ಬೆಂಗಳೂರು: ಸಿಂಗಾಪುರದಿಂದ ಹೊಲಿಗೆ ಯಂತ್ರಗಳನ್ನು ಆಮದು ಮಾಡಿಕೊಳ್ಳಲು ಮುಂದಾದ ಕಂಪನಿಗೆ ಸೈಬರ್ ಕಳ್ಳರು 1.44 ಕೋಟಿ ರೂ. ವಂಚಿಸಿದ್ದಾರೆ. ರೆಸಿಡೆನ್ಸಿ ರಸ್ತೆಯ ಐಜಿಎಂ ಪ್ರೈ.ಲಿ. ಮುಖ್ಯಸ್ಥ ಪವನ್ ಕಪೂರ್ ಈ ಬಗ್ಗೆ ಸೆಂಟಲ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಯಮೊಟೊ ಎಂಬಾತನ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸಿಂಗಾಪುರದ ಕಂಪನಿಯಿಂದ ಹೊಲಿಗೆ ಯಂತ್ರಗಳನ್ನು ಆಮದು ಮಾಡಿಕೊಂಡು ಐಜಿಎಂ ಪ್ರೈ.ಲಿ. ವಹಿವಾಟು ನಡೆಸುತ್ತಿದೆ. ಕಳೆದ ನವೆಂಬರ್​ನಲ್ಲಿ 1.44 ಕೋಟಿ ರೂ. ಮೌಲ್ಯದ ವಸ್ತುಗಳ ಖರೀದಿ ಕುರಿತ ವ್ಯವಹಾರವನ್ನು ಸಿಂಗಾಪುರದ ಕಂಪನಿಯೊಂದಿಗೆ ನಡೆಸಿತ್ತು. ಕಳೆದ ಮೇ 29ರಂದು ಹಣ ವರ್ಗಾವಣೆ ಮಾಡುವಂತೆ ಸಿಂಗಾಪುರ ಕಂಪನಿ ಸೂಚನೆ ನೀಡಿತ್ತು. ಆದರೆ, ಅದರಲ್ಲಿ ಬ್ಯಾಂಕ್ ಖಾತೆ ಬದಲಾಗಿತ್ತು. ಆ ಬಗ್ಗೆ ಐಜಿಎಂ ಅಧಿಕಾರಿಗಳಿಗೆ ಅನುಮಾನ ಬಂದು, ಬ್ಯಾಂಕ್ ಖಾತೆ ಬದಲಾಗಿರುವ ಬಗ್ಗೆ ಲೆಟರ್ ಕೊಡುವಂತೆ ಸೂಚನೆ ನೀಡಿದ್ದರು. ಅದರಂತೆ ಸಿಂಗಾಪುರ ಕಂಪನಿ ಲೆಟರ್ ಸಹ ಕೊಟ್ಟಿದ್ದು, ಅದರಲ್ಲಿ ಉಲ್ಲೇಖಿಸಿರುವ ಬ್ಯಾಂಕ್ ಖಾತೆಗೆ 1.44 ಕೋಟಿ ರೂ. ಗಳನ್ನು ವರ್ಗಾವಣೆ ಮಾಡಿತ್ತು. ಆದರೆ, ಜೂ.20 ಕಳೆದರೂ ವಸ್ತುಗಳು ಕಂಪನಿಗೆ ಬಂದಿಲ್ಲ. ಅನುಮಾನ ಬಂದು ಸಿಂಗಾಪುರ ಕಂಪನಿಗೆ ಕರೆ ಮಾಡಿದಾಗ ವಿಚಾರಿಸಿದಾಗ ಹಣ ವರ್ಗಾವಣೆ ಆಗಿಲ್ಲ ಎಂದು ಉತ್ತರಿಸಿದ್ದಾರೆ. ಕೊನೆಗೆ ದಿಕ್ಕು ತೋಚದೆ ಪವನ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಕೆಂಡಾಮಂಡಲ
ಇಮೇಲ್ ಹ್ಯಾಕ್:ಸಿಂಗಾಪುರ್ ಕಂಪನಿಯ ಇ- ಮೇಲ್​ನ್ನು ಸೈಬರ್ ವಂಚಕರು ಹ್ಯಾಕ್ ಮಾಡಿರುವ ಸಾಧ್ಯತೆಗಳು ಹೆಚ್ಚಾಗಿದೆ. ಎರಡೂ ಕಂಪನಿಗಳು ಇ-ಮೇಲ್ ಮೂಲಕ ಎಲ್ಲ ವ್ಯವಹಾರ ನಡೆಸುತ್ತಿದ್ದವು. ಅದನ್ನು ಅರಿತ ವಂಚಕರು, ಇ-ಮೇಲ್ ಹ್ಯಾಕ್ ಮಾಡಿ ತಮ್ಮ ಬ್ಯಾಂಕ್ ಖಾತೆ ಕಳುಹಿಸಿ ಹಣ ಪಡೆದಿರುವ ಸಾಧ್ಯತೆಗಳು ಇರುವುದಾಗಿ ಸೈಬರ್ ಕ್ರೈಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಲೆಕ್ಕಾಧೀಕ್ಷಕಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + three =
Remember me
