| ನಿಶಾಂತ್ ಬಿಲ್ಲಂಪದವು, ಪುತ್ತೂರು
ರಾಜ್ಯದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ತಿದ್ದುಪಡಿ ಸವಾಲಾಗಿ ಪರಿಣಮಿಸಿದೆ. ಸರ್ಕಾರದ ಕೆಲ ಗ್ಯಾರಂಟಿ ಯೋಜನೆಗಳಿಗೆ ಪಡಿತರ ಚೀಟಿ ಅಗತ್ಯವಾಗಿದ್ದು, ಪಡಿತರ ಚೀಟಿಗಳ ತಿದ್ದುಪಡಿಗೆ ಗ್ರಾಮೀಣ ಜನರು ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಕ್ಯೂ ನಿಲ್ಲುವ ಸ್ಥಿತಿ ನಿರ್ವಣವಾಗಿದೆ. ಸಮಸ್ಯೆ ತೀವ್ರವಾಗುತ್ತಿದ್ದಂತೆ ಡಿವಿಜನ್ ವ್ಯಾಪ್ತಿಯ ಜಿಲ್ಲೆಗಳನ್ನು ವಿಂಗಡನೆ ಮಾಡಿ ವ್ಯವಸ್ಥೆ ಕಲ್ಪಿಸಿದರೂ ಸರ್ವರ್ ಸಮಸ್ಯೆ ಸರಿಪಡಿಸಲು ಸಾಧ್ಯವಾಗಿಲ್ಲ.
ತಿದ್ದುಪಡಿಗೆ ಸೆ.1ರಿಂದ 4 ದಿನ ಅವಕಾಶ ಕಲ್ಪಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಬೆರಳೆಣಿಕೆಯ ಕಾರ್ಡ್​ಗಳ ತಿದ್ದುಪಡಿ ಮಾತ್ರ ಸಾಧ್ಯವಾಗಿದೆ. ರಾಜ್ಯದಲ್ಲಿ ದಿನಕ್ಕೆ 20 ರಿಂದ 25 ಸಾವಿರ ಅರ್ಜಿಗಳು ಪಡಿತರ ಚೀಟಿಗಾಗಿ ಸ್ವೀಕಾರವಾಗಿದ್ದು, ಇಲಾಖೆ ಕ್ರಮ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅರ್ಜಿ ಸ್ವೀಕಾರ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಒಂದು ಅರ್ಜಿಯೂ ಸ್ವೀಕಾರವಾಗುತ್ತಿಲ್ಲ.
ಜವಾಬ್ದಾರಿಗೆ ಹಿಂದೇಟು:ಒಂದು ಪಡಿತರ ಚೀಟಿ ತಿದ್ದುಪಡಿಯನ್ನು 7 ದಿನದೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಮುಂದಿನ ಒಂದು ತಿಂಗಳು ಆ ಪಡಿತರ ಚೀಟಿಯಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ. ಸರ್ವರ್, ಒಟಿಪಿ, ಬೆರಳಚ್ಚು ಸಮಸ್ಯೆಯಿಂದಾಗಿ ತಿದ್ದುಪಡಿ ವಿಳಂಬವಾಗುತ್ತಿದ್ದು, ಒಂದು ಪಡಿತರ ಚೀಟಿ ತಿದ್ದುಪಡಿ ಮಾಡಲು 3 ರಿಂದ 4 ಗಂಟೆ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಕೆಲವು ಕೇಂದ್ರದವರು ತಿದ್ದುಪಡಿ ಜವಾಬ್ದಾರಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪಡಿತರ ವಿತರಣೆ ಕಾರ್ಯಕ್ಕೆ ಬಳಸುವ ಸರ್ವರ್​ನಲ್ಲಿಯೇ ತಿದ್ದುಪಡಿಯೂ ಆಗಬೇಕಿದ್ದು, ಸರ್ಕಾರ ಹೊಸ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದು ಜನರ ಬೇಡಿಕೆ.
ಫಿಸಿಕಲ್ ಸರ್ವರ್ ವ್ಯವಸ್ಥೆ ಸದ್ಯ ಬಳಕೆಯಲ್ಲಿದೆ. ಇದು ವರ್ಚುವಲ್ ಸರ್ವರ್​ಗೆ ಬದಲಾದರೆ ಮಾತ್ರ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯ. ಹೊಸ ಸರ್ವರ್ ಪಡೆಯುವ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳಿಂದ ಕೆಲಸ ನಡೆಯುತ್ತಿದ್ದು, ಟೆಂಡರ್ ಕರೆಯಲಾಗಿದೆ.
| ಕನಗವಲ್ಲಿ, ಆಯುಕ್ತರು, ಆಹಾರ ಇಲಾಖೆ
ಯಾವ ಡಿವಿಜನ್​ಗೆ ಯಾವಾಗ?:ಪಡಿತರ ತಿದ್ದುಪಡಿಗೆ ಆ.18ರಿಂದ 21ರ ನಡುವೆ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ, ಆ.24ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ, ಸೆ.1ರಿಂದ ಸೆ.4ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಕಲಬುರಗಿ ಡಿವಿಜನ್​ಗೆ ಸೆ.6ರಿಂದ ಸೆ.8ರ ಹಾಗೂ ಬೆಂಗಳೂರು ಡಿವಿಜನ್​ಗೆ ಸೆ.9ರಿಂದ 11ರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸರ್ವರ್ ನೀಡಲಾಗಿತ್ತು. ಬೆಳಗಾವಿ/ಮೈಸೂರು ಡಿವಿಜನ್​ಗೆ ಸೆ.12ರಿಂದ 14ರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸರ್ವರ್ ನೀಡಲಾಗಿದೆ.
ಮೂರು ಡಿವಿಜನ್​ಗಳ ವ್ಯವಸ್ಥೆ:ಬೆಂಗಳೂರು ಡಿವಿಜನ್​ನಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಪೇಟೆ ಭಾಗ ಒಳಗೊಂಡಿದೆ. ಬೆಳಗಾವಿ/ಮೈಸೂರು ಡಿವಿಜನ್​ನಲ್ಲಿ ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಸೇರಿವೆ. ಕಲಬುರಗಿ ಡಿವಿಜನ್​ನಲ್ಲಿ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಗಳಿವೆ.
| ಸೋರಲಮಾವು ಶ್ರೀಹರ್ಷ, ತುಮಕೂರು
ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ನೀಡುತ್ತಿರುವ ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಂದ ಜಾತಿ ಪ್ರಮಾಣ ಪಡೆಯಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಕಾರ್ಯದರ್ಶಿ ಸೂಚನೆ ಮೇರೆಗೆ ರಾಜ್ಯದ ಎಲ್ಲ ಪಡಿತರ ಅಂಗಡಿಗಳಲ್ಲಿ ಅಕ್ಕಿ ಪಡೆಯಲು ಜಾತಿ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ಕೆವೈಸಿ ಮಾಡುವ ನೆಪದಲ್ಲಿ ಜುಲೈನಿಂದಲೇ ಜಾತಿ ಪ್ರಮಾಣ ಸಂಗ್ರಹಣೆಯ ಕೆಲಸ ಸದ್ದಿಲ್ಲದೆ ನಡೆದಿದೆ. ಈಗ ಮತ್ತೊಮ್ಮೆ ನವೀಕರಣದ ಹೆಸರಿನಲ್ಲಿ ಪಡಿತರ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಜಾತಿ ಪ್ರಮಾಣಪತ್ರದ ಜತೆ ಆಗಮಿಸಿ ಅಕ್ಕಿ ಪಡೆಯುವಂತೆ ಸೂಚಿಸಲಾಗುತ್ತಿದೆ. ರಾಜ್ಯಾದ್ಯಂತ 25,31,485 ಪರಿಶಿಷ್ಟ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಕೈಬಿಟ್ಟು ಹೋಗಿರುವ ಫಲಾನುಭವಿಗಳ ಪತ್ತೆಗೆ ಮತ್ತೊಮ್ಮೆ ಇಲಾಖೆಯಿಂದಲೇ ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗಿದೆ. 25,31,485 ಸಕ್ರಿಯ ಪಡಿತರ ಚೀಟಿಗಳ ಪೈಕಿ ಅಂತ್ಯೋದಯ ಚೀಟಿಗಳನ್ನು 3.95ಲಕ್ಷ ಫಲಾನುಭವಿಗಳು, ಬಿಪಿಎಲ್ ಅನ್ನು 21.35 ಲಕ್ಷ ಪರಿಶಿಷ್ಟ ಫಲಾನುಭವಿಗಳು ಹೊಂದಿದ್ದು, ಇನ್ನೂ ಸಂಖ್ಯೆ ಹೆಚ್ಚಿಸಲು ಸರ್ಕಾರ ಕಸರತ್ತು ನಡೆಸುತ್ತಿದೆ. ಬೆಳಗಾವಿ, ಚಿತ್ರದುರ್ಗ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಫಲಾನುಭವಿಗಳ ಸಂಖ್ಯೆ ಕನಿಷ್ಠ 1 ಲಕ್ಷ ದಾಟಿದೆ. ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಪಶ್ಚಿಮದಲ್ಲಿ 6 ಸಾವಿರ ಕೂಡ ದಾಟಿಲ್ಲ.
ಇಲಾಖೆಯ ಸೂಚನೆಯಂತೆ ಪಡಿತರ ಚೀಟಿದಾರರು ಕೆವೈಸಿ ಮಾಡಿಸುವಾಗಲೇ ಬಹುತೇಕ ಪ್ರಮಾಣಪತ್ರಗಳನ್ನು ಸಂಗ್ರಹಿಸಲಾಗಿದೆ. ಇಲಾಖೆ ಅಂಕಿ-ಅಂಶಗಳಿಗಾಗಿ ಉಳಿದಿರುವ ಪರಿಶಿಷ್ಟ ಫಲಾನುಭವಿಗಳ ವಿವರ ಕೇಳಲಾಗುತ್ತಿದೆ.
| ಮಂಟೇಸ್ವಾಮಿ, ಜಂಟಿ ನಿರ್ದೇಶಕ, ಆಹಾರ ಇಲಾಖೆ, ತುಮಕೂರು
ಎಸ್ಸಿಪಿ, ಟಿಎಸ್ಪಿ ಅನುದಾನ:ಗ್ಯಾರಂಟಿ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಹೊರೆ ಸರಿದೂಗಿಸಲು ಮೀಸಲಿಟ್ಟಿರುವ ಎಸ್​ಸಿಪಿ, ಟಿಎಸ್​ಪಿ ಅನುದಾನವನ್ನು ‘ಅನ್ನಭಾಗ್ಯ’ ಯೋಜನೆಗೆ ಬಳಸಿಕೊಳ್ಳಲು ಸರ್ಕಾರ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಇದರ ಭಾಗವಾಗಿಯೇ ಜಾತಿ ಪ್ರಮಾಣಪತ್ರ ಪಡೆಯಲಾಗುತ್ತಿದೆ.
ರೈತರ ಕೋಟಿಗಟ್ಟಲೆ ಹಣ ದುರ್ಬಳಕೆ: ಉಪಾಧ್ಯಕ್ಷನಿಂದಲೇ ದೂರು ದಾಖಲು; ಸಾರವಾಡ ಪಿಕೆಪಿಎಸ್‌ನಲ್ಲಿ ಭಾರಿ ಭ್ರಷ್ಟಾಚಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
