ಬೆಂಗಳೂರು:ಮಹಾಮಾರಿ ಕರೊನಾ ಸೋಂಕಿನ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರಿಗೆ ಮಸಿ ಬಳಿಯುವ ಹೇಯಕೃತ್ಯಕ್ಕೆ ದೃಷ್ಕರ್ಮಿಯೊಬ್ಬ ಯತ್ನಿಸಿದ್ದು, ಸಂತ್ರಸ್ತ ಮಹಿಳೆ ಕೋವಿಡ್ ಕೇರ್ ನೋಡಲ್ ಅಧಿಕಾರಿಗೆ ವಾಟ್ಸ್ಆ್ಯಪ್ ಮೂಲಕ ದೂರು ನೀಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿತ ಮಹಿಳೆ‌ ಮೇಲೆ ಅಪರಿಚಿತ ವೈದ್ಯನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಜು.30ರಂದು ಎಫ್​ಐಆರ್​ ದಾಖಲಾಗಿದೆ.
ಇದನ್ನೂ ಓದಿರಿಆಸ್ಪತ್ರೆಯಲ್ಲಿ ಕಾಲ ಕಳೆಯೋದು ಕಷ್ಟ ಎಂದು ಸಿಎಂ ಯಡಿಯೂರಪ್ಪ ಏನ್​ ಮಾಡಿದ್ರು ಗೊತ್ತಾ?
ಕೋವಿಡ್ ಸೋಂಕಿತರ ವಾರ್ಡಿಗೆ ಜು.25ರ ರಾತ್ರಿ 10 ಗಂಟೆ ಸುಮಾರಿನಲ್ಲಿ ಬಂದ ಪಿಪಿಇ ಕಿಟ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂದೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆಯು ಕೋವಿಡ್ ಕೇರ್ ನೋಡಲ್ ಅಧಿಕಾರಿಗೆ ವಾಟ್ಸ್ಆ್ಯಪ್ ಮೂಲಕ ದೂರು ನೀಡಿದ್ದಾರೆ. ಈ ಬಗ್ಗೆ ನೋಡಲ್ ಆಫೀಸರ್​ನಿಂದ ಆಸ್ಪತ್ರೆಯ ಟ್ರಾಮಕೇರ್ ವಿಶೇಷ ಅಧಿಕಾರಿಗೆ ದೂರು ನೀಡಲಾಗಿದೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆ ‌ಟ್ರಾಮಕೇರ್ ವಿಶೇಷ ಅಧಿಕಾರಿ ಬಾಲಾಜಿ ಪೈ ಅವರು ವಿವಿ ಪುರಂ ಠಾಣೆಯಲ್ಲಿ ಜು.30ರಂದು ಕೇಸು ದಾಖಲಿಸಿದ್ದಾರೆ.
ತನಿಖೆ ಮುಂದುವರಿಸಿರುವ ಪೊಲೀಸರು ವೈದ್ಯನ ಸೋಗಿನಲ್ಲಿ ಬಂದು ಕರೊನಾ ಸೋಂಕಿತೆಗೆ ಲೈಂಗಿಕ ಕಿರುಕುಳ ಕೊಟ್ಟ ದುಷ್ಕರ್ಮಿಗಾಗಿ ಬಲೆ ಬೀಸಿದ್ದಾರೆ.
ತಿಥಿ ಕಾರ್ಯ ಮುಗಿದ ನಂತರ ಬಂತು ಶವ, ಕೋವಿಡ್​ ಆಸ್ಪತ್ರೆಯ ಮಹಾ ಯಡವಟ್ಟು!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 × three =
Remember me
