ಬೆಂಗಳೂರು:ಸರ್ವರ್ ಸಮಸ್ಯೆ ಪೊಲೀಸ್ ಇಲಾಖೆಗೆ ವಿಲನ್ ರೀತಿ ಕಾಡುತ್ತಿದ್ದು, ಸಂತ್ರಸ್ತರಿಗೆ ತ್ವರಿತ ಸೇವೆ ಒದಗಿಸಲು ಸಾಧ್ಯವಾಗದೆ ಪೊಲೀಸರು ಸಾರ್ವಜನಿಕರಿಂದ ನಿಂದನೆಗೊಳಗಾಗುವಂತಾಗಿದೆ.
ದೂರು ಸ್ವೀಕಾರ, ಎಫ್​ಐಆರ್ ದಾಖಲು, ಚಾರ್ಜ್​ಶೀಟ್ ಸಲ್ಲಿಕೆ ಸೇರಿ ಇಲಾಖೆಯ ಎಲ್ಲ ಸೇವೆಗಳು ಡಿಜಿಟಲೀಕರಣಗೊಂಡಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಎಫ್​ಐಆರ್ ದಾಖಲಿಸಿಕೊಳ್ಳಲು 4-5 ತಾಸು ವಿಳಂಬವಾಗುತ್ತಿದೆ. ಇದರಿಂದಾಗಿ ಪೊಲೀಸರು ಮತ್ತು ದೂರುದಾರರ ನಡುವೆ ವಾಗ್ವಾದವೂ ಸಾಮಾನ್ಯವಾಗಿದೆ.
ಸಾಮಾನ್ಯವಾಗಿ ಎಫ್​ಐಆರ್ ಅಥವಾ ಎನ್​ಸಿಆರ್ ದಾಖಲಿಸಿಕೊಳ್ಳಲು 15 ರಿಂದ 30 ನಿಮಿಷ ಸಾಕು. ಆದರೆ, ಇಲಾಖೆಯ ಆನ್​ಲೈನ್ ಸರ್ವರ್ ಡೌನ್ ಇರುವುದರಿಂದ ಒಂದು ಎಫ್​ಐಆರ್ ದಾಖಲಿಸಲು 4-5 ತಾಸು ತಗಲುತ್ತಿದೆ. ನಾಲ್ಕೈದು ತಿಂಗಳಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಸಂಜೆ ವೇಳೆ ಎಫ್​ಐಆರ್ ದಾಖಲಿಸಲು ಕ್ಯೂ ನಿಲ್ಲಬೇಕಿದೆ.
ಯಾವ ಠಾಣೆಗೆ ಎಷ್ಟು ಸ್ಪೀಡ್?: ಹೆಚ್ಚು ದೂರುಗಳು ಬರುವ ಠಾಣೆಗಳಿಗೆ 5 ಎಂಬಿಪಿಎಸ್ ಹಾಗೂ ಕಡಿಮೆ ದೂರು ದಾಖಲಾಗುವ ಠಾಣೆಗಳಿಗೆ 2 ಎಂಬಿಪಿಎಸ್ ಸರ್ವರ್ ಸ್ಪೀಡ್ ನೀಡಲಾಗಿದೆ. ಆನ್​ಲೈನ್ ಸೇವೆಗೆ ಅಳವಡಿಸಿರುವ ಸಾಫ್ಟ್​ವೇರ್ ಚೆನ್ನಾಗಿದೆ. ಡೇಟಾ ಸಂಗ್ರಹ ಸಾಮರ್ಥ್ಯ (ಡೇಟಾ ಸ್ಟೋರೇಜ್) ಅಪ್​ಡೇಟ್ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ ಎಂಬುದು ಠಾಣಾಧಿಕಾರಿಗಳ ಸಲಹೆ.
ಸಂಜೆ ಕೇಸ್​ಗಳೇ ಜಾಸ್ತಿ ಯಾಕೆ?: ಸಬ್​ಇನ್​ಸ್ಪೆಕ್ಟರ್ ಅಥವಾ ಇನ್​ಸ್ಪೆಕ್ಟರ್ ಅನುಮತಿ ಇಲ್ಲದೆ ಕೆಳಹಂತದ ಸಿಬ್ಬಂದಿ ಎಫ್​ಐಆರ್ ದಾಖಲಿಸಲು ಅನುಮತಿ ಇಲ್ಲ. ಬಹುತೇಕ ಠಾಣೆಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಬೆಳಗ್ಗೆ ಕೋರ್ಟ್, ಗಸ್ತು ಸೇರಿ ಇನ್ನಿತರ ಕಾನೂನು ಸುವ್ಯವಸ್ಥೆ ಕೆಲಸಗಳಲ್ಲಿ ತೊಡಗಿರುತ್ತಾರೆ. ಸಂಜೆ ಹೊತ್ತಿಗೆ ಕಚೇರಿಗೆ ಆಗಮಿಸಿ ದೂರು ಸ್ವೀಕರಿಸಿ ಪ್ರಕರಣ ದಾಖಲಿಸುವ ಪ್ರಕ್ರಿಯೆಗೆ ಮುಂದಾಗುತ್ತಾರೆ.
ಡೇಟಾ ಕ್ವಾಲಿಟಿ ಗ್ರೇಡ್: ಎಫ್​ಐಆರ್ ದಾಖಲಿಸುವಾಗ ಕಲಂಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕಾದ ಅಂಶಗಳನ್ನು ಕೊಟ್ಟರೆ ಸಾಕು. ಉದಾಹರಣೆಗೆ ಧರ್ಮ-ಹಿಂದು ಎಂದು ಬರೆದರೆ ಸಾಕು. ಜಾತಿ, ಉಪಜಾತಿಯ ಉಲ್ಲೇಖ ಅಗತ್ಯವಿಲ್ಲ. ಆದರೆ, ರಾಜ್ಯ ಅಪರಾಧ ದಾಖಲಾತಿ ವಿಭಾಗ (ಎಸ್​ಸಿಆರ್​ಬಿ) ಪ್ರತಿ ತಿಂಗಳು ಎಲ್ಲ ಠಾಣೆಗಳ ಎಫ್​ಐಆರ್ ದಾಖಲಾತಿ ಪ್ರಕ್ರಿಯೆಯನ್ನು ಪರಿಶೀಲಿಸಿ ಡೇಟಾ ಕ್ವಾಲಿಟಿ ಗ್ರೇಡ್ ನೀಡುತ್ತದೆ. ಎಲ್ಲ ಮಾಹಿತಿ ಒಳಗೊಂಡ ಎಫ್​ಐಆರ್ ಅಪ್​ಲೋಡ್ ಮಾಡಿದ ಠಾಣೆಗೆ ಹೆಚ್ಚಿನ ಶ್ರೇಣಿ. ಹೀಗಾಗಿ ಎಫ್​ಐಆರ್ ನಮೂನೆಯಲ್ಲಿರುವ 14 ತರಹದ ಕಾಲಂಗಳಲ್ಲಿ 50ಕ್ಕೂ ಹೆಚ್ಚು ಉಪ ಕಾಲಂಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಿಂದಲೂ ಸರ್ವರ್ ಡೌನ್ ಆಗುತ್ತದೆ ಎಂದು ಸಿಬ್ಬಂದಿ ಹೇಳುತ್ತಾರೆ.
ಸರ್ವರ್ ಡೌನ್​ಗೆ ಕಾರಣ?
ಎಫ್​ಐಆರ್ ದಾಖಲಿಸುವುದು, ಎನ್​ಸಿಆರ್ ಸ್ವೀಕೃತಿ, ಹಳೇ ಕೇಸ್​ಗಳ ತನಿಖಾ ವಿವರ, ಆರೋಪಿಗಳ ಮಾಹಿತಿ, ಚಾರ್ಜ್ ಶೀಟ್ ಸಿದ್ಧಪಡಿಸುವುದು, ಸಾಕ್ಷಿಗಳ ಹೇಳಿಕೆ, ಆರೋಪಿಗಳ ಬಂಧನ ಕಾರ್ಯಾಚರಣೆ, ನ್ಯಾಯಾಲಯದ ಮಾಹಿತಿ ಸೇರಿ ಎಲ್ಲ ಮಾಹಿತಿಯನ್ನೂ ಆನ್​ಲೈನ್​ನಲ್ಲೇ ನಮೂದಿಸಬೇಕು. ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಇಲಾಖೆಯ ವೆಬ್​ಸೈಟ್ ಬಳಸುವುದರಿಂದ ಸರ್ವರ್ ಬಿಜಿಯಾಗಿರುತ್ತದೆ. ಎಫ್​ಐಆರ್ ದಾಖಲಿಸಲೆಂದೇ ಪ್ರತ್ಯೇಕ ವಿಭಾಗವಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಸಿಬ್ಬಂದಿ ಅಭಿಪ್ರಾಯ.
ಡೈರಿ ಬರೆವ ಪದ್ಧತಿಯೂ ಬದಲು
ಯಾವುದೇ ರೀತಿಯ ಎಫ್​ಐಆರ್ ದಾಖಲಿಸುವ ಮೊದಲು ಪ್ರಕರಣದ ಪೂರ್ತಿ ವಿವರವನ್ನು ಜನರಲ್ ಡೈರಿಯಲ್ಲಿ ಬರೆಯಬೇಕು. ಡೈರಿಯಲ್ಲಿ ಉಲ್ಲೇಖವಾಗಿರುವ ಅಂಶಕ್ಕೂ ಹಾಗೂ ಎಫ್​ಐಆರ್​ನಲ್ಲಿರುವ ಅಂಶಗಳಿಗೂ ವ್ಯತ್ಯಾಸವಾಗಬಾರದು. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಆನ್​ಲೈನ್​ನಲ್ಲಿ ಎಫ್​ಐಆರ್ ದಾಖಲಿಸಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ ಡೈರಿ ಬರೆಯುವ ಪದ್ಧತಿ ಬದಲಿಸಲಾಗಿದೆ. ಆನ್​ಲೈನ್​ನಲ್ಲಿ ಎಫ್​ಐಆರ್ ದಾಖಲಾದ ಬಳಿಕವಷ್ಟೇ ಜನರಲ್ ಡೈರಿ ಬರೆಯಲಾಗುತ್ತಿದೆ.

ಯಂಕಣ್ಣ ಸಾಗರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 1 =
Remember me
