸೀಲ್​ಡೌನ್ ಮಾಡಿದ ಕಾರಣ ಹೊಸ ಕರೊನಾ ಸೋಂಕಿತರು ಕಂಡುಬಂದ ವಾರ್ಡ್​ಗಳ ಜನರು ಬಿಬಿಎಂಪಿಗೆ ಕರೆ ಮಾಡಿ ತಮ್ಮ ವಾರ್ಡ್​ಗಳನ್ನೂ ಸೀಲ್​ಡೌನ್ ಮಾಡುವಂತೆ ಮನವಿ ಮಾಡಿದ್ದಾರೆ. ಒಂದೇ ದಿನ ಹೆಚ್ಚಿನ ಕರೊನಾ ಸೋಂಕಿತರು ವಾರ್ಡ್​ನಲ್ಲಿ ಕಂಡುಬಂದರೆ ಮಾತ್ರ ಸೀಲ್​ಡೌನ್ ಮಾಡಬೇಕಾಗುತ್ತದೆ. ಆದರೆ, ಈಗ ಯಾವುದೇ ವಾರ್ಡ್​ಗಳಲ್ಲಿ ಹೆಚ್ಚು ಸೋಂಕಿತರ ಪ್ರಮಾಣ ಕಂಡುಬಾರದ ಕಾರಣಸೀಲ್​ಡೌನ್ ಜಾರಿ ಮಾಡುವುದಿಲ್ಲ ಎಂದು ಆಯುಕ್ತ ಅನಿಲ್​ಕುಮಾರ್ ತಿಳಿಸಿದರು.
ಲಾಕ್​ಡೌನ್ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ಸ್ಥಗಿತ -ಖರೀದಿಗೂ ಸಿಕ್ಕಿಲ್ಲ ಅನುಮತಿ: ಶಾಲಾರಂಭಕ್ಕೆ ಸಿಗಲ್ಲ ಸೈಕಲ್, ಸಮವಸ್ತ್ರ

ಸಾವು ಕಣ್ಮುಂದೆ ಕುಣೀತಿತ್ತು- ಆದ್ರೂ ಬದುಕಿ ಉಳಿದೆ..

ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
