ಬೆಂಗಳೂರು:ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗದ(ಓಪಿಡಿ) ಸೇವೆಯಲ್ಲಿ ಶನಿವಾರ ವ್ಯತ್ಯಯ ಉಂಟಾದ ಪರಿಣಾಮ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂರಾರು ರೋಗಿಗಳು ಚಿಕಿತ್ಸೆಗಾಗಿ ಪರದಾಡಿದರು.
ಕೋಲ್ಕತ್ತದ ಆರ್​.ಜಿ.ಕಾರ್​ ವೈದ್ಯಕಿಯ ಕಾಲೇಜಿನಲ್ಲಿ ಕರ್ತವ್ಯನಿರತ ಯುವ ವೈದ್ಯೆಯನ್ನು ಅತ್ಯಾಚಾರ ಎಸಗಿ ಅಮಾನುಷವಾಗಿ ಹತ್ಯೆಗೈದ ಘಟನೆ ಖಂಡಿಸಿ ನೂರಾರು ವೈದ್ಯರು, ವೈದ್ಯಾಕಿಯ ಸಿಬ್ಬಂದಿ, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾದ ಪರಿಣಾಮ ತುರ್ತು ವೈದ್ಯಕಿಯ ಅಗತ್ಯ ಇರುವ ರೋಗಿಗಳಿಗೆ ಸಮಸ್ಯೆಯಾಯಿತು. ಕೆ.ಸಿ.ಜನರಲ್​ ಆಸ್ಪತ್ರೆಗೆ 7 ತಿಂಗಳ ಗರ್ಭಿಣಿಯೊಬ್ಬರು ಚಿಕಿತ್ಸೆಗೆಂದು ಆಗಮಿಸಿದ್ದಾಗ ವೈದ್ಯರ ಇಲ್ಲದ ಕಾರಣ ತೊಂದರೆ ಅನುಭವಿಸಿದರು. ರಕ್ತಸ್ರಾವದಿಂದ ಬಳಲುತ್ತಿರುವ ಕಾರಣ ಗರ್ಭಿಣಿ, ಪ್ರಾಥಮಿಕ ಚಿಕಿತ್ಸೆಗಾಗಿ ಲಗ್ಗೆರೆ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕೆ.ಸಿ.ಜನರಲ್​ ಆಸ್ಪತ್ರೆ ತೆರಳುವಂತೆ ಅಲ್ಲಿನ ಸಿಬ್ಬಂದಿ ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಬಂದಾಗ ವೈದ್ಯರು ಇಲ್ಲದ ಕಾರಣ ಚಿಕಿತ್ಸೆ ಸಿಗದೆ ಗರ್ಭಿಣಿ ಮಹಿಳೆ ತೊಂದರೆಗೆ ಒಳಗಾದರು.
ರಾಜಾಜಿನಗರದ ಸುಗಣ ಆಸ್ಪತ್ರೆಗೆ ಡಯಾಲಿಸಿಸ್​ಗೆ ಬಂದ ರೋಗಿಗಳು ವೈದ್ಯರ ಇಲ್ಲದ ಕಾರಣ ವಾಪಸ್​ ಊರಿಗೆ ತೆರಳಿದರು. ಕೃಷ್ಣ ಎಂಬುವರು ಡಯಾಲಿಸಿಸ್​ ಸೇವೆ ಸಿಗದೆ ವಾಪಸ್​ ತುಮಕೂರಿಗೆ ಹೋದರು. ಸೋಮವಾರದವರೆಗೆ ಕಡಿಮೆ ನೀರು ಕುಡಿದು ವಾಪಸ್​ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಾನೆ ಎಂದು ಕೃಷ್ಣ ಹೇಳಿದರು. ವಾಣಿವಿಲಾಸ, ವಿಕ್ಟೋರಿಯಾ, ಮಿಂಟೋ, ಬೌರಿಂಗ್​, ಕೆ.ಸಿ.ಜನರಲ್​ ಸೇರಿ ಬೆಂಗಳೂರು ನಗರದ ಹಲವು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲೂ ಜ್ವರ, ಕೆಮ್ಮು,ನೆಗಡಿ, ಡಯಾಲಿಸಿಸಿಗೆ ಚಿಕಿತ್ಸೆ ಸಿಗದೆ ರೋಗಿಗಳು ತೊಂದರೆಗೆ ಸಿಲುಕಿದರು. ಕೆಲ ಆಸ್ಪತ್ರೆಗಳ ಮುಂಭಾಗ ರೋಗಿಗಳು ಕಾಯುತ್ತಿದ್ದ ದೃಶ್ಯ ಕಂಡುಬಂತು. ಜಿಲ್ಲಾ ಕೇಂದ್ರಗಳಲ್ಲೂ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾದ ಪರಿಣಾಮ ರೋಗಿಗಳು ಚಿಕಿತ್ಸೆಗಾಗಿ ಪರದಾಡಿದರು. ತುರ್ತು ಚಿಕಿತ್ಸೆ ಲಭ್ಯವಿತ್ತು. ಆದರೂ, ಆಸ್ಪತ್ರೆಗಳಲ್ಲಿನ ಹಲವು ವಿಭಾಗ ಎದುರು ರೋಗಿಗಳು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂತು.
ಹಳೆ ಪಿಂಚಣಿ ಜಾರಿಗೆ ಸೂಕ್ತ ನಿರ್ಧಾರ: ಸಿಎಂ ಭರವಸೆ
ರಾಜಧಾನಿಯಲ್ಲಿ ಜಾಥಾಮೃತ ವೈದ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು,ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕಿಯ ಸಂಘ(ಐಎಂಎ) ಕರ್ನಾಟಕ ರಾಜ್ಯ ಶಾಖೆ, ನಗರದಲ್ಲಿ ಪ್ರತಿಭಟನೆ ನಡೆಸಿತ್ತು. ಕಿಮ್ಸ್​ ಆಸ್ಪತ್ರೆಯಿಂದ ಆರಂಭವಾದ ಜಾಥಾವು ಮಕ್ಕಳಕೂಟ, ಮಿಂಟ್ರೋ ಆಸ್ಪತ್ರೆ ಮುಂಭಾಗ, ವಿಕ್ಟೋರಿಯಾ ಆಸ್ಪತ್ರೆ, ಕೆ.ಆರ್​.ಮಾರುಕಟ್ಟೆ ಮೆಟ್ರೋ ಸ್ಟೇಷನ್​ ಮೂಲಕ ಸಾಗಿ ಐಎಂಎ ಕರ್ನಾಟಕ ಶಾಖೆ ಕಚೇರಿ ಮುಂಭಾಗ ಸಮಾಪ್ತಿಗೊಂಡಿತು. ಸಾವಿರಾರು ವೈದ್ಯರು, ವಿದ್ಯಾರ್ಥಿಗಳು, ವೈದ್ಯಕಿಯ ಸಿಬ್ಬಂದಿ ಕೆಲಸದಿಂದ ದೂರ ಉಳಿದು ಬೀದಿಗಿಳಿದರು. “ವೈದ್ಯರನ್ನು ಉಳಿಸಿ’, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ನಮಗೆ ಇಲ್ಲ ಸ್ವಾತಂತ್ರ್ಯ, “ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಿಲ್ಲಿಸಿ’, “ಮೃತ ಕುಟುಂಬಕ್ಕೆ ನ್ಯಾಯ ಸಿಗಲಿ’, “ಆರೋಪಿಗಳನ್ನು ಗಲ್ಲಿಗೇರಿಸಿ’ ಫಲಕ ಹಿಡಿದು ಘೋಷಣೆ ಕೂಗಿದರು. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್​ ಹೋಮ್ಸ್​ ಅಸೋಸಿಯೇಷನ್​( ಫನಾ), ಫನಾ ಬೆಂಬಲ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಮಕ್ಕಳ ವೈದ್ಯರ ಸಂಘ, ಆಥೋರ್ಪಿಡಿಕ್​ ಸಂ, ಮೆಡಿಕಲ್​ ಕಾಲೇಜು ವೈದ್ಯರ ಸಂ, ಕರ್ನಾಟಕ ಅಸೋಸಿಯೇಷನ್​ ಆ್​ ರೆಸಿಡೆಂಟ್​ ಡಾಕ್ಟರ್ಸ್​( ಕೆಎಆರ್​ಡಿ), ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾದರು.
ಪ್ರತ್ಯೇಕ ಕಾನೂನು ಜಾರಿಗೆಯಾಗಲಿದೇಶದಲ್ಲಿ ವೈದ್ಯರ ರಕ್ಷಣೆಗೆ ಯಾವುದೇ ಕಾನೂನು ಇಲ್ಲ. ಇದರಿಂದಾಗಿ ಅಸುರತ ವಾತಾವರಣದಲ್ಲಿ ಕರ್ತವ್ಯ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ವಕೀಲರ ಸುರಕ್ಷತೆಗಾಗಿ ಪ್ರತ್ಯೇಕ ಕಾನೂನು ಜಾರಿಗೆ ತರಲಾಗಿದೆ. ಅದೇ ಮಾದರಿಯಲ್ಲಿ ವೈದ್ಯರ ಸುರಕ್ಷತೆಗಾಗಿ ಪ್ರತ್ಯೇಕ ಕಾನೂನು ರೂಪಿಸಿ ಅನುಷ್ಠಾನಕ್ಕೆ ಬರಬೇಕು. ಮೃತ ಯುವ ವೈದ್ಯೆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಕಠಿಣ ಶಿಕ್ಷಣ ನೀಡಬೇಕೆಂದು ಭಾರತೀಯ ವೈದ್ಯಕಿಯ ಸಂಘದ ಕರ್ನಾಟಕ ರಾಜ್ಯ ಶಾಖೆ ಅಧ್ಯಕ್ಷ ಡಾ.ಎಸ್​. ಶ್ರೀನಿವಾಸ್​ ಒತ್ತಾಯಿಸಿದ್ದಾರೆ. ಟನೆಯಿಂದ ಮಹಿಳಾ ವೈದ್ಯರು ಹೆಚ್ಚು ಭಯಬೀತರಾಗಿದ್ದಾರೆ. ಇಂಥ ಟನೆಯಾಗದಂತೆ ಕೆಲಸ ಮಾಡುವ ಸ್ಥಳದಲ್ಲಿ ವೈದ್ಯರಿಗೆ ಭದ್ರತೆ ನೀಡಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seven =
Remember me
