ವಿಜಯವಾಣಿ ಸುದ್ದಿಜಾಲ ವಿಜಯಪುರಸತತ ಏಳು ಬಾರಿ ಗೆದ್ದು ದಾಖಲೆ ಬರೆದರೂ ಮಂತ್ರಿ ಸ್ಥಾನ ಸಿಗದ ಕಾರಣಕ್ಕೆ ದಲಿತ ಸಮುದಾಯದ ಜನ ‘ಥೂ-ಹಳಿ’ ಎಂದು ಉಗಿಯುತ್ತಿದ್ದಾರೆಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ:ಪ್ರೀತಿಗೆ ಪೋಷಕರ ವಿರೋಧ; ಜೀವ ಉಳಿಸಿಕೊಳ್ಳಲು ಎಸ್‍ಪಿ ಕಚೇರಿಗೆ ಓಡಿದ ಪ್ರೇಮಿಗಳು! ವಿಡಿಯೋ ನೋಡಿ
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಇರುವ ಹಳೆಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜನ ಸಂಪರ್ಕ ಕಾರ್ಯಾಲಯ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದಕ್ಷಿಣ ಭಾರತದಲ್ಲಿಯೇ ಹೆಚ್ಚು ಬಾರಿ ಗೆದ್ದು ಹಿರಿಯ ದಲಿತ ನಾಯಕ ಎನ್ನಿಸಿಕೊಂಡವ ನಾನೊಬ್ಬನೇ. ದಲಿತ ಕೋಟಾದಡಿ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ದಲಿತ ಸಮುದಾಯದ ಜನ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ನಾನು ಮಾತ್ರ ಮಂತ್ರಿಗಿರಿ ಮೇಲೆ ಆಸೆ ಇಟ್ಟಿರಲಿಲ್ಲ. ಆದರೆ, ಬಿಜೆಪಿ ಮೊದಲಿನಿಂದಲೂ ದಲಿತ ವಿರೋಧಿ ಎಂಬ ಹಣೆ ಪಟ್ಟಿ ಹೊತ್ತಿದ್ದು, ಅಲ್ಲಿ ಮಂತ್ರಿಗಿರಿ ಸಿಗಲ್ಲ ಎಂದು ದಲಿತ ಸಮುದಾಯದ ಜನ ಆಡಿಕೊಳ್ಳುತ್ತಿದ್ದರು. ಆ ಹಣೆಪಟ್ಟಿ ಕಳಚಲಾದರೂ ಮಂತ್ರಿಗಿರಿ ಸಿಗಲಿದೆ ಎಂಬ ಲೆಕ್ಕಾಚಾರವಿತ್ತು. ಆ ವಿಷಯದಲ್ಲಿ ಮಾತ್ರ ನನ್ನೂ ಸ್ವಲ್ಪ ಅಸಮಾಧಾನ ಇದೆ ಎಂದರು.
ದಲಿತರ ಹಣ ದುರ್ಬಳಕೆ:ಇನ್ನು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ದುರುಪಯೋಗ ಪಡಿಸಿಕೊಂಡಿದೆ. ಪರಿಶಿಷ್ಟ ಜಾತಿಯ ಸುಮಾರು 32 ಕೋಟಿ ಹಾಗೂ ಪರಿಶಿಷ್ಟ ಪಂಗಡದ ಸುಮಾರು 14 ಕೋಟಿ ಅನುದಾನ ದುರ್ಬಳಕೆಯಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಯಾರೂ ಈ ಹಣ ಮುಟ್ಟಿರಲಿಲ್ಲ. ಕೇವಲ ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಡಲಾಗುತ್ತಿತ್ತು. ನನಗೂ ಸುಮಾರು ಐದು ಕೋಟಿ ಮೀಸಲಿರುತ್ತಿತ್ತು. ಈ ಬಾರಿ ಒಂದೇ ಒಂದು ಪೈಸೆ ನನಗೆ ಬಂದಿಲ್ಲ. ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೈಗೊಂಡ ನಿರ್ಣಯವನ್ನು ಖಂಡಿಸುವೆ ಎಂದರು.
ಜೆ.ಎಚ್. ಪಟೇಲರು ಬೈಯ್ದು ಸುಮ್ಮನಿರಿಸಿದ್ದರು:ಕೇವಲ ದಲಿತರ ಅನುದಾನಕ್ಕೆ ಕೈ ಹಾಕಿದ್ದು ಏಕೆ? ಬೇರೆ ಬೇರೆ ಇಲಾಖೆಯಿಂದ ಸಾಕಷ್ಟು ಹಣ ಇತ್ತು ಅದನ್ನೇಕೆ ಮುಟ್ಟಲಿಲ್ಲ? ನಮ್ಮ ಮಹಾದೇವಪ್ಪ ಅವರೇ ಮಂತ್ರಿ ಇದ್ದು, ಅವನೂ ಪ್ರತಿಭಟನೆ ಮಾಡಬೇಕು. ಈ ಹಿಂದೆ ನಾನು ಇಂಥದ್ದೇ ಸನ್ನಿವೇಶದಲ್ಲಿ ರಾಜೀನಾಮೆ ಕೊಟ್ಟು ಹೊರ ನಡೆದಾಗ ಜೆ.ಎಚ್. ಪಟೇಲರು ಬೈಯ್ದು ಸುಮ್ಮನಿರಿಸಿದ್ದರು. ಹಠ ಮಾಡಲಿಲ್ಲವೆಂದರೆ ಯಾವುದೂ ಸಿಗಲ್ಲ. ನಾಳೆ ಮೀಸಲಾತಿ ವಿಚಾರ ಬಂದಾಗ ನಾವು ಸುಮ್ಮನಿದ್ದರೆ ಮೀಸಲಾತಿ ತೆಗೆಯುತ್ತಾರೆ ಬಿಜೆಪಿಯವರು ಎಂದು ಬಿಂಬಿಸುತ್ತಾರಲ್ಲವಾ? ಹೀಗಾಗಿ ಎಲ್ಲರೂ ಧ್ವನಿ ಎತ್ತಬೇಕು ಎಂದು ಹೇಳಿದರು.
ನಮ್ಮ ಸಮುದಾಯ ಅತ್ಯಂತ ಹಿಂದುಳಿದಿರುವಂಥದ್ದು. ಪ್ರತಿಭಟನೆ ಮಾಡುವ ಸ್ಥಿತಿಯಲ್ಲಿ ದಲಿತರಲಿಲ್ಲ. ಅವರು ಬಡವರು. ಪ್ರತಿಭಟನೆಗೆ ಕರೆದರೆ ನಾವೇ ಕೈಯಿಂದ ಹಣ ಕೊಡಬೇಕಾಗುತ್ತದೆ. ನಾವು ಎಲ್ಲಿಂದ ತರೋದು? ಬೇರೆಯವರ ಜೇಬಿಗೆ ಕೈ ಹಾಕೋದಾ? ಖರ್ಗೆ ಅಂಥವರಿಗೆ ಏನಾಗಿದೆ ದಾಡಿ? ಮಾಡಲಿ ಎಂದು ಪ್ರಶ್ನೆಯೊಂದಕ್ಕೆ ಜಿಗಜಿಣಗಿ ಪ್ರತಿಕ್ರಿಯಿಸಿದರು.
ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್: ಸೂರಜ್ ರೇವಣ್ಣ ಜಾಮೀನು ಅರ್ಜಿ ವಜಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − four =
Remember me
