ಉಡುಪಿ:ಮದುವೆ ಆಗುವುದಾಗಿ ಯುವತಿಯನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಯುವಕನೊಬ್ಬ ಆಕೆಗೆ ಕೈ ಕೊಟ್ಟಿದ್ದಾನೆ. ಗರ್ಭಿಣಿಯಾದ ಯುವತಿಗೆ ಬಲವಂತವಾಗಿ ಗುಳಿಗೆಗಳನ್ನು ನುಂಗಿಸಿ ಗರ್ಭಪಾತ ಮಾಡಿಸಿದ್ದು, ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿರಿಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!
ತೊಟ್ಟಂ ಪ್ರದೇಶದ ಯುವತಿಗೆ ಚಂಡೆ ತರಬೇತಿ ವೇಳೆ ಪರಿಚಯವಾದ ಕರಂಬಳ್ಳಿಯ ಅಕ್ಷಯ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಅಮಲು ಪದಾರ್ಥ‌ ನೀಡಿ ಅತ್ಯಾಚಾರ ಎಸಗಿದ್ದ. ಎಚ್ಚರಗೊಂಡ ಯುವತಿಗೆ ಮದುವೆ ಆಗುವುದಾಗಿ ನಂಬಿಸಿದ್ದ. ಆಕೆ ಗರ್ಭಿಣಿಯಾಗುತ್ತಿದ್ದಂತೆ ಗರ್ಭಪಾತದ ಗುಳಿಗೆಯನ್ನು ಕೊಟ್ಟು ಬಲವಂತವಾಗಿ ನುಂಗಿಸಿದ್ದ, ಬಳಿಕ ಉಲ್ಟಾ ಹೊಡೆದಿದ್ದಾನೆ. ಮದುವೆ ಮಾಡಿಕೊಳ್ಳುವಂತೆ ಯುವತಿ ಒತ್ತಾಯಿಸಿದಾಗ ಆಕೆಯ ಮನೆಗೆ ಬಂದು ಜೀವಬೆದರಿಕೆಯನ್ನೂ ಹಾಕಿದ್ದಾನೆ. ನೊಂದ ಯುವತಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಂಬೇಡ್ಕರ್ ಯುವಸೇನೆ ಆರೋಪಿಸಿದೆ.
ಇದನ್ನೂ ಓದಿರಿರಾಜ್ಯದಲ್ಲಿ ಮತ್ತೊಮ್ಮೆ ಲಾಕ್​ಡೌನ್​ ಆಗುತ್ತಾ, ಇಲ್ವಾ?
ಅಕ್ಷಯ್ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಮೇ 5ರಂದು ದೂರು ದಾಖಲಾದರೂ ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ. ಒಂದು ವಾರದೊಳಗೆ ಆರೋಪಿಯನ್ನು ಬಂಧಿಸಿ ಯುವತಿಗೆ ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ಯುವಸೇನೆಯ ಗೌರವ ಅಧ್ಯಕ್ಷ ಜಯನ್ ಮಲ್ಪೆ ಎಚ್ಚರಿಸಿದ್ದಾರೆ.
ಇದನ್ನೂ ಓದಿರಿಪತ್ನಿ ಜತೆಗಿದ್ದ ಪರಪುರುಷನ ಗಂಟಲು ಬಗೆದು ರಕ್ತ ಕುಡಿದ… ಬೆಚ್ಚಿ ಬೀಳೀಸುತ್ತೆ ಆರೋಪಿ ಬಾಯ್ಬಿಟ್ಟ ಸತ್ಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + four =
Remember me
