ಬೆಂಗಳೂರು:ಶೌಚಗೃಹದಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಎಫ್​​ಟಿಎಸ್‌ಸಿ 1ನೇ ನ್ಯಾಯಾಲಯ ಆದೇಶಿಸಿದೆ.
ಜಯನಗರದ ಮದೀರಾಜ್ ಅಪರಾಧಿ. ಜಯನಗರ 3ನೇ ಹಂತ ಏಲಿಫೆಂಟ್ ರಾಕ್ ರಸ್ತೆಯಲ್ಲಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಕಟ್ಟಡದಲ್ಲಿ ಬ್ಯೂಟಿ ಪಾರ್ಲರ್ ಸಹ ಇತ್ತು. 2014ರ ಆಗಸ್ಟ್ 16ರ ರಾತ್ರಿ 7 ಗಂಟೆಯಲ್ಲಿ ಬ್ಯೂಟಿ ಪಾರ್ಲರ್‌ಗೆ ಬಂದಿದ್ದ ಅಪ್ರಾಪ್ತೆ, ಕಟ್ಟಡದ 1ನೇ ಮಹಡಿಯ ಶೌಚಗೃಹಕ್ಕೆ ಬಂದಿದ್ದಳು. ಇದನ್ನು ಗಮನಿಸಿದ ಮದೀರಾಜ್, ಶೌಚಗೃಹದ ಬಾಗಿಲು ತೆಗೆಯುವುದನ್ನೇ ನೋಡಿಕೊಂಡು ಒಳಗೆ ನುಗ್ಗಿ ಅಪ್ರಾಪ್ತೆಯನ್ನು ಹಿಡಿದು ದೌರ್ಜನ್ಯ ಎಸಗಿದ್ದಾನೆ.
ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಚೀರಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಬಂದು ಮದೀರಾಜ್‌ನನ್ನು ಹಿಡಿದು ಪೊಲೀಸರು ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಜಯನಗರ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಎಫ್​​ಟಿಎಸ್‌ಸಿ 1ನೇ ನ್ಯಾಯಾಲಯ ನ್ಯಾ.ಕೆ.ಎಸ್. ರೂಪಾ ಅವರು, ವಾದ-ಪ್ರತಿವಾದ ಆಲಿಸಿ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು.
ಜೋಡೆತ್ತಿನ ಗಾಡಿ ಸ್ಪರ್ಧೆಯ ‘ಕಿಂಗ್ ಸೂರ್ಯ’ ಅನಾರೋಗ್ಯದಿಂದ ಸಾವು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
