ಬೆಂಗಳೂರು:ನಗರದ ಕಸ್ತೂರ ಬಾ ರಸ್ತೆಯಲ್ಲಿ ಆರಂಭಿಸಲಾಗಿದ್ದ ಸ್ಮಾರ್ಟ್ ಪಾರ್ಕಿಂಗ್ ಉದ್ಘಾಟನೆಗೊಂಡು ಎರಡೂವರೆ ತಿಂಗಳಾದರೂ ಕಾರ್ಯರಂಭವಾಗಿಲ್ಲ. ಹೀಗಾಗಿ ಪಾಲಿಕೆಯ ಪ್ರಮುಖ ಯೋಜನೆಯೊಂದಕ್ಕೆ ಹಿನ್ನಡೆಯಾದಂತಾಗಿದೆ.
ನಗರದ 85 ಕಡೆಗಳಲ್ಲಿ ಸ್ಮಾರ್ಟ್ ರ್ಪಾಂಗ್ ವ್ಯವಸ್ಥೆ ಮಾಡುವ ಮೂಲಕ ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕಲು ಪಾಲಿಕೆ ಯೋಜನೆ ರೂಪಿಸಿತ್ತು. ಅದರ ಮೊದಲ ಭಾಗವಾಗಿ ಡಿ.15 ರಂದು ಕಸ್ತೂರಬಾ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್​ಗೆ ಮೇಯರ್ ಗೌತಮ್ುಮಾರ್ ಚಾಲನೆ ನೀಡಿದ್ದರು. ಡಿ.16ರಿಂದ ಜ.15ರವರೆಗೆ ಪ್ರಾಯೋಗಿಕ ಪಾರ್ಕಿಂಗ್ ವ್ಯವಸ್ಥೆ ಮಾಡುವ ಮೂಲಕ ಉಚಿತ ಕಾರ್ ರ್ಪಾಂಗ್ ಸೌಲಭ್ಯ ಕಲ್ಪಿಸಲಾಗಿತ್ತು. ಜ.16ರಿಂದ ವಾಹನ ನಿಲುಗಡೆ ಮಾಡುವವರಿಂದ ಶುಲ್ಕ ಪಾವತಿಸಿಕೊಳ್ಳಲು ತೀರ್ವನಿಸಿತ್ತು. ಆದರೆ, ಪ್ರಾಯೋಗಿಕ ಅವಧಿ ಮುಕ್ತಾಯವಾಗಿ ಒಂದೂವರೆ ತಿಂಗಳಾದರೂ ಶುಲ್ಕ ಪಾವತಿಯ ಪಾರ್ಕಿಂಗ್ ವ್ಯವಸ್ಥೆ ಆರಂಭವಾಗಿಲ್ಲ.
ನಿರೀಕ್ಷೆ ಹುಸಿಗೊಳಿಸಿದ ಪಾರ್ಕಿಂಗ್:ಪಾಲಿಕೆ ಬಹುತೇಕ ಯೋಜನೆಗಳು ಆರಂಭದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸುತ್ತವೆ. ಆದರೆ, ಯೋಜನೆಯ ಕಾಮಗಾರಿ ಆರಂಭ ಹಾಗೂ ನಂತರದ ಕಾರ್ಯನಿರ್ವಹಣೆಯಲ್ಲಿ ವಿಫಲವಾಗುವ ಮೂಲಕ ಯೋಜನೆಗಳಿಗೆ ಜನರು ಇಟ್ಟುಕೊಂಡಿದ್ದ ನಿರೀಕ್ಷೆಯನ್ನು ಹುಸಿ ಮಾಡುತ್ತದೆ. ಕಸದ ಸಮಸ್ಯೆ, ಬಹುಮಹಡಿ ಕಾರ್ ರ್ಪಾಂಗ್, ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ, ಜರ್ಮನ್ ಡಸ್ಟ್​ಬಿನ್ (ಅಂತರ್ಗತ ಕಸದ ತೊಟ್ಟಿ) ಅಳವಡಿಕೆ ಸೇರಿ ಅನೇಕ ಉದಾಹರಣೆಗಳು ಸಿಗುತ್ತವೆ. ಅದೇ ಸಾಲಿಗೆ ಈಗ ಸ್ಮಾರ್ಟ್ ಪಾರ್ಕಿಂಗ್ ಕೂಡ ಸೇರ್ಪಡೆಯಾಗಿದ್ದು, ಆರಂಭದಲ್ಲಿದ್ದ ನಿರೀಕ್ಷೆ, ಆಡಳಿತಗಾರರು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಹುಸಿಯಾಗಿದೆ.
ಶುಲ್ಕ ಸಂಗ್ರಹವಾಗದೆ ನಷ್ಟ
ಕಸ್ತೂರಬಾ ರಸ್ತೆಯಲ್ಲಿ ನಿರ್ವಿುಸಲಾಗಿರುವ ಪ್ರೀಮಿಯಂ ಮಾದರಿಯ ಸ್ಮಾರ್ಟ್ ಪಾರ್ಕಿಂಗ್ನಲ್ಲಿ ಒಟ್ಟು 200 ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ವಾಹನ ನಿಲ್ಲಿಸಿದ ಮಾಲೀಕರು ಪ್ರತಿ ಗಂಟೆಗೆ 30 ರೂ. ರ್ಪಾಂಗ್ ಶುಲ್ಕ ಪಾವತಿಸಬೇಕು. ದಿನದಲ್ಲಿ ಕನಿಷ್ಠ 12 ಗಂಟೆ 200 ಕಾರುಗಳಿಗೆ ರ್ಪಾಂಗ್ ವ್ಯವಸ್ಥೆ ಕಲ್ಪಿಸಿದರೂ 72 ಸಾವಿರ ರೂ. ಸಂಗ್ರಹವಾಗುತ್ತದೆ. ಪ್ರಾಯೋಗಿಕ ಅವಧಿ ಮುಕ್ತಾಯಗೊಂಡ ಕೂಡಲೇ, ರ್ಪಾಂಗ್ ಶುಲ್ಕ ಆರಂಭಿಸಿದ್ದರೆ (ಫೆ.29ರವರೆಗೆ) 45 ದಿನಗಳಲ್ಲಿ 30 ಲಕ್ಷ ರೂ. ಶುಲ್ಕ ಸಂಗ್ರಹಣೆಯಾಗುತ್ತಿತ್ತು. ಆದರೆ ರ್ಪಾಂಗ್ ಆರಂಭಿಸದ ಕಾರಣ ಶುಲ್ಕದ ಹಣವೂ ನಷ್ಟವಾಗಿದೆ.
ಸ್ಮಾರ್ಟ್ ಪಾರ್ಕಿಂಗ್​ ಆಪ್
ನಮ್ಮ ಬೆಂಗಳೂರು ರ್ಪಾಂಗ್ ಅಪ್ಲಿಕೇಷನ್ ಅನ್ನು 2019ರ ಡಿ.10ರಂದು ಅಭಿವೃದ್ಧಿಪಡಿಸಲಾಗಿದೆ. ಅದನ್ನು ಫೆ.20 ರಂದು ಅಪ್​ಡೇಟ್ ಮಾಡಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಜನರು ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಕನ್ನಡ, ಇಂಗ್ಲಿಷ್​ನಲ್ಲಿ ರ್ಪಾಂಗ್ ಬಗ್ಗೆ ಮಾಹಿತಿ ನೀಡುವ ಆಪ್ ಸರಳವಾಗಿದೆ. ಆದರೆ, ರ್ಪಾಂಗ್ ವ್ಯವಸ್ಥೆಯೇ ಆರಂಭವಾಗಿಲ್ಲ. ನಿಯಮಗಳನ್ನು ಇಂಗ್ಲಿಷ್​ನಲ್ಲಿ ಮಾತ್ರ ಅಳವಡಿಕೆ ಮಾಡಲಾಗಿದ್ದು, ಇಂಗ್ಲಿಷ್ ಬಾರದವರಿಗೆ ತೊಂದರೆಯಾಗಿದೆ.
ಬೇಕಾಬಿಟ್ಟಿಯಾಗಿ ನಿಲ್ಲುವ ವಾಹನ
ಕಸ್ತೂರಬಾ ರಸ್ತೆಯಲ್ಲಿ 200 ಕಾರುಗಳನ್ನು ನಿಲ್ಲಿಸಲು ಸ್ಟ್ಯಾಂಡರ್ಡ್ ರ್ಪಾಂಗ್ ವ್ಯವಸ್ಥೆ ರೂಪಿಸಲಾಗಿದೆ. ಪ್ರಾಯೋಗಿಕ ಅವಧಿಯಲ್ಲಿ ಪ್ರತಿದಿನ 80 ರಿಂದ 140 ಕಾರುಗಳು ನಿಲ್ಲುತ್ತಿದ್ದವು. ಈ ವೇಳೆ ಕೆಲವರಿಂದ ಹಣ ಪಾವತಿಸಿಕೊಂಡು ಅವರಿಗೆ ಮರಳಿ ನೀಡಲಾಗುತ್ತಿತ್ತು. ಆದರೆ, ಪ್ರಾಯೋಗಿಕ ಅವಧಿ ಮುಕ್ತಾಯದ ನಂತರ ಪಾವತಿ ವ್ಯವಸ್ಥೆಯಿರದೆ ಬೇಕಾಬಿಟ್ಟಿಯಾಗಿ ವಾಹನಗಳು ನಿಲುಗಡೆ ಮಾಡಲಾಗುತ್ತಿದೆ. ಈಗ ಆಟೋಗಳು, ಕಾರುಗಳು, ಬೈಕ್​ಗಳು ಹಾಗೂ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಕೆಲವು ವಾಹನಗಳನ್ನು ಪೊಲೀಸರು ಟೋಯಿಂಗ್ ಮಾಡುತ್ತಾರೆ. ಇತರ ವಾಹನಗಳಿಗೆ ಯಾವುದೇ ಅಡೆತಡೆಗಳಿಲ್ಲದಂತಾಗಿದೆ.
ವಾರ್ಷಿಕ 31 ಕೋಟಿ ರೂ. ಗುರಿ
ನಗರದಲ್ಲಿ ಪ್ರೀಮಿಯಂ, ಸ್ಟಾಂಡರ್ಡ್ ಹಾಗೂ ಸಣ್ಣ ರಸ್ತೆಗಳನ್ನು ಒಳಗೊಂಡಂತೆ 85 ಕಡೆಗಳಲ್ಲಿ ಸೆಂಟ್ರಲ್ ರ್ಪಾಂಗ್ ಸರ್ವಿಸ್ ಗುತ್ತಿಗೆ ಸಂಸ್ಥೆಯಿಂದ ಸ್ಮಾರ್ಟ್ ರ್ಪಾಂಗ್ ಆರಂಭಿಸಲಾಗುತ್ತಿದೆ. ಅದಕ್ಕೆ ಅಗತ್ಯವಾಗಿ ಬೇಕಾದ ಮೂಲಸೌಕರ್ಯ ಅಳವಡಿಕೆ ಮಾಡಬೇಕು. ಪಾಲಿಕೆಗೆ ವರ್ಷಕ್ಕೆ 31 ಕೋಟಿ ರೂ. ನಂತೆ ಮುಂದಿನ 10 ವರ್ಷಕ್ಕೆ ಬಿಬಿಎಂಪಿಗೆ ಸುಮಾರು 315 ಕೋಟಿ ಆದಾಯ ಬರಲಿದೆ.
| ಸತೀಶ್ ಕೆ.ಬಳ್ಳಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
