ಬೆಂಗಳೂರು:ಸರ್ಕಾರಿ ನೌಕರರು, ನಿವೃತ್ತ ನೌಕರರು ಬಹುಕಾತರದಿಂದ ನಿರೀಕ್ಷಿಸುತ್ತಿದ್ದ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿದ್ದು, 2023ರ ಫೆಬ್ರವರಿಯಲ್ಲಿ ಆಯೋಗ ಮಧ್ಯಂತರ ವರದಿ ಸಲ್ಲಿಸುವ ನಿರೀಕ್ಷೆ ಇದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಅಂಶ ಮಧ್ಯಂತರ ವರದಿಯಲ್ಲಿ ಪ್ರಸ್ತಾಪವಾಗಲಿದ್ದು, ಫೆಬ್ರವರಿಯಲ್ಲಿ ಮಂಡಿಸಲಿರುವ 2023-24ನೇ ಸಾಲಿನ ಬಜೆಟ್​ನಲ್ಲಿ ಪರಿಗಣಿಸುವ ಸಾಧ್ಯತೆಯಿದೆ.
ಸರ್ಕಾರದ ವೆಚ್ಚ ಹೆಚ್ಚಳದ ಆತಂಕ, ಕಳವಳದ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಮಹತ್ವದ ಘೋಷಣೆ ಮಾಡಿದ್ದು, ಸಹಜವಾಗಿ 6 ಲಕ್ಷ ಸರ್ಕಾರಿ ನೌಕರರು, 3.40 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಸಿಬ್ಬಂದಿ, 4 ಲಕ್ಷದಷ್ಟು ನಿವೃತ್ತ ನೌಕರರಿಗೆ ಖುಷಿ ತರಲಿದೆ. ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗ ರಚಿಸಿರುವುದಾಗಿ ಸಿಎಂ ದಾವಣಗೆರೆಯಲ್ಲಿ ಘೋಷಿಸಿದ್ದು, ಮುಂದಿನ ಪ್ರಕ್ರಿಯೆಯೂ ಕೆಲ ದಿನಗಳ ಲ್ಲಿಯೇ ಆರಂಭವಾಗಲಿದೆ.
6ನೇ ವೇತನ ಆಯೋಗದ ಅವಧಿ ಜುಲೈನಲ್ಲೇ ಮುಕ್ತಾಯವಾಗಿತ್ತು. ಹೊಸ ಆಯೋಗ ರಚನೆ ಮಾಡಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಡ ತಂದಿತ್ತು. ಈ ಬಾರಿ ಆಯೋಗದ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ವೇತನ ಆಯೋಗ ರಚಿಸುವುದಾಗಿ ಸಿಎಂ ಘೋಷಿಸಿದ್ದರು. 2022 ಜುಲೈನಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ನಮ್ಮ ಪ್ರಮುಖ ಬೇಡಿಕೆ ಎಂದು ನೌಕರರ ಸಂಘ ಹೇಳಿದೆ. ಸಂಘದ ಪದಾಧಿಕಾರಿಗಳು ಗುರುವಾರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ. ಇನ್ನು, ಆಯೋಗ ಕಾರ್ಯ ನಿರ್ವಹಿಸಲು ಸ್ಥಳದ ಹುಡುಕಾಟ ಕೂಡ ನಡೆದಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಖನಿಜ ಭವನ, ವಿವಿ ಟವರ್ ಅಥವಾ ಡ್ರಗ್ ಕಂಟ್ರೋಲರ್ ಕಚೇರಿಯಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ.
ಸರ್ಕಾರಕ್ಕೆ ದೊಡ್ಡ ಸವಾಲು:ಹಾಲಿ ಇರುವ ಮೂಲವೇತನಕ್ಕೆ ತುಟ್ಟಿಭತ್ಯೆ ಯನ್ನು ವಿಲೀನಗೊಳಿಸಿ ನಂತರ ನಿಗದಿಯಾಗುವ ಮೂಲವೇತನಕ್ಕೆ ಶೇ.40 ಫಿಟ್​ವೆುಂಟ್ ಸೌಲಭ್ಯ ಕಲ್ಪಿಸಬೇಕೆಂಬುದು ಸರ್ಕಾರಿ ನೌಕರರ ಸಂಘದ ಪ್ರಧಾನ ಬೇಡಿಕೆ. ಆದರೆ ಇದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗಲಿದೆ ಎಂಬ ಲೆಕ್ಕಾಚಾರವಿದೆ.
ಶೇ.40ರ ಹೆಚ್ಚಳ ಪರಿಗಣಿಸಿದರೆ ಮಾಸಿಕ ಒಂದು ಸಾವಿರ ಕೋಟಿ ರೂ. ಹೆಚ್ಚುವರಿ ಬೇಕಾಗುತ್ತದೆ. 2022ರ ಜುಲೈ 1ರಿಂದ ಕಾಲ್ಪನಿಕ ವೇತನ ಸೌಲಭ್ಯಗಳನ್ನು ಹಾಗೂ 2023ರಿಂದ ಆರ್ಥಿಕ ಸೌಲಭ್ಯ ಪಡೆಯಲು ಅವಕಾಶ ಕೊಡಬೇಕೆಂದು ಸಂಘ ಒತ್ತಾಯಿಸಿದೆ. ಇದೂ ಕೂಡ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂಬ ಅಂದಾಜಿದೆ. ಈ ಷರತ್ತಿಗೆ ಒಪ್ಪಿದರೆ ಅಂದಾಜು 12 ಸಾವಿರ ಕೋಟಿ ರೂ. ಬೇಕಾಗಲಿದೆ. ಇದನ್ನು ಮುಂದಿನ ಬಜೆಟ್​ನಲ್ಲಿ ಹೊಂದಿಸಿಕೊಳ್ಳಬೇಕಾಗುತ್ತದೆ.
ಹಿಂದಿನ ಚಿತ್ರಣ:ನ್ಯಾ.ಬಿ. ವೆಂಕಟಸ್ವಾಮಿ ನೇತೃತ್ವದ 3ನೇ ವೇತನ ಆಯೋಗ (1986-92), ನ್ಯಾ. ಕೆ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ 4ನೇ ವೇತನ ಆಯೋಗ (1992-98), ಹಣಕಾಸು ಇಲಾಖೆ ಕಾರ್ಯದರ್ಶಿ ಗೋಪಾಲ ರೆಡ್ಡಿ ನೇತೃತ್ವದ ಅಧಿಕಾರಿ ಸಮಿತಿ (1998-2006), 5ನೇ ವೇತನ ಆಯೋಗ ಎಂ.ಬಿ.ಪ್ರಕಾಶ್ (2005-2011), ಅಧಿಕಾರಿ ಸಮಿತಿ ಸುಬೀರ್ ಹರಿಸಿಂಗ್ (2011-2017), 6ನೇ ವೇತನ ಆಯೋಗ ಎಂ.ಆರ್.ಶ್ರೀನಿವಾಸಮೂರ್ತಿ (2017-22) ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ್ದವು.
ವೇತನ ಆಯೋಗ ರಚಿಸಿ ಸಿಎಂ ಬೊಮ್ಮಾಯಿ ನುಡಿದಂತೆ ನಡೆದಿದ್ದಾರೆ. ಈ ಕಾರ್ಯದಲ್ಲಿ ಸಹಕರಿಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ಮರಿಸುತ್ತೇವೆ.
|ಸಿ.ಎಸ್. ಷಡಾಕ್ಷರಿರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ
ಹೈಕೋರ್ಟ್ ಸಿಬ್ಬಂದಿಗೆ ಕೇಂದ್ರ ವೇತನ ಆಯೋಗದ ವೇತನ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಆಯೋಗವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಲು ಬೇಡಿಕೆಯಿಟ್ಟಿದ್ದೆವು. ಆದರೂ ಸರ್ಕಾರದ ಈಗಿನ ನಿರ್ಧಾರ ಸ್ವಾಗತಿಸುತ್ತೇವೆ.
|ಪಿ.ಗುರುಸ್ವಾಮಿಸಚಿವಾಲಯ ನೌಕರರ ಸಂಘದ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
