ಬೆಂಗಳೂರು: ಗುತ್ತಿಗೆ ಬಿಲ್​ಗಳನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಳ್ಳುವ ದುರುದ್ದೇಶದಿಂದ ತನ್ನ ಫೋಟೋಗಳನ್ನು ಮಾರ್ಪಡಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮೂವರು ಗುತ್ತಿಗೆದಾರರ ವಿರುದ್ಧ ಬಿಬಿಎಂಪಿ ಲೆಕ್ಕಾಧೀಕ್ಷಕಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಗುತ್ತಿಗೆದಾರರಾದ ಗಿರೀಶ್, ಪ್ರಮೋದ್, ಅಜಯ್ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಕೆಲಸದ ನಿಮಿತ್ತ ಕಚೇರಿಗೆ ಬರುತ್ತಿದ್ದರು. ಉತ್ತಮ ಸ್ನೇಹಿತರಂತೆ ಮಾತನಾಡಿ ಫೋಟೋಗಳನ್ನು ಮೊಬೈಲ್​ನಲ್ಲಿ ತೆಗೆದುಕೊಂಡಿದ್ದರು.
ಇದನ್ನೂ ಓದಿ:17 ಶಂಕಿತ ಐಸಿಸ್​ಗಳ ವಿರುದ್ಧ ಚಾರ್ಜ್​ಶೀಟ್​​
ಗುತ್ತಿಗೆ ಬಿಲ್​ಗಳನ್ನು ಪಾಸ್ ಮಾಡದಿದ್ದರೆ ನಿಮ್ಮ ಜತೆಯಲ್ಲಿ ಈ ಹಿಂದೆ ತೆಗೆದ ಫೋಟೊಗಳನ್ನು ಅಸಹ್ಯಕರವಾಗಿ ಮಾರ್ಪಡಿಸುವುದಾಗಿ ಬೆದರಿಕೆ ಒಡ್ಡಿದ್ದರು. ಅಲ್ಲದೆ, ಗಿರೀಶ್​ಗೂ ತನಗೂ ಅಕ್ರಮ ಸಂಬಂಧವಿದೆ ಎಂಬ ರೀತಿ ಫೋಟೋ ಮಾರ್ಪಡಿಸಿದ್ದಾರೆ ಎಂದು ಲೆಕ್ಕಾಧೀಕ್ಷಕಿ ದೂರಿದ್ದಾರೆ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಕೆಂಡಾಮಂಡಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
