ಬೆಂಗಳೂರು:ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಡಿಎಲ್, ಎಲ್​ಎಲ್, ಫಿಟ್ನೆಸ್ ಸರ್ಟಿಫಿಕೆಟ್ ಮಾಡಿಸುವ ಕೆಲಸಗಳು ಆರ್​ಟಿಒ ಕಚೇರಿಗಳಲ್ಲಿ ಮತ್ತೆ ಶುರುವಾಗಿದೆಯಾದರೂ ನೆಟ್​ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಒಂದು ದಿನ ಸರ್ವರ್ ಡೌನ್ ಆಗಿದ್ದರೆ ಮತ್ತೊಂದು ದಿನ ನೆಟ್​ವರ್ಕ್ ಸಮಸ್ಯೆ. ಇದನ್ನು ಬಗೆಹರಿಸಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಉತ್ತಮ ಸೇವೆ ಒದಗಿಸಬೇಕಾದ ಎನ್​ಐಸಿ ಹಾಗೂ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಪ್ರತಿ ಆರ್​ಟಿಒನಲ್ಲಿ ಸರಾಸರಿ ಶೇ.50 ಹುದ್ದೆ ಖಾಲಿ ಇವೆ. ಸಾರಥಿ-4 ತಂತ್ರಾಂಶ ಅಳವಡಿಸಲಾಗಿದ್ದರೂ ಹಳೆಯ ಕಂಪ್ಯೂಟರ್, ಯುಪಿಎಸ್ ತಂತ್ರಜ್ಞಾನದ ವೇಗಕ್ಕೆ ಒಗ್ಗುತ್ತಿಲ್ಲ. ಇನ್ನೂ ಕೆಲವೆಡೆ ರಿಪೇರಿಗೆ ಬಂದಿವೆ. ಸಾಫ್ಟ್​ವೇರ್ ಅಪ್​ಡೇಟ್ ಆಗದ ಕಾರಣ ಕೆಲಸ ನಿರ್ವಹಿಸಲು ಕಷ್ಟವಾಗಿದೆ. 2008ರಿಂದಲೂ ಆರ್​ಟಿಒ ಕಚೇರಿಗಳಲ್ಲಿ ಸಮಸ್ಯೆ ಇದೆ. ಒಬ್ಬರ ದಾಖಲಾತಿ ಅಪ್​ಲೋಡ್​ಗೆ ಗಂಟೆಗಟ್ಟಲೆ ಕಾಯಬೇಕು. ತಂತ್ರಾಂಶ ಬಳಕೆ ಬಗ್ಗೆ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸದಿರುವುದೂ ಕೂಡ ಕೆಲಸ ವಿಳಂಬಕ್ಕೆ ಕಾರಣ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಸೋಮವಾರ ಬೆಂಗಳೂರಿನ ಕೆಲ ಆರ್​ಟಿಒಗಳಲ್ಲಿ ಸಂಜೆ 4 ಗಂಟೆಯವರೆಗೂ ನೆಟ್​ವರ್ಕ್ ಇರಲಿಲ್ಲ. ಬಳಿಕ ಬಂತಾದರೂ ಬೆರಳೆಣಿಕೆ ಜನರಿಗಷ್ಟೇ ಸೇವೆ ನೀಡಲು ಸಾಧ್ಯವಾಗಿದೆ. ಮಂಗಳವಾರವೂ ಕೆಲ ಕಚೇರಿಗಳಲ್ಲಿ ಸರ್ವರ್ ಡೌನ್ ಆಗಿ ಜನ ಸಂಕಷ್ಟ ಎದುರಿಸಬೇಕಾಯಿತು.
ಅಧಿಕಾರಿಗಳು ಹೈರಾಣ:ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆ ಆಯುಕ್ತರ ಕೇಂದ್ರ ಕಚೇರಿಯಲ್ಲಿ ಮುಖ್ಯ ಸರ್ವರ್ ಅಳವಡಿಸಲಾಗಿದೆ. ಅಲ್ಲಿಂದಲೇ ಆರ್​ಟಿಒ ಕಚೇರಿಗಳ ನಿಯಂತ್ರಣ ಮಾಡಲಾಗುತ್ತದೆ. ಆದರೆ, ನೆಟ್​ವರ್ಕ್ ಯಾವಾಗ ಬರುತ್ತೆ, ಯಾವಾಗ ಹೋಗುತ್ತೆ ಎನ್ನುವುದೇ ಗೊತ್ತಾಗುವುದಿಲ್ಲ. ಸ್ಲಾಟ್ ತೆಗೆದುಕೊಂಡ ದಿನ ಕೆಲಸ ಆಗಲಿಲ್ಲ ಎಂದರೆ ಮುಂದಿನ ದಿನಕ್ಕೆ ನಿಗದಿಗೊಳಿಸಲು ಆಗುವುದಿಲ್ಲ. ನಾಳೆಗೆ ಮತ್ತೊಬ್ಬರು ಸಮಯ ನಿಗದಿ ಪಡೆದಿರುತ್ತಾರೆ. ಹೀಗಾಗಿ ಮತ್ತೆ ಹೊಸದಾಗಿ ಸಮಯ ಕಾಯ್ದಿರಿಸಬೇಕಾಗುತ್ತದೆ. ಈ ವಿಚಾರ ತಿಳಿಯದ ಜನ ಜಗಳಕ್ಕಿಳಿಯುತ್ತಾರೆಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
ಪ್ರತಿನಿತ್ಯ 500 ಜನ ಭೇಟಿ:ಎಲ್​ಎಲ್, ಡಿಎಲ್, ಎಫ್​ಸಿ, ದಾಖಲೆ ನವೀಕರಣ, ಆರ್​ಸಿ ವರ್ಗಾವಣೆ, ಹೊಸ ವಾಹನಗಳ ನೋಂದಣಿ ಹೀಗೆ ಬೇರೆಬೇರೆ ಸೇವೆಗಳಿಗಾಗಿ ಪ್ರತಿ ಆರ್​ಟಿಒಗಳಿಗೆ ನಿತ್ಯ 450 ರಿಂದ 500 ಜನ ಭೇಟಿ ನೀಡುತ್ತಾರೆ.
ಕಮಿಷನರ್ ಕಚೇರಿಗೆ ಮೇಲ್:ಸರ್ವರ್, ನೆಟ್​ವರ್ಕ್ ಸಮಸ್ಯೆ ಜತೆಗೆ ಡೇಟಾ ಎಂಟ್ರಿಯಲ್ಲಾಗುವ ತಪ್ಪು ತಿದ್ದುವ ಕಾಯಕದಲ್ಲೇ ಅಧಿಕಾರಿಗಳು ಹೈರಾಣಾಗುತ್ತಾರೆ. ಚಾಸ್ಸಿ ನಂಬರ್ ಬದಲಾವಣೆ ಅಥವಾ ತಪ್ಪಾದ ಹೆಸರು ನಮೂದಾಗಿದ್ದರೆ ಅದನ್ನು ಸರಿಪಡಿಸಲು ಸಾರಿಗೆ ಇಲಾಖೆ ಕೇಂದ್ರ ಕಚೇರಿಗೆ ಇ ಮೇಲ್ ಕಳುಹಿಸಬೇಕು. ತಪ್ಪು ಸರಿಪಡಿಸುವ ಅಧಿಕಾರ ಆರ್​ಟಿಒಗಳಿಗಿದ್ದರೂ ಚಲಾಯಿಸಲು ಬಿಡುತ್ತಿಲ್ಲ ಎಂಬುದು ಬಹುತೇಕ ಅಧಿಕಾರಿಗಳ ಅಭಿಪ್ರಾಯ.
18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fifteen =
Remember me
