ಬೆಂಗಳೂರು:ಕಾಂಗ್ರೆಸ್ ಸರ್ಕಾರ ಆರಂಭ ಮಾಡಿದ ಶಕ್ತಿ ಯೋಜನೆಯ ಉಚಿತ ಸಾರಿಗೆ ಬಸ್ ಪ್ರಯಾಣ ಮಹಿಳೆಯರಿಗೆ ಸಹಾಯಕಾರಿಯಾಗಿದೆ. ದೇವಸ್ಥಾನ, ಪ್ರವಾಸ ಎಂದು ಹೋಗುತ್ತಿರುವುದರ ಜತೆಗೆ ಅಪ್ಪು ಸಮಾಧಿ ಭೇಟಿಗಾಗಿ ಮಹಿಳೆಯರು ಬರುತ್ತಿದ್ದಾರೆ.
ಸ್ಯಾಂಡಲ್​ವುಡ್​​ ನಟ ಪುನೀತ್​ ರಾಜ್​ಕುಮಾರ್​​ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಅಗಲಿ ವರ್ಷಗಳೇ ಕಳೆದಿದೆ. ಆದರೆ ಫ್ಯಾನ್ಸ್​ಗೆ ಇರುವ ಕ್ರೇಜ್​​ ಮಾತ್ರ ಕಡಿಮೆಯಾಗಿಲ್ಲ. ಉಚಿತ ಬಸ್​​ ಹಿನ್ನೆಲೆ ಅಪ್ಪು ಸಮಾಧಿ ನೋಡಲು ಮಹಿಳಾ ಅಭಿಮಾನಿಗಳ ದಂಡು ಪ್ರತಿನಿತ್ಯ ಆಗಮಿಸುತ್ತಿದೆ.
ಬಸ್ ಫ್ರೀ ನಂತ್ರ ಅಪ್ಪು ಸಮಾಧಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ವೀಕೆಂಡ್​​​ನಲ್ಲೂ ಜನವೋ ಜನ. ಉತ್ತರ ಕರ್ನಾಟಕದ ಹೆಚ್ಚು ಅಭಿಮಾ‌ನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ:ಭೀಕರ ಅಪಘಾತ: ಮಿನಿ ಬಸ್​ಗೆ ಮತ್ತೊಂದು ವಾಹನ ಡಿಕ್ಕಿ, ಒಬ್ಬ ಸ್ಥಳದಲ್ಲೇ ಸಾವು
ಅಪ್ಪು ಸಮಾಧಿ ನೋಡಲು ಮೊಮ್ಮಗಳ ಜತೆ ಅಜ್ಜಿಯೊಬ್ಬರು ಬಂದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ‘ಅಜ್ಜಿ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಜ್ಜಿ ಆಸೆಯನ್ನು ಈಡೇರಿಸಿದ ಮೊಮ್ಮಗಳು ಮಾತನಾಡಿ, ಮನೆಯಲ್ಲಿ ಅಪ್ಪು ಸಿನಿಮಾ ಬಂದರೆ ಚಾನಲ್ ಚೇಂಜ್ ಮಾಡೋಕೆ ಬಿಡೊಲ್ಲ. ಅದ್ಕೆ ಅಜ್ಜಿಗೋಸ್ಕರ ದೂರದಿಂದ ಬಂದಿದ್ದೇವೆ’ ಎಂದಿದ್ದಾರೆ.
‘ಬಸ್ ಫ್ರೀ ಇದೆ ಅದ್ಕೆ ಫ್ಯಾಮಿಲಿ ಸಮೇತ ಬಂದಿದ್ದೇವೆ. ಕಾಂಗ್ರೆಸ್​​ ಯೋಜನೆಯಿಂದ ಬರೋಕೆ ಸುಲಭ ಆಯ್ತು’ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇತ್ತ ವ್ಯಾಪಾರವೂ ಡಬಲ್ ಆಗಿದೆ ಎಂದು ಅಂಗಡಿಯವರು ಖುಷಿ ಹಂಚಿಕೊಂಡಿದ್ದಾರೆ.
ಕರಿಬೇವಿನ ಎಲೆಗಳು ಒಗ್ಗರಣೆಗೆ ಮಾತ್ರವಲ್ಲ, ಈ ರೀತಿಯಾಗಿಯೂ ಬಳಸಬಹುದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 1 =
Remember me
