| ವಾದಿರಾಜ ವ್ಯಾಸಮುದ್ರ ಕಲಬುರಗಿ
ಕಲ್ಯಾಣ ಕರ್ನಾಟಕ ಹೆಸರಿನಡಿ ಮೊದಲ ಉತ್ಸವ ಸಂಭ್ರಮದ ಹೊಸ್ತಿಲಲ್ಲಿರುವ ಈ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ರಚನೆ ಜತೆಗೆ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂಬ ಬಲವಾದ ಕೂಗು ಎದ್ದಿದೆ. ಕಲ್ಯಾಣ ಕರ್ನಾಟಕ ಹೆಸರಿನ ಸಾರ್ಥಕತೆಗೆ ಈ ಎರಡೂ ಕೆಲಸಗಳನ್ನು ಆದ್ಯತೆ ಮೇಲೆ ಸರ್ಕಾರ ಕೈಗೊಳ್ಳಬೇಕೆಂಬ ಬೇಡಿಕೆ ಜೋರಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೈದರಾಬಾದ್ ಕರ್ನಾಟಕ ಹೆಸರು ಅಳಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಸೆ.17ಕ್ಕೆ ಒಂದು ವರ್ಷ. ಈ ಒಂದು ವರ್ಷದಲ್ಲಿ ಹೆಸರು ಬದಲಾಗಿದೆ ಎಂಬ ಸಮಾಧಾನ ಹೊರತುಪಡಿಸಿ ಕಲ್ಯಾಣಕ್ಕೆ ಪೂರಕವಾದ ಯಾವುದೇ ಕೆಲಸ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಹೀಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಬಜೆಟ್ ಮಂಡನೆ ವಿಷಯ ಮುನ್ನೆಲೆಗೆ ಬಂದಿದೆ. ಯಡಿಯೂರಪ್ಪ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ಕಲಬುರಗಿಗೆ ಬರಲಿದ್ದು, ಈ ವೇಳೆ ಹೊಸ ಯೋಜನೆ ಘೊಷಿಸಬಹುದೇ? ಎಂಬ ಆಶಾಭಾವ ಸ್ಥಳೀಯರಲ್ಲಿ ಮೂಡಿದೆ.
ಡಾ.ನಂಜುಂಡಪ್ಪ ಸಮಿತಿ ವರದಿಯಂತೆ ಈ ಭಾಗದ ಸಂಪೂರ್ಣ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಮಂಡನೆ ಪ್ರಮುಖ ದಾರಿ ಎಂದು ಹೇಳಲಾಗಿತ್ತು. ಆದರೆ ಈ ಕೆಲಸ ಇನ್ನೂ ಆಗಿಲ್ಲ. ಸಂವಿಧಾನದ 371(ಜೆ) ಜಾರಿ ಬಳಿಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರಾಜ್ಯಪಾಲರು ಅಧ್ಯಕ್ಷರಾಗಬೇಕೆಂದು ರಾಷ್ಟ್ರಪತಿ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ಜಾರಿ ಆಗಲೇ ಇಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡಿತು. ಈಗಿನ ಬಿಜೆಪಿ ಸರ್ಕಾರ ಶಾಸಕರಿಗೆ ಅವಕಾಶ ಕಲ್ಪಿಸಿದೆ. 371(ಜೆ) ಅನುಷ್ಠಾನ, ಈ ಭಾಗದ ಸಮಗ್ರ ವಿಕಾಸದ ದೃಷ್ಟಿಕೋನದಿಂದ ಮಂಡಳಿ ಅಧ್ಯಕ್ಷರಿಗೂ ಸಂಪೂರ್ಣ ಅಧಿಕಾರ ಕಲ್ಪಿಸಲಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಇಲ್ಲಿರುವ ಎಲ್ಲ ನ್ಯೂನತೆ ಸರಿಪಡಿಸಿ ಮಂಡಳಿಯನ್ನು ಸಶಕ್ತಗೊಳಿಸುವ ಸವಾಲು ಬಿಎಸ್​ವೈ ಸರ್ಕಾರದ ಮುಂದಿದೆ.ಇದನ್ನೂ ಓದಿ:ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಕೊವಿಡ್​-19 ಸೋಂಕು
ಸದ್ಯ ಮಂಡಳಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಸಾರಥಿ. ಮಂಡಳಿ ಅಧ್ಯಕ್ಷರಿಗೆ ಸ್ವತಂತ್ರ ತೀರ್ಮಾನ ಕೈಗೊಳ್ಳುವ ಅಧಿಕಾರ ನೀಡಿಕೆ ಜತೆಗೆ ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂಬ ಒತ್ತಾಯ ತಜ್ಞರಿಂದ ಬರುತ್ತಿದೆ.
ಸುದೀರ್ಘ ಹೋರಾಟದ ಫಲವಾಗಿ ಸಂವಿಧಾನದ 371(ಜೆ) ಜಾರಿಗೆ ಬಂತು. ಇದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಹಿರಿಯ ಮುಖಂಡ ಎಚ್.ಕೆ. ಪಾಟೀಲ ಅವರನ್ನು (ಈ ಭಾಗಕ್ಕೆ ಸೇರದ) ಸಂಪುಟ ಉಪ ಸಮಿತಿ ಅಧ್ಯಕ್ಷರನ್ನಾಗಿ ಮಾಡಿತ್ತು! ಸರ್ಕಾರದ ಒಟ್ಟು ಬಜೆಟ್​ನಲ್ಲಿ ಶೇ.20 ಈ ಭಾಗಕ್ಕೆ (ಎಚ್​ಕೆಆರ್​ಡಿಬಿ) ನೀಡಬೇಕೆಂಬ ವಿಷಯ ಮುನ್ನೆಲೆಗೆ ಬಂದಾಗ ಪಾಟೀಲ್ ಆಕ್ಷೇಪಿಸಿದ್ದರು. ಈ ಭಾಗದ ಆರು ಜಿಲ್ಲೆಗಳಿಗೆ ಬಜೆಟ್​ನಲ್ಲಿ ಇಂತಿಷ್ಟು ಅನುದಾನ ಕಾದಿರಿಸುವುದಾದರೆ ಗದಗ ಜಿಲ್ಲೆಯನ್ನೂ ಮಂಡಳಿಯಡಿ ಸೇರಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು. ಇಂಥ ನಿಲುವು ಹೊಂದಿದ್ದವರಿಗೆ ಸಂಪುಟ ಉಪಸಮಿತಿ ಅಧ್ಯಕ್ಷ ಸ್ಥಾನ ನೀಡಿದಾಗಲೂ ಈ ಭಾಗದ ಜನಪ್ರತಿನಿಧಿಗಳು ಬಾಯಿ ಬಿಚ್ಚಲಿಲ್ಲ. ಈ ಪ್ರತ್ಯೇಕ ಸಚಿವಾಲಯ, ಬಜೆಟ್ ವಿಷಯ ಚರ್ಚೆಗೆ ಬಂದರೂ ಜನಪ್ರತಿನಿಧಿಗಳ ಕೂಗು ವಿಧಾನಸೌಧವರೆಗೆ ಕೇಳಿಸುತ್ತಿಲ್ಲ.
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಎಂಬ ದಾಸ್ಯ ಭಾವದಿಂದ ಹೊರಬಂದು ಕಲ್ಯಾಣ ಕರ್ನಾಟಕ ಉತ್ಸವ ಮಾಡುತ್ತಿರುವುದು ಸ್ವಾಭಿಮಾನದ ಸಂಕೇತ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಬರ್ತ್​ ಡೇ ದಿನ ಅಳುತ್ತಿದ್ದ ಮಗಳಿಗೆ ಅಪ್ಪ ಕಳಿಸಿದ ಸಂದೇಶ ಇದು…; ನನಗೆ ಯೋಗ್ಯತೆಯೇ ಇಲ್ಲ ಎಂದ ಪುತ್ರಿ
ಕೆಕೆಆರ್​ಡಿಬಿ ಆದ ನಂತರ ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚಿಸುವ ಮೂಲಕ ಶಾಲಾ ಶಿಕ್ಷಣ ಮತ್ತು ಕೃಷಿ ಶಿಕ್ಷಣ ಸಮಾಗಮಗೊಳಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ವಣಕ್ಕೆ ಮುಂದಾಗಿದೆ. ರಾಯಚೂರು ಜಿಲ್ಲೆ ಗೋಲಪಲ್ಲಿಯಲ್ಲಿ 1200 ಮೆಗಾವಾಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಚಿಂತನೆ ನಡೆದಿದೆ. ಇದು 10 ಸಾವಿರ ಕೋಟಿ ರೂ. ಯೋಜನೆಯಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಗಿಣಾ ನದಿ ಏತ ನೀರಾವರಿಗೆ 800 ಕೋಟಿ ರೂ. ನೀಡುವಂತೆ ಕೋರಲಾಗಿದೆ. ಕಲಬುರಗಿ ಮಹಾನರದಿಂದ ಅನಗತ್ಯವಾಗಿ ಹರಿದು ಭೀಮಾ ನದಿಗೆ ಸೇರುವ ನೀರನ್ನು ತಡೆದು ಶುದ್ಧೀಕರಣ ಮಾಡಿ 2500 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. 300 ಕೋಟಿ ರೂ. ಯೋಜನೆ ಇದಾಗಿದ್ದು, ಮೊದಲ ಹಂತವಾಗಿ ಸರ್ಕಾರ 100 ಕೋಟಿ ಅನುದಾನ ನೀಡಿದೆ ಎಂದಿದ್ದಾರೆ.
ಗೋಹತ್ಯೆ ನಿಷೇಧಕ್ಕೆ ಪ್ರಬಲ ಕಾನೂನು ಬೇಗ ಜಾರಿಯಾಗಲಿ: ಸಿಎಂಗೆ ಪೇಜಾವರ ಶ್ರೀ ಪತ್ರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 7 =
Remember me
