|ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಈ ಸರಣಿಯ ಇಂದಿನ ಅಂಕಣದಲ್ಲಿ ಬೆನ್ನಿನ ಕೆಳಭಾಗದ ಸ್ನಾಯುಗಳನ್ನು ಬಲಗೊಳಿಸುವ, ಅದರಲ್ಲೂ ಕೆಳಗಿನ ಬೆನ್ನು, ಹೊಟ್ಟೆ, ಯಕೃತ್ತು, ಮತ್ತು ಕರುಳಿನ ಉತ್ತಮ ಕಾರ್ಯನಿರ್ವಹಣೆಗೆ ಪೂರಕವಾಗುವ ಶಲಭಾಸನ ವಿನ್ಯಾಸ ಭಂಗಿ ವಿವರಣೆ ನೀಡಲಾಗುತ್ತಿದೆ.
ಶಲಭ ಎಂದರೆ ಮಿಡತೆ. ಈ ಆಸನದ ಭಂಗಿ ಮಿಡತೆಯನ್ನು ಹೋಲುವುದರಿಂದ ಶಲಭಾಸನ ಎಂದು ಹೆಸರು ಬಂದಿದೆ. ಲೋಕಸ್ಟ್ ಪೋಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಶಲಭಾಸನ ಪೆಲ್ವಿಕ್ ಅಂಗಗಳನ್ನು ಬಲಪಡಿಸುತ್ತದೆ. ಶಲಭಾಸನ ಮಧ್ಯಂತರ ಬ್ಯಾಕ್ ಬೆಂಡ್ ಭಂಗಿಯಾಗಿದೆ. ಆಧುನಿಕ ಜೀವನ ಶೈಲಿಯಿಂದಾಗಿ ಬರುವ ಸೊಂಟ ನೋವು ಬೆನ್ನುನೋವುಗಳ ನಿಯಂತ್ರಣಕ್ಕೆ ಯೋಗಾಸನಗಳು ಸಹಕಾರಿಯಾಗುತ್ತದೆ.
ಪ್ರಯೋಜನಗಳು:ಈ ಆಸನದಿಂದ ಮುಖ್ಯವಾಗಿ ಬೆನ್ನಿನ ಕೆಳಭಾಗದ ಸ್ನಾಯುಗಳು ಬಲಗೊಳ್ಳುತ್ತವೆ, ಬೆನ್ನುಮೂಳೆ ದೃಢಗೊಳ್ಳುತ್ತದೆ. ಶಲಭಾಸನದಿಂದ ತೊಡೆ, ಮಂಡಿ, ಕಾಲುಗಳ ತೊಂದರೆ ನಿವಾರಣೆಯಾಗುತ್ತದೆ. ಮಧುಮೇಹದ ಹತೋಟಿಗೆ ಈ ಆಸನ ಸಹಕಾರಿಯಾಗುತ್ತದೆ. ಭುಜ ಮತ್ತು ಕುತ್ತಿಗೆ ಸ್ನಾಯುಗಳು ಬಲಗೊಳ್ಳುತ್ತವೆ. ಮೂತ್ರ ಜನಕಾಂಗಗಳು ಸಚೇತನಗೊಳ್ಳುತ್ತವೆ. ಸೊಂಟಕ್ಕೆ ಉತ್ತಮ ವ್ಯಾಯಾಮ ದೊರಕಿ ಬಲಿಷ್ಠಗೊಳ್ಳುವುವು. ಆದರೆ ಹೃದಯದ ಸಮಸ್ಯೆ ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ.
ಇದು ಕೆಳಗಿನ ಬೆನ್ನನ್ನು ಬಲಪಡಿಸುತ್ತದೆ. ಹೊಟ್ಟೆ, ಯಕೃತ್ತು ಮತ್ತು ಕರುಳಿನ ಉತ್ತಮ ಕಾರ್ಯನಿರ್ವಹಣೆಗೆ ಸಹಕಾರಿಯಾಗುವ ಈ ಆಸನ ಬೆನ್ನುನೋವು, ಸ್ಲಿಪ್ ಡಿಸ್ಕ್ ಮತ್ತು ಸಿಯಾಟಿಕಾದಿಂದ ಬಳಲುತ್ತಿರುವ ಜನರಿಗೆ ಉಪಯುಕ್ತ. ಈ ಆಸನದಿಂದ ಹೊಟ್ಟೆಯ ಅಂಗಗಳು ಬಲಗೊಳ್ಳುತ್ತವೆ. ಇದು ಪೃಷ್ಠದ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ. ಹಸಿವು ಉತ್ತಮಗೊಳ್ಳುತ್ತದೆ. ಕಿಬ್ಬೊಟ್ಟೆಯ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ಕತ್ತಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಮೂತ್ರದ ಕಾಯಿಲೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಶೇಷ ಸೂಚನೆ:ತೀವ್ರ ಸೊಂಟ ನೋವು ಇದ್ದವರು ಹಾಗೂ ಹೃದಯದ ಸಮಸ್ಯೆ ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ.
ಪೇದೆಯನ್ನು ನಂಬಿ ಗಂಡನ ಬಿಟ್ಟ ಮಹಿಳೆಯ ಬಾಳೇ ಈಗ ಗೋಳು: ಕಾನ್​ಸ್ಟೆಬಲ್​ ಕಿತಾಪತಿ ಒಂದೆರಡಲ್ಲ..
Sign in to your account
Please enter an answer in digits:eighteen − 1 =
Remember me
