ಬೆಂಗಳೂರು:ಮಹಿಳೆಯರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ಸಂಬಳ ಕೊಡ್ತಾರೆ..!
ಇಂತಹದ್ದೊಂದು ಆಫರ್​ ಆನ್​ಲೈನ್​ನಲ್ಲಿ ಉದ್ಯೋಗ ಹುಡುಕುವಾಗ ಅದೆಷ್ಟು ಜನರಿಗೆ ಬಂದಿದೆಯೋ ಗೊತ್ತಿಲ್ಲ. ಆದರೆ, ಅಮೃತಹಳ್ಳಿ ನಿವಾಸಿ 26 ವರ್ಷದ ಸಾಫ್ಟ್ ವೇರ್ ಇಂಜಿನಿಯರೊಬ್ಬರಿಗೆ ಇಂತಹ ಆಫರ್​ ಬಂದದ್ದೇ ತಡ ಅವರು ಹಿಂದು-ಮುಂದು ಯೋಚಿಸಿದೆ ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಸೆಕ್ಸ್ ಮಾಡಿದ್ರೆ ಸಂಬಳ ಸಿಗುತ್ತೆ ಎಂಬ ಆಸೆಯಲ್ಲಿದ್ದ ಟೆಕ್ಕಿ ಬದುಕಲ್ಲಿ ಆಗಿದ್ದೇ ಬೇರೆ.
ಏನಾಯ್ತು?:ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುವಾಗ ವೆಬ್‌ಸೈಟ್‌ವೊಂದಕ್ಕೆ ಟೆಕ್ಕಿ ಲಾಗಿನ್ ಆಗಿದ್ದರು. ವೆಬ್‌ಸೈಟ್‌ನಲ್ಲಿರುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಉದ್ಯೋಗದ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಟೆಕ್ಕಿ ಜತೆ ಮಾತನಾಡಿದ್ದ ಅಪರಿಚಿತ, ಮಹಿಳೆಯರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಕೆಲಸ ಇದೆ. ಇದಕ್ಕಾಗಿ ವೇತನ ಕೂಡ ಪಾವತಿಸಲಾಗುತ್ತದೆ ಎಂದಿದ್ದ. ಈ ಕೆಲಸಕ್ಕೆ ಟೆಕ್ಕಿ ಕೂಡ ಒಪ್ಪಿಗೆ ಸೂಚಿಸಿದ್ದರು.
ಇದನ್ನೂ ಓದಿರಿಸಮಾಧಿಯಲ್ಲಿ ಕೊಳೆಯುತ್ತಿದ್ದ ಕರ್ನಾಟಕ ಮೂಲದ ಮಗು ಶವ ತೆಗೆಸಿ ಬೇರೆಡೆಗೆ ದೂಡಿದ್ರು…
ಸೆಕ್ಸ್​ ಜಾಬ್​ ಕೊಡುವುದಾಗಿ ಹೇಳಿದವರು ನೋಂದಣಿ ಶುಲ್ಕವಾಗಿ 1,009 ರೂ., ಕಂಪನಿಯ ಸದಸ್ಯತ್ವಕ್ಕಾಗಿ 12,500 ರೂ. ಹಾಗೂ ಸ್ಟೇಟಸ್ ಕನ್ಫರ್ಮೇಶನ್ ಕೋಡ್ ಶುಲ್ಕ ಎಂದು 70 ಸಾವಿರ ರೂ. ಸೇರಿ ಒಟ್ಟು 83,500 ರೂ. ಅನ್ನು ಟೆಕ್ಕಿಯಿಂದ ಹಾಕಿಸಿಕೊಂಡಿದ್ದಾರೆ. ಹಣ ಸಂದಾಯದ ಬಳಿಕ ಟೆಕ್ಕಿ ಸಂಪರ್ಕಕ್ಕೆ ಅವರು ಸಿಕ್ಕಿಲ್ಲ.
ಉದ್ಯೋಗದ ಹೆಸರಲ್ಲಿ ವಂಚಿಸಿರುವುದು ಗೊತ್ತಾಗಿ ಟೆಕ್ಕಿ ದೂರು ಕೊಟ್ಟಿದ್ದಾರೆ. ಇವರು ಕೊಟ್ಟ ದೂರಿನ ಮೇರೆಗೆ ಈಶಾನ್ಯ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು‌ ಮಾಹಿತಿ ನೀಡಿದ್ದಾರೆ.
ವಂಚನೆಗೊಳಗಾದ ಟೆಕ್ಕಿಯು ಮಾನ್ಯತಾ ಟೆಕ್‌ಪಾರ್ಕ್‌ ಸಮೀಪದ ಖಾಸಗಿ‌ ಕಂಪನಿಯಲ್ಲಿ ಕೆಲಸ‌ ಮಾಡಿಕೊಂಡಿದ್ದಾರೆ. ಲಾಕ್‌ಡೌನ್ ಪರಿಣಾಮ ಕಂಪನಿಯಲ್ಲಿನ ಕೆಲ ಸಿಬ್ಬಂದಿಯನ್ನು ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿತ್ತು. ಮುಂಬರುವ ದಿನಗಳಲ್ಲಿ ತನ್ನನ್ನೂ ಕೆಲಸದಿಂದ ತೆಗೆದು ಹಾಕಬಹುದು ಎಂಬ ಆತಂಕದಿಂದ ಟೆಕ್ಕಿ ಬೇರೆ ಕಂಪನಿಯಲ್ಲಿ ಕೆಲಸ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಸೆಕ್ಸ್ ಜಾಬ್​ ಸೋಗಿನಲ್ಲಿನ ಸೈಬರ್​ ವಂಚಕರ ಜಾಲಕ್ಕೆ ಬಿದ್ದು 83,500 ರೂ. ಕಳೆದುಕೊಂಡಿದ್ದಾರೆ.
ಉದ್ಯೋಗ ಹುಡುಕುವ ಭರದಲ್ಲಿ ಇಂತಹ ಸೈಬರ್​ ವಂಚಕರ ಬಲೆಗೆ ಬೀಳುವ ಮುನ್ನ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕಿದೆ.
ಮಗನಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲ, ನನ್ನೊಂದಿಗೇ ಸಂಸಾರ ಮಾಡು ಬಾ ಎಂದ ಮಾವನ ವಿರುದ್ಧ ಎಫ್​ಐಆರ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + ten =
Remember me
