| ವಿಲಾಸ ಮೇಲಗಿರಿ ಬೆಂಗಳೂರುಗ್ರಾಮ ಪಂಚಾಯಿತಿಗಳಲ್ಲಿ ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಬಹುತೇಕ ಸೌಲಭ್ಯಗಳಿಂದ ವಂಚಿತರಾದ ಸಿಬ್ಬಂದಿಗೆ ಸರ್ಕಾರ ಬಹು ದೊಡ್ಡ ಕೊಡುಗೆ ಕೊಟ್ಟಿದೆ. ಕನಿಷ್ಠ ವಿದ್ಯಾರ್ಹತೆ ಇಲ್ಲದ ಕಾರಣಕ್ಕೆ ಕೊಟ್ಟಷ್ಟು ಸಂಬಳಕ್ಕೆ ದುಡಿಯುತ್ತಿದ್ದ ಸಹಸ್ರಾರು ಸಿಬ್ಬಂದಿಗೆ ಜೀವನ ಭದ್ರತೆ ಕಲ್ಪಿಸುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದೆ.
2017ಕ್ಕೆ ಮುಂಚಿತವಾಗಿ ನೇಮಕಗೊಂಡು ಗ್ರಾಮ ಪಂಚಾಯಿತಿಗಳಲ್ಲಿ ಜವಾನ, ನೀರಗಂಟಿ, ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿದ್ದವರಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಲಾಗುತ್ತದೆ. ಇದರಿಂದಾಗಿ 11,543 ಸಿಬ್ಬಂದಿಗೆ ಸೇವಾ ಭದ್ರತೆಯ ಭಾವನೆ ಬಲವರ್ಧನೆಗೊಳ್ಳಲಿದೆ.
ಗ್ರಾಮೀಣ ಪ್ರದೇಶದಲ್ಲಿ ಕಸ-ಕಡ್ಡಿ ಎತ್ತಿ ನೈರ್ಮಲ್ಯ ಕಾಪಾಡುವುದು, ಕಚೇರಿಯಲ್ಲಿ ಜವಾನರಾಗಿ ದುಡಿಯುವುದು, ಕಾಲಕಾಲಕ್ಕೆ ನೀರು ಬಿಟ್ಟು ಜನರ ಬಾಯಾರಿಕೆ ತಣಿಸುವ ವೃತ್ತಿ ಕೈಗೊಂಡಿದ್ದ ಈ ಸಿಬ್ಬಂದಿಗೆ ಇನ್ನು ಮುಂದೆ ಸರ್ಕಾರದಿಂದಲೇ ನೇರವಾಗಿ ವೇತನ ಮತ್ತಿತರ ಸೌಲಭ್ಯಗಳು ದೊರೆಯಲಿವೆ. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 2017ಕ್ಕೂ ಮೊದಲು ಕರವಸೂಲಿ ಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್, ವಾಟರ್ ಅಪರೇಟರ್, ಸ್ವಚ್ಛತಾಗಾರರು, ಅಟೆಂಡರ್ ಸೇರಿದಂತೆ ಒಟ್ಟು 18,672 ಸಿಬ್ಬಂದಿ ನೇಮಕ ಗೊಂಡು ನಾನಾ ಕಾರಣಗಳಿಗಾಗಿ ಅನುಮೋದನೆ ಸಿಕ್ಕಿರಲಿಲ್ಲ. ಈ ಪೈಕಿ ಒಟ್ಟು 11,543 ಸಿಬ್ಬಂದಿ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲ ಎಂಬ ಕಾರಣ ನೀಡಲಾಗಿತ್ತು.
ಹೀಗಾಗಿ ಇವರಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರೆಯುತ್ತಿರಲಿಲ್ಲ. ಕನಿಷ್ಠ ವೇತನ ಜಾರಿಗೊಳಿಸುವವರೆಗೆ ಬಿಡಿಗಾಸಿನ ಸಂಬಳಕ್ಕೆ ಈ ಸಿಬ್ಬಂದಿ ದುಡಿಯುತ್ತಿದ್ದರು. ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲಗಳಿಂದ ಈ ಸಿಬ್ಬಂದಿಗೆ ವೇತನ ಪಾವತಿಸಬೇಕಾಗಿದ್ದರಿಂದ ಚುನಾಯಿತ ಪ್ರತಿನಿಧಿಗಳ ದಾಕ್ಷಿಣ್ಯಕ್ಕೆ ಈ ಸಿಬ್ಬಂದಿ ಸಿಲುಕಬೇಕಿತ್ತು. ಅಲ್ಲದೆ, ಗ್ರಾಪಂಗಳಲ್ಲಿ ಸಂಪನ್ಮೂಲ ಸಂಗ್ರಹವಾಗದ ಕಾರಣ ವೇತನಕ್ಕಾಗಿ ಪಟ್ಟು ಹಿಡಿಯುವ ಸ್ಥಿತಿಯೂ ಇವರಿಗಿರಲಿಲ್ಲ. ಸ್ಥಳೀಯರ ಮುಲಾಜಿಗೆ ಬಿದ್ದು ಅನಿವಾರ್ಯವಾಗಿ ಕೆಲಸ ಮಾಡಬೇಕಿತ್ತು.
ರಾಜಕೀಯ ಹಸ್ತಕ್ಷೇಪದಿಂದ ಮುಕ್ತಿ:ಸಂಬಳ ಪಾವತಿ, ನಿವೃತ್ತಿ ಸೌಲಭ್ಯ, ಅನುಕಂಪದ ಹುದ್ದೆ ಮತ್ತಿತರ ವಿಚಾರಗಳಲ್ಲಿ ಹೊಸ ಆದೇಶದಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ತುಸು ನೆಮ್ಮದಿ ಸಿಗಲಿದೆ. ಸ್ಥಳೀಯ ರಾಜಕೀಯ ಹಸ್ತಕ್ಷೇಪಕ್ಕೆ ಹೆಚ್ಚು ಅವಕಾಶ ಇಲ್ಲದೇ ಇರುವುದರಿಂದ ಕರ್ತವ್ಯ ನಿರ್ವಹಣೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತು ಸಿಗಲಿದೆ.
ಉಳಿದವರಿಗೂ ಅನ್ವಯಿಸಲಿ:2017ರಿಂದ ಈಚೆಗೆ ನೇಮಕಗೊಂಡಿರುವ ಅಂದಾಜು 3 ಸಾವಿರ ಸಿಬ್ಬಂದಿ ಇನ್ನೂ ಜಿಲ್ಲಾ ಪಂಚಾಯಿತಿಗಳಿಂದ ಅನುಮೋದನೆ ಪಡೆಯದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಯನ್ನೂ ಹೊಸ ಆದೇಶದ ವ್ಯಾಪ್ತಿಗೆ ಸೇರಿಸಬೇಕು ಎಂಬ ಆಗ್ರಹ ಕೂಡ ಸರ್ಕಾರದ ಮುಂದಿದೆ.
ಸರ್ಕಾರದ ನಿರ್ಣಯದಿಂದ ನಮ್ಮ ಜೀವನಕ್ಕೆ ಭದ್ರತೆ ಸಿಕ್ಕಂತಾಗಿದೆ. ಸರ್ಕಾರದಿಂದ ನಿಶ್ಚಿತ ಮತ್ತು ನಿಗದಿತ ಸಮಯಕ್ಕೆ ವೇತನ ಪಾವತಿಯಾಗುತ್ತದೆ. ಎಲ್ಲಕ್ಕೂ ಮಿಗಿಲು ಸರ್ಕಾರದ ಇತರ ಸವಲತ್ತುಗಳು ನಮಗೆ ದೊರೆಯುತ್ತವೆ.
| ಹಡಗಲಿ ರವೀಂದ್ರ ನೀರಗಂಟಿ, ದಾಸನಹಳ್ಳಿ, ಹೂವಿನ ಹಡಗಲಿ ತಾಲೂಕು
10-20 ತಿಂಗಳು ವೇತನ ಬಾಕಿ!:ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲದಿಂದ ವರ್ಗ 1ರ ಅಡಿ ತನ್ನ ಸಿಬ್ಬಂದಿಗೆ ವೇತನ ಪಾವತಿ ಮಾಡಬೇಕಿತ್ತು. ಅನೇಕ ಕಡೆ ಸಂಪನ್ಮೂಲ ಕೊರತೆ ಮತ್ತಿತರ ಕಾರಣಗಳಿಂದ 10-20 ತಿಂಗಳಾದರೂ ಸಂಬಳ ಪಾವತಿಯಾಗುತ್ತಿರಲಿಲ್ಲ. ಇದು ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಈ ಸಮಸ್ಯೆ ವಿಧಾನ ಮಂಡಲದ ಅಧಿವೇಶನದಲ್ಲೂ ಅನೇಕ ಬಾರಿ ಚರ್ಚೆಯಾಗಿತ್ತು. ಈ ಸಮಸ್ಯೆಗೆ ಸರ್ಕಾರ ಒಂದು ಬಾರಿ ಶಾಶ್ವತ ಪರಿಹಾರ ನೀಡಿದೆ.

ಶೋಷಣೆಗೆ ಬ್ರೇಕ್:ವಿದ್ಯಾರ್ಹತೆ ಇಲ್ಲದ ಸಿಬ್ಬಂದಿಯನ್ನು ಕನಿಷ್ಠವಾಗಿ ನೋಡಲಾಗುತ್ತಿತ್ತು. ಭಯದಲ್ಲೇ ಕೆಲಸ ಮಾಡುವ ವಾತಾವರಣವನ್ನು ಸೃಷ್ಟಿಸಲಾಗಿತ್ತು. ಚುನಾಯಿತ ಪ್ರತಿನಿಧಿಗಳು ಹೇಳಿದ ಕೆಲಸ ಮಾಡಿಕೊಂಡು ತೆಪ್ಪಗಿರಬೇಕಿತ್ತು. ಈಗ ಸರ್ಕಾರ ಈ ಸಿಬ್ಬಂದಿಯ ಆಸರೆಗೆ ಬಂದಿದೆ. 2017ರಿಂದಲೇ ಕನಿಷ್ಠ ವೇತನ ನಿಗದಿಪಡಿಸಿದರೂ ಅನೇಕ ಕಡೆಗಳಲ್ಲಿ ಈ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಸಿಬ್ಬಂದಿಯನ್ನು ಶೋಷಣೆ ಮಾಡಲಾಗುತ್ತಿತ್ತು. ಮೂರು ಸಾವಿರ, ಐದು ಸಾವಿರ ರೂ. ಸಂಬಳ ನೀಡುತ್ತಿದ್ದುದು ಉಂಟು. ಈಗ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.
ನಮ್ಮದು ಆಳುವ ಸರ್ಕಾರ ಅಲ್ಲ, ಆಲಿಸುವ ಸರ್ಕಾರ ಎಂದು ನಾವು ಮುಂಚಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ವಿವಿಧ ಸಂಘಟನೆಗಳ ಜತೆ ನಿರಂತರವಾಗಿ ರ್ಚಚಿಸುತ್ತಿದ್ದೇವೆ. ನೌಕರರ ಬೇಡಿಕೆಗೆ ಅದರಲ್ಲೂ ಆರ್ಥಿಕ ಹೊರೆಯಾಗದ ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಜಾರಿಗೊಳಿಸುತ್ತಿದ್ದೇವೆ. ಆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಬಹು ವರ್ಷಗಳ ಸಮಸ್ಯೆಗೆ ಪರಿಹಾರ ನೀಡಿದ್ದೇವೆ.
| ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ಆದೇಶದಲ್ಲೇನಿದೆ?:ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಜಿಪಂ ಅನುಮೋದನೆಯಾಗದೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ವಿದ್ಯಾರ್ಹತೆ ಹೊರತುಪಡಿಸಿ,ಅದರಲ್ಲೂ ಜವಾನ, ಸ್ವಚ್ಛತಾಗಾರರು, ನೀರುಗಂಟಿಗಳಿಗೆ ವಿದ್ಯಾರ್ಹತೆ ಕೈಬಿಟ್ಟು ವೇತನ ಪಾವತಿ, ಹಾಜರಾತಿ ಆಧಾರದಲ್ಲಿ ಒಂದು ಬಾರಿಗೆ ಘಟನೋತ್ತರ ಅನುಮೋದನೆ ನೀಡುವಂತೆ ಪಂಚಾಯತ್ ರಾಜ್ ಆಯುಕ್ತಾಲಯ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ದೀಪಾವಳಿಗೆ ಗಂಡ ತವರು ಮನೆಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಜಗಳ ಆಡುತ್ತ ಪ್ರಾಣ ಕಳ್ಕೊಂಡ್ಲು ಗರ್ಭಿಣಿ ಪತ್ನಿ!

ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − five =
Remember me
