ಬೆಂಗಳೂರು:ಬೆಂಗಳೂರಿನಲ್ಲಿ 1991 ರಲ್ಲಿ ನಡೆದಿದ್ದ ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಮೊಮ್ಮಗಳು ಶಕೀರಾ ಕೊಲೆ ಪ್ರಕರಣದ ಪ್ರಧಾನ ಅಪರಾಧಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾನೆ.
ಪ್ರಕರಣದ ಅಪರಾಧಿ ಶ್ರದ್ಧಾನಂದ (83 ವರ್ಷ) ಬದುಕಿರುವವರೆಗೂ ಜೈಲಿನಲ್ಲಿರುವಂತೆ 2008ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರಸ್ತುತ ಶ್ರದ್ಧಾನಂದ ಮಧ್ಯ ಪ್ರದೇಶದ ಸಾಗರ್ ಜಿಲ್ಲಾ ಸೆಂಟ್ರಲ್ ಜೈಲಿನಲ್ಲಿದ್ದಾನೆ.
ಇದನ್ನೂ ಓದಿ:ಮೊಬೈಲ್​ ಚಾರ್ಜ್​ ಮಾಡೋ ವಿಚಾರಕ್ಕೆ ಗಲಾಟೆ, ದುರಂತ ಅಂತ್ಯ
ಸನ್ನಡತೆ ಆಧಾರದಲ್ಲಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲಿರುವ ಅಪರಾಧಿ, ಬೆಂಗಳೂರಿನ ರಿಚ್ಮಂಡ್ ರಸ್ತೆಯ 600 ಕೋಟಿ ರೂ. ಆಸ್ತಿಗಾಗಿ ಕಣ್ಣಿಟ್ಟು, ತನ್ನ ಪತ್ನಿ ಶಕೀರಾಳನ್ನು ಕೊಲೆ ಮಾಡಿದ್ದನು. ಅಪರಾಧಿ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರುಳಿ ಮನೋಹರ್ ಮಿಶ್ರಾ ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದಾನೆ.
ಪ್ರಕರಣದ ಹಿನ್ನೆಲೆ:
1986 ರಲ್ಲಿ ಶಕೀರಾ ಕಲಲಿ ಎಂಬುವರ ಜೊತೆ ಶ್ರದ್ಧಾನಂದ ವಿವಾಹವಾಗಿದ್ದನು. ಶಕೀರಾ ಕಲಲಿ ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಮೊಮ್ಮಗಳು ಕೂಡ ಹೌದು. 1991 ರಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಶಕೀರಾ, 1994 ರಲ್ಲಿ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
ಮನೆ ಹಿಂಭಾಗವೇ ಪತ್ನಿ ಹೆಣ:
ಪತ್ನಿಯನ್ನು ಹತ್ಯೆಗೈದ ಅಪರಾಧಿ ಪತಿ ಮನೆಯ ಗೋಡೆ ಹಿಂಭಾಗವೇ ಹೂತಿಟ್ಟಿದ್ದ, ನಂತರ ಪ್ರಕರಣ ಬೆಳಕಿಗೆ ಬಂದು ಆತನ ಬಂಧನವಾಯಿತು. 2000 ಇಸವಿಯಲ್ಲಿ ಕೋರ್ಟ್ ಈ ಬಗ್ಗೆ ಸೂಕ್ಷ್ಮವಾಗಿ ವಿಚಾರಣೆ ನಡೆಸಿತು. 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಶ್ರದ್ಧಾನಂದ, ಬಳಿಕ ಬೆಂಗಳೂರಿನ ಪರಪ್ಪನ ಅಗ್ರಗಾರ ಜೈಲಿನಲ್ಲಿದ್ದನು. 2011 ರಲ್ಲಿ ಆತನ ಮನವಿ ಮೇರೆಗೆ ಮಧ್ಯಪ್ರದೇಶದ ಜೈಲಿಗೆ ಆತನನ್ನು ಶಿಫ್ಟ್ ಮಾಡಲಾಗಿತ್ತು.
ಕರುನಾಡಿಗೆ ‘ಅಕ್ಕಪಕ್ಕ’ದ ಕಂಟಕ: ರಾಜ್ಯಕ್ಕೆ ಅಪ್ಪಳಿಸೇಬಿಡ್ತಾ ಕರೊನಾ ಮೂರನೇ ಅಲೆ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
